More

    ಮೋಟಾರು ವಾಹನ ತೆರಿಗೆ ಇಳಿಕೆ: ಸಾರಿಗೆ ಸಂಘಗಳ ಬೇಡಿಕೆಗೆ ಸ್ಪಂದಿಸಿದ ಸರ್ಕಾರ

    ಬೆಂಗಳೂರು: ರಾಜ್ಯದಲ್ಲಿ ಸಂಚರಿಸುವ 13ರಿಂದ 20 ಆಸನ ಸಾಮರ್ಥ್ಯದ ಮ್ಯಾಕ್ಸಿಕ್ಯಾಬ್ ಹಾಗೂ ಟ್ಯಾಕ್ಸಿಗಳಿಗೆ ಪ್ರತಿ ಆಸನಕ್ಕೆ ವಿಧಿಸಲಾಗಿದ್ದ 900 ರೂ. ಮೋಟಾರು ವಾಹನ ತೆರಿಗೆಯನ್ನು 700 ರೂ.ಗೆ ಇಳಿಕೆ ಮಾಡಿ ಸರ್ಕಾರ ಆದೇಶಿಸಿದೆ.

    ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಅಧಿನಿಯಮ 1957 ಕಲಂ 16 (1) ಅಡಿಯಲ್ಲಿ ಮೋಟಾರು ವಾಹನ ತೆರಿಗೆ ಇಳಿಕೆ ಮಾಡಲಾಗಿದೆ. ಪ್ರತಿ ಆಸನಕ್ಕೆ ವಿಧಿಸಿರುವ 900 ರೂ. ತೆರಿಗೆ ದುಬಾರಿಯಾಗಿದ್ದು, ಅದನ್ನು ಇಳಿಕೆ ಮಾಡಬೇಕು. ಕರೊನಾದಿಂದ ಉದ್ಯಮ ಸಂಕಷ್ಟದಲ್ಲಿದ್ದು, ತೆರಿಗೆ ಇಳಿಕೆಯಿಂದ ಸಹಕಾರಿಯಾಗಲಿದೆ ಎಂದು ವಿವಿಧ ಟ್ರಾವೆಲ್ ಸಂಘಗಳು ಸರ್ಕಾರವನ್ನು ಆಗ್ರಹಿಸಿದ್ದವು.

    ಇದನ್ನೂ ಓದಿ: ಮಾಸ್ಕ್ ಧರಿಸದವರಿಗೆ ದಂಡ: 200 ರೂ.ನಿಂದ 1 ಸಾವಿರ ರೂ.ಗೆ ಶೀಘ್ರ ಹೆಚ್ಚಳ!

    ಅದಕ್ಕೆ ಸ್ಪಂದಿಸಿರುವ ಸರ್ಕಾರ, ತೆರಿಗೆ ಇಳಿಕೆ ಮಾಡಿದೆ. ರಾಜ್ಯ ಟ್ರಾವೆಲ್ ಆಪರೇಟರ್​ಗಳ ಸಂಘ, ಪ್ರವಾಸಿ ವಾಹನ ಮಾಲೀಕರ ಸಂಘ, ಮ್ಯಾಕ್ಸಿಕ್ಯಾಬ್ ಮಾಲೀಕರ ಸಂಘ ಸೇರಿ ಇನ್ನಿತರ ಸಂಘಗಳು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿವೆ.

    ಜಾಮೀನಿಗೆ ಅರ್ಜಿ ಹಾಕುವುದಿಲ್ಲ, ನನ್ನನ್ನು ಗಲ್ಲಿಗೇರಿಸಿದರೂ ಸರಿ: ಉಮಾಭಾರತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts