More

    ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಿಳೆಗೆ ತಾಯ್ತನದ ಭಾಗ್ಯ

    ಹುಬ್ಬಳ್ಳಿ: ಸಂತಾನ ಶಕ್ತಿ ತಡೆ ಶಸ್ತ್ರಚಿಕಿತ್ಸೆ ಪಡೆದಿದ್ದ ಮಹಿಳೆಯೊಬ್ಬರಿಗೆ ಬರೋಬ್ಬರಿ 20 ವರ್ಷದ ನಂತರ ಮತ್ತೆ ತಾಯ್ತನ ಭಾಗ್ಯ ಒಲಿದಿದೆ.

    ಈ ಸಂತಸ ಪಡೆದವರು 42 ವಯಸ್ಸಿನ ಶೋಭಾ ಹಾವೇರಿ. ಮೂಲತಃ ಕುಂದಗೋಳ ತಾಲೂಕಿನ ಸಂಶಿ ಗ್ರಾಮದವರು. ಮೊದಲ ಹೆಣ್ಣು ಮಗುವಾದ ಬಳಿಕ ಶೋಭಾ ಸಂತಾನ ಶಕ್ತಿ ತಡೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. 18 ವರ್ಷದ ಮಗಳು ಕಾಲೇಜ್​ಗೆ ಹೋಗುತ್ತಿದ್ದಳು. ಹೃದಯದಲ್ಲಿ ರಂಧ್ರವಿದ್ದ ಕಾರಣ ಆಕೆ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದಳು. ನಂತರ ಸಂತಾನ ಭಾಗ್ಯವೇ ಇಲ್ಲವೆಂದು ವ್ಯಥೆ ಪಡುತ್ತಿದ್ದರು ಶೋಭಾ. ಆಗ ‘ನಿಮಗೆ ಮಗು ಆಗಿಯೇ ಆಗುತ್ತದೆ ಚಿಂತೆ ಬಿಡಿ’ ಎಂದು ಧೈರ್ಯ ತುಂಬಿದವರೇ ಇಲ್ಲಿನ ಪಾಲಿಕೆ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ.

    ಡಾ. ಶ್ರೀಧರ ನೇತೃತ್ವದಲ್ಲಿ ಶೋಭಾಗೆ ‘ಲ್ಯಾಪ್ರೋಸ್ಕೊಪಿಕ್ ಟ್ಯುಬಲ್ ರೀಕ್ಯಾನಲೈಜೇಷನ್‘ ಮಾಡಲಾಯಿತು. ಗರ್ಭನಾಳವನ್ನು ಮರುಜೋಡಣೆ ಮಾಡಿ ಸಂತಾನ ಶಕ್ತಿಗೆ ಮರು ಜನ್ಮ ನೀಡಿದರು. ಪ್ರತಿ ತಿಂಗಳು ಗರ್ಭಿಣಿಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು. ನ. 23ರಂದು ಈ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ನನಗೆ ತಾಯ್ತನ ಭಾಗ್ಯವಿಲ್ಲವೆಂದೇ ಭಾವಿಸಿದ್ದೆ. ವೈದ್ಯರ ಸಲಹೆ ಮೇರೆಗೆ ಮತ್ತೆ ಮನೆಗೆ ಮಹಾಲಕ್ಷ್ಮೀ ಬಂದಿದ್ದಾಳೆ. ಇಡೀ ಕುಟುಂಬ ಸಂತಸದಲ್ಲಿದೆ.

    | ಶೋಭಾ ಹಾವೇರಿ, 2ನೇ ಮಗುವಿಗೆ ಜನ್ಮ ನೀಡಿದ ಮಹಿಳೆ

    ಇಂಥ ಪ್ರಕರಣ ಯಶಸ್ವಿ ಆಗುವುದು ಅಪರೂಪ. ಶೋಭಾ ಗರ್ಭಿಣಿ ಇದ್ದ ವೇಳೆ ಕೋವಿಡ್ ಪಾಸಿಟಿವ್ ಬಂದಿತ್ತು. ಇದಕ್ಕೆ ಚಿಕಿತ್ಸೆ ಮಾಡಿದ ಬಳಿಕ ಬಿಪಿ ಜಾಸ್ತಿಯಾಗಿತ್ತು. ಇದಕ್ಕೂ ಔಷಧ ನೀಡಲಾಯಿತು. ತಾಯಿ ಮತ್ತು ಮಗು ಚೆನ್ನಾಗಿದ್ದಾರೆ.

    | ಡಾ. ಶ್ರೀಧರ ದಂಡಪ್ಪನವರ, ಪಾಲಿಕೆ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts