More

    ಗುಣಮಟ್ಟದ ಶಿಕ್ಷಣಕ್ಕೆ ಮಾತೃಭಾಷೆ ಪೂರಕ

    ಶಿವಮೊಗ್ಗ: ಬಹುಭಾಷಾ ಕಲಿಕೆ ಹಾಗೂ ತಂತ್ರಜ್ಞಾನ ಬಳಕೆಯ ಸವಾಲುಗಳ ಜತೆಯಲ್ಲಿ ಶಿಕ್ಷಣ ಮತ್ತು ನಿತ್ಯಜೀವನದಲ್ಲಿ ಮಾತೃಭಾಷೆ ಬಳಕೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅಭಿಪ್ರಾಯಪಟ್ಟರು.

    ಜಿಲ್ಲಾ ಕಸಾಪ ಹಾಗೂ ಸಹ್ಯಾದ್ರಿ ಕಲಾ ಕಾಲೇಜು ಸ್ನಾತಕೋತ್ತರ ಭಾಷಾ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ವಿಶ್ವ ಮಾತೃಭಾಷೆ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕೆಗೆ ಮಾತೃಭಾಷೆ ಪೂರಕ. ಪ್ರಪಂಚದ ಎಲ್ಲ ಭಾಷೆಗಳೂ ಉಳಿಯಬೇಕು. ಮುಂದಿನ ತಲೆಮಾರಿಗೆ ಅವುಗಳನ್ನು ಸಮರ್ಥವಾಗಿ ತಲುಪಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಅದುವೇ ಮಾತೃಭಾಷೆ ದಿನಾಚರಣೆಯ ಆಶಯ ಎಂದರು.
    ಸಹ್ಯಾದ್ರಿ ಕಲಾ ಕಾಲೇಜು ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ. ಸಿರಾಜ್ ಅಹಮದ್ ಮಾತನಾಡಿ, ವಿವಿಧ ಭಾಷೆಯ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಒಂದೆಡೆ ಸೇರಿ ಮಾತೃಭಾಷೆ ದಿನ ಆಚರಿಸುತ್ತಿರುವುದನ್ನು ಭಾಷಾ ಸಂಗಮ ಎಂದು ಕರೆದರೂ ಉತ್ಪ್ರೇಕ್ಷೆಯಲ್ಲ ಎಂದು ಹೇಳಿದರು.
    ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಚಂದ್ರಗುತ್ತಿ ಮಾತನಾಡಿ, ಯಾವ ಭಾಷೆಯೂ ಮಲಿನವಲ್ಲ. ಎಲ್ಲ ತಾಯಂದಿರೂ ಮಕ್ಕಳಿಗೆ ಭಾಷೆ ಕಲಿಸುತ್ತಾರೆ. ತಾಯಿ ತಾಯ್ನುಡಿ ಬರೀ ಭಾಷೆಯಲ್ಲ, ಅಲ್ಲಿ ಕರಳುಬಳ್ಳಿಯ ಗಟ್ಟಿ ಸಂಬಂಧವಿದೆ ಎಂದು ವಿವರಿಸಿದರು.
    ಸಂಸ್ಕೃತ ವಿಭಾಗದ ಶೋಭಾ ಭಟ್, ಅರ್ಥಶಾಸ್ತ್ರ ವಿಭಾಗದ ಪ್ರೊ. ಮುದುಕಪ್ಪ, ರಾಜ್ಯ ಶಾಸ್ತ್ರದ ಪ್ರೊ. ಚಂದ್ರಪ್ಪ ಮಾತನಾಡಿದರು. ಪ್ರಾಚಾರ್ಯ ಪ್ರೊ. ಸೈಯದ್ ಸನಾವುಲ್ಲಾ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts