More

    ಉಗ್ರರ ನೇಮಕಾತಿ ಮಾಡಿಕೊಳ್ಳುತ್ತಿದ್ದ ಉಗ್ರನ ತಾಯಿ ಅಂದರ್​

    ಶ್ರೀನಗರ: ತನ್ನ ಪುತ್ರನನ್ನು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿದ್ದಲ್ಲದೆ, ಆತ ಸತ್ತ ನಂತರದಲ್ಲಿ ಭಯೋತ್ಪಾದನಾ ಚಟುವಟಿಕೆ ಮುಂದುವರಿಸಲು ಯುವಕರ ನೇಮಕಾತಿಯಲ್ಲಿ ತೊಡಗಿದ್ದ ಮಹಿಳೆಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

    ರಾಮ್​ಪೋರಾ ಖೈಮ್ಹೋದ ನಿವಾಸಿ ನಸೀಮಾ ಬಾನೂ ಬಂಧಿತೆ. ಈಕೆಯನ್ನು ಜೂ.20ರಂದು ಬಂಧಿಸಲಾಗಿದ್ದು, ಅಕ್ರಮ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ವಿವಿಧ ಆರೋಪಗಳನ್ನು ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಪ್ರಖ್ಯಾತ ಬೆಲ್ಲಿ ಡಾನ್ಸರ್​ಗೆ ಮೂರು ವರ್ಷ ಜೈಲು ಶಿಕ್ಷೆ, ಆಕೆ ಮಾಡಿದ ತಪ್ಪಾದರೂ ಏನು?

    ಭಯೋತ್ಪಾದನಾ ಸಂಘಟನೆಯ ಸದಸ್ಯನಾಗಿ, ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡಿರುವ ಪುತ್ರನ ಪಕ್ಕದಲ್ಲಿ ಕುಳಿತ ಈ ಮಹಿಳೆ ಫೋಟೋಗೆ ಫೋಸ್​ ಕೊಟ್ಟಿದ್ದಳು. ಅಲ್ಲದೆ, ಭಯೋತ್ಪಾದನಾ ಕೃತ್ಯ ಎಸಗಲು ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಜತೆಗೆ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಅನುವಾಗುವಂತೆ ಇಬ್ಬರು ಯುವಕರನ್ನು ನೇಮಿಕೊಂಡಿದ್ದಳು. ಈ ಎಲ್ಲ ಕಾರಣಗಳಿಗಾಗಿ ಆಕೆಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

    ಹತನಾದ ಉಗ್ರನ ತಾಯಿ ಎಂಬ ಒಂದೇ ಕಾರಣಕ್ಕೆ ಆಕೆಯನ್ನು ಬಂಧಿಸಬಾರದು ಎಂದೇನಿಲ್ಲ. ಆಕೆ ಉಗ್ರನಾಗಿದ್ದು, ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ಕುಳಿತಿರುವ ಪುತ್ರನ ಪಕ್ಕದಲ್ಲಿ ಕುಳಿತು ಆಕೆ ಫೋಟೋಗೆ ಫೋಸ್​ ಕೊಟ್ಟಿದ್ದಾಳೆ. ಆಕೆಯನ್ನು ಬಂಧಿಸಲು ಇದೊಂದು ಕಾರಣ ಸಾಕು. ಆಕೆಯ ಪರವಾಗಿರುವವರು ಆಕೆಯ ಬಂಧನವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲಿ ಎಂದು ಸವಾಲು ಹಾಕಿದ್ದಾರೆ.

    ವಿರಾಟ್​ ಕೊಹ್ಲಿ, ಧೋನಿ, ರೋಹಿತ್​ ಶರ್ಮಾ….: ಈ ಮೂವರ ನಡುವಿನ ವ್ಯತ್ಯಾಸ ಬಿಚ್ಚಿಟ್ಟ ಪಾರ್ಥಿವ್​ ಪಟೇಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts