More

    ಮಕ್ಕಳ ಮುಂದೆ ಬೆತ್ತಲಾಗಿ ಛೀಮಾರಿ ಹಾಕಿಸಿಕೊಂಡಿದ್ದ ರೆಹಾನಾಳ ವಿರುದ್ಧ ತಾಯಿಯಿಂದಲೇ ದೂರು ದಾಖಲು!

    ಕೊಚ್ಚಿ: ತನ್ನ ಮಕ್ಕಳ ಕೈಯಲ್ಲಿ ಅರೆಬೆತ್ತಲೆ ದೇಹದ ಮೇಲೆ ಡ್ರಾಯಿಂಗ್​ ಮಾಡಿಸಿಕೊಳ್ಳುವ ಮೂಲಕ ಭಾರಿ ವಿವಾದಕ್ಕೀಡಾಗಿದ್ದ ಹಾಗೂ ಆಗಾಗ ಹಿಂದುಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹ ಭಾವನೆಗಳನ್ನು, ನಡವಳಿಕೆಗಳನ್ನು ಪ್ರದರ್ಶಿಸುವ ಹೋರಾಟಗಾರ್ತಿ ರೆಹನಾ ಫಾತಿಮಾ ವಿರುದ್ಧ ಅವರ ತಾಯಿಯೇ ಇದೀಗ ದೂರು ದಾಖಲಿಸಿದ್ದಾರೆ.

    ರೆಹನಾ ತಾಯಿ ಪ್ಯಾರಿ ಅವರು ಆಲಪ್ಪುಳ ನಾರ್ಥ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿರುವ ಆರೋಪ ಮಾಡಿದ್ದಾರೆ.

    ಮಕ್ಕಳ ಮುಂದೆ ಬೆತ್ತಲಾಗಿ ಛೀಮಾರಿ ಹಾಕಿಸಿಕೊಂಡಿದ್ದ ರೆಹಾನಾಳ ವಿರುದ್ಧ ತಾಯಿಯಿಂದಲೇ ದೂರು ದಾಖಲು!

    ಮಗಳು ರೆಹನಾ ಮತ್ತು ಅಳಿಯನ ಜೊತೆ ಎರ್ನಾಕುಲಂನ ಫ್ಲ್ಯಾಟ್​ನಲ್ಲಿ ಇರುವಾಗ ನನಗೆ ತುಂಬಾ ಕಿರುಕುಳ ನೀಡಿದ್ದಾರೆ. ಇದರಿಂದಾಗಿ ನಾನು ಆಲಪ್ಪುಳದಲ್ಲಿರುವ ನನ್ನ ಸಂಬಂಧಿಕರ ಮನೆಗೆ ಸ್ಥಳಾಂತರವಾಗಿದ್ದೇನೆ. ಕಳೆದ ಎರಡು ತಿಂಗಳಿಂದ ಸಂಬಂಧಿಕರ ಮನೆಯಲ್ಲೇ ಉಳಿದಿದ್ದೇನೆ. ಆದರೆ, ರೆಹನಾ ಅಲ್ಲಿಗೂ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ದೂರಿನಲ್ಲಿ ಪ್ಯಾರಿ ಅವರು ಉಲ್ಲೇಖಿಸಿದ್ದಾರೆ.

    ಮಗಳ ಜೊತೆ ಬಾಳಲು ಆಸಕ್ತಿ ಇಲ್ಲ ಎಂದಿರುವ ಪ್ಯಾರಿ, ರೆಹಾನಾಗೆ ತನ್ನ ಸಂಬಂಧಿಕರಿಗೆ ತೊಂದರೆ ಮಾಡದಂತೆ ಎಚ್ಚರಿಕೆ ನೀಡುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ದೂರಿನ ಆಧಾರದ ಮೇಲೆ ಅಲಪ್ಪುಳ ನಾರ್ಥ್​ ಪೊಲೀಸರು ರೆಹನಾ ಫಾತಿಮಾ ಅವರನ್ನು ಠಾಣೆಗೆ ಕರೆಸಿ, ಯಾವುದೇ ರೀತಿಯಲ್ಲಿ ತಾಯಿಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.

    ಮಕ್ಕಳ ಮುಂದೆ ಅರೆಬೆತ್ತಲಾಗಿದ್ದ ರೆಹನಾ
    2020ರ ಜೂನ್​ 19ರಂದು ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ಬಾಡಿ ಆರ್ಟ್ಸ್​ ಪಾಲಿಟಿಕ್ಸ್​ (#BodyArtPolitics) ಎಂಬ ಅಡಿಬರಹದೊಂದಿಗೆ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದರು. ವಿಡಿಯೋದಲ್ಲಿ ರೆಹನಾ ತನ್ನ ಮಗ ಹಾಗೂ ಮಗಳ ಕೈಯಿಂದ ಅರೆಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ದೃಶ್ಯವಿದೆ. ವಿಡಿಯೋ ಮಾಡಿದ್ದರ ಉದ್ದೇಶದ ಬಗ್ಗೆ ತಿಳಿಸಿದ್ದ ರೆಹನಾ, ಲೈಂಗಿಕತೆ ಮತ್ತು ನಗ್ನತೆ ನಿಷೇಧವಾಗಿರುವ ಸಮಾಜದಲ್ಲಿ ಮಹಿಳೆಯರು ಲೈಂಗಿಕತೆ ಮತ್ತು ಅವರ ದೇಹದ ಬಗ್ಗೆ ಮುಕ್ತವಾಗಿರಬೇಕು ಎಂದು ಪುನರುಚ್ಚರಿಸುವುದಕ್ಕಾಗಿ ಈ ವಿಡಿಯೋವನ್ನು ಮಾಡಿದ್ದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ದೂರು ದಾಖಲಾಗಿತ್ತು. ಅಲ್ಲದೆ, ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಆಯೋಗವು ಸಹ ಮಧ್ಯಪ್ರವೇಶಿಸಿತ್ತು. ಇದರ ನಡುವೆ ರಾಜ್ಯ ಸರ್ಕಾರ ರೆಹಾನಾ ಜಾಮೀನು ನೀಡದಂತೆ ಅರ್ಜಿಯನ್ನು ಸಲ್ಲಿಸಿತ್ತು.

    ರೆಹನಾ ಅವರು ಬಿಎಸ್​ಎನ್​ಎಲ್​ ಮಾಜಿ ಉದ್ಯೋಗಿಯಾಗಿದ್ದು, ಅಯ್ಯಪ್ಪ ಭಕ್ತರ ನಂಬಿಕೆಗೆ ನೋವುಂಟು ಮಾಡುವ ಫೇಸ್​ಬುಕ್​ ಪೋಸ್ಟ್​ ಹಾಕಿದ ಆರೋಪದಲ್ಲಿ ಈ ಹಿಂದೆ ಬಂಧಿತರಾಗಿ 18 ದಿನ ಜೈಲುವಾಸ ಅನುಭವಿಸಿದ್ದರು. ಅಲ್ಲದೆ, ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ 2018ರ ಅಕ್ಟೋಬರ್​ನಲ್ಲಿ ರೆಹನಾ ಸಹ ಶಬರಿಮಲೆಗೆ ಭೇಟಿ ನೀಡುವ ಪ್ರಯತ್ನ ಮಾಡಿ, ಬಂಧಿತರಾಗಿ ಬಿಡುಗಡೆಯಾಗಿದ್ದರು. (ಏಜೆನ್ಸೀಸ್​)

    ಅರೆಬೆತ್ತಲೆ ದೇಹದ ಮೇಲೆ ಮಕ್ಕಳು ಡ್ರಾಯಿಂಗ್ ಮಾಡಿದ್ದರಲ್ಲಿ ಅಶ್ಲೀಲತೆ ಏನಿದೆ? ಸರ್ಕಾರಕ್ಕೆ ರೆಹನಾ ತಿರುಗೇಟು!

    ನಾಲ್ಕು ಗೋಡೆಗಳ ನಡುವೆ ಇರಲಿ: ಮಕ್ಕಳ ಮುಂದೆ ಅರೆಬೆತ್ತಲೆಯಾದ ರೆಹಾನಾಗೆ ಹೈಕೋರ್ಟ್​ ಶಾಕ್! ​

    ರೆಹಾನಾ ಫಾತಿಮಾ ಬಾಯಿಗೆ ಬಿತ್ತು ‘ಬೀಗ’ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts