More

    ತಾಳ್ಮೆ, ವಾತ್ಸಲ್ಯದ ಪ್ರತೀಕ ತಾಯಿ

    ಶಿವಮೊಗ್ಗ: ಜಗತ್ತಿನ ಸೃಷ್ಟಿಗೆ ಕಾರಣಳಾದ ತಾಯಿ ತಾಳ್ಮೆ ಮತ್ತು ವಾತ್ಸಲ್ಯದ ಪ್ರತೀಕ. ಆಕೆ ದೊಡ್ಡ ಶಕ್ತಿಯೂ ಹೌದು ಎಂದು ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

    ಬಸವ ಕೇಂದ್ರದಲ್ಲಿ ಸರ್ಜಿ -Ëಂಡೇಶನ್ ಹಾಗೂ ಅಭ್ಯುದಯ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾರಿಯರಿಗೊಂದು ನಮನ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರನ್ನು ಸನ್ಮಾನಿಸಿ ಆಶೀರ್ವಚನ ನೀಡಿ, ಜಗತ್ತಿನಲ್ಲಿ ಅತ್ಯಂತ ಸಹನೆ ಇರೋದು ಭೂಮಿಗೆ ಮಾತ್ರ. ಅದರಂತೆ ತಾಳ್ಮೆ ಇರುವುದು ತಾಯಿಗೆ ಮಾತ್ರ. ಮನೆ ನಿರ್ವಹಣೆ, ಮಕ್ಕಳ ಲಾಲನೆ-ಪಾಲನೆ ಹೀಗೆ ಎಲ್ಲ ಜವಾಬ್ದಾರಿಯೊಂದಿಗೆ ಕುಟುಂಬ ನಿಭಾಯಿಸುವುದರಲ್ಲಿ ಆಕೆ ಅತ್ಯಂತ ಸಹನಾಮಯಿ ಎಂದರು.
    ಸರ್ಜಿ -Ëಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಮಾತನಾಡಿ, ಶಿವಮೊಗ್ಗ ಜಿ¯್ಲೆಯು ಸಾಹಿತ್ಯಿಕ, ಸಾಂಸ್ಕೃತಿಕವಾಗಿ ನಾಡಿಗೆ ಅಪಾರ ಕೊಡುಗೆ ನೀಡಿದೆ. ಹೋರಾಟದ ದೃಷ್ಟಿಯಿಂದ ನೋಡುವುದಾದರೆ ವೀರ ಮಹಿಳೆ ಕೆಳದಿ ಚೆನ್ನಮ್ಮ, ಸಾಹಿತ್ಯಿಕವಾಗಿ ಮೊದಲ ಕವಿಯತ್ರಿ ಅಕ್ಕಮಹಾದೇವಿ, ಶರಣೆ ಸತ್ಯಕ್ಕ ಹೀಗೆ ದೊಡ್ಡ ಪಟ್ಟಿಯೇ ಇದೆ ಎಂದರು.
    ಆಯ್ದ ಸರ್ಕಾರಿ ಶಾಲಾ ಮಕ್ಕಳಿಗೆ ನಾರಿಶಕ್ತಿ ಎಂಬ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರದಲ್ಲಿನ ಸಾಧಕ ಮಹಿಳೆಯರನ್ನು ಸರ್ಜಿ -Ëಂಡೇಶನ್‌ನಿAದ ಗೌರವಿಸಲಾಯಿತು.
    ಸಿö ರೋಗ ಮತ್ತು ಪ್ರಸೂತಿ ತಜ್ಞೆ ಡಾ.ರಕ್ಷಾ ರಾವ್ ಮಹಿಳಾ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು. ಶಿಕ್ಷಕಿ ದೀಪಾ ಕುಬಸದ್, ಸುಗಮ ಸಂಗೀತ ಗಾಯಕಿ ಶಾಂತಾ ಆನಂದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts