More

    ಹುಲಿಯೊಂದಿಗೆ ಕಾದಾಡಿದ ಮಹಾತಾಯಿ! ವ್ಯಾಘ್ರನ ದವಡೆಯಿಂದ ಮಗುವನ್ನು ರಕ್ಷಿಸಿದ್ದೇ ರೋಚಕ

    ಜಬಲ್ಪುರ್​: ಈ ಜಗತ್ತಿನಲ್ಲಿ ಮಾತೃ ವಾತ್ಸಲ್ಯ, ಮಾತೃ ಪ್ರೇಮ ಹಾಗೂ ತಾಯಿಯ ತ್ಯಾಗಕ್ಕಿಂತ ದೊಡ್ಡದು ಯಾವುದು ಇಲ್ಲ. ಕರುಳಬಳ್ಳಿಯನ್ನು ಉಳಿಸಿಕೊಳ್ಳಲು ತಾಯಿ ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಸಾವಿನ ದವಡೆಗೂ ಸಿಲುಕಲು ಹಿಂದೆ-ಮುಂದೆ ನೋಡುವುದಿಲ್ಲ. ಮಗುವನ್ನು ಕಾಪಾಡಿಕೊಳ್ಳಲು ಎಂಥಾ ದುಸ್ಸಾಹಸಕ್ಕಾದರೂ ಇಳಿಯುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಮಧ್ಯಪ್ರದೇಶದಲ್ಲಿ ಘಟನೆಯೊಂದು ನಡೆದಿದೆ.

    ಹುಲಿಯ ದವಡೆಯಿಂದ ಮಗನನ್ನು ಕಾಪಾಡಿಕೊಳ್ಳಲು ಮಹಿಳೆಯೊಬ್ಬಳು ವ್ಯಾಘ್ರನ ಜೊತೆ ಸ್ವಲ್ಪವೂ ಅಂಜದೆ ಕಾದಾಟ ನಡೆಸಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ್​ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದ ಬಳಿಯ ರೋಹನಿಯಾ ಗ್ರಾಮದಲ್ಲಿ ಈ ವಾರದ ಆರಂಭದಲ್ಲಿ ನಡೆದಿದೆ. ಮಗ ಮತ್ತು ತಾಯಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಅಮ್ಮ-ಮಗನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

    ಹುಲಿಯು ಸಂರಕ್ಷಿತಾರಣ್ಯದ ಹೊರ ಭಾಗದಲ್ಲಿ ಅಡ್ಡಾಡುತ್ತಿದೆ ಎಂದು ನಾನು ಸೂಚನೆ ನೀಡಿದ್ದೆವು. ಆದರೂ ಜನರು ಹುಲಿಯನ್ನು ನೋಡಲು ಹೊರಗಡೆ ಬಂದಿದ್ದರು. ಆದರೆ, ಮಹಿಳೆಗೆ ಹುಲಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇಬ್ಬರ ಮೇಲೆಯು ಹುಲಿ ದಾಳಿ ಮಾಡಿತು. ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಜಬಲ್ಪುರ್​ ಮೆಡಿಕಲ್​ ಕಾಲೇಜಿಗೆ ಸ್ಥಳಾಂತರ ಮಾಡಲಾಯಿತು. ಸದ್ಯ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಬಾಂಧವಗಢ ಹುಲಿ ಸಂರಕ್ಷಿತಾರಣ್ಯದ ಮ್ಯಾನೇಜರ್​ ಲಾವಿತ್​ ಭಾರತಿ ಅವರು ಮಾಹಿತಿ ನೀಡಿದ್ದಾರೆ.

    ಮಹಿಳೆಯು ತೋಟದಲ್ಲಿ ತನ್ನ ಒಂದೂವರೆ ವರ್ಷದ ಮಗುವನ್ನು ನೋಡಿಕೊಳ್ಳುತ್ತಿದ್ದಾಗ ಹುಲಿ ದಾಳಿ ಮಾಡಿತು. ಈ ವೇಳೆ ಮಗುವನ್ನು ರಕ್ಷಿಸಿಕೊಳ್ಳಲು ಮಹಿಳೆ ಹುಲಿಯೊಂದಿಗೆ ಕಾದಾಡಿದ್ದಾಳೆ. ಹುಲಿಯನ್ನು ದಿಟ್ಟವಾಗಿ ಎದುರಿಸಲು ಮಹಿಳೆಯ ಬಳಿ ಯಾವುದೇ ಆಯುಧ ಇರಲಿಲ್ಲ. ಆದಾಗ್ಯೂ, ತನ್ನ ಮಗುವಿನ ಮೇಲೆ ಹುಲಿ ದಾಳಿ ನಡೆಸದಂತೆ ತಡೆಯಲು ಸಾಧ್ಯವಾದಷ್ಟು ಪ್ರಯತ್ನಪಟ್ಟ ಮಹಿಳೆ, ನೆರವಿಗಾಗಿ ಕೂಗಿಕೊಳ್ಳುತ್ತಿದ್ದಳು. ಕೊನೆಗೆ ಗ್ರಾಮಸ್ಥರು ಓಡಿಬಂದಾಗ ಜನರ ಗುಂಪು ನೋಡಿದ ಹುಲಿ ಅಲ್ಲಿಂದ ಕಾಲ್ಕಿತ್ತಿದೆ. ಮಗುವಿಗೆ ತಲೆಯಲ್ಲಿ ಗಾಯಗಳಾಗಿದರೆ, ತಾಯಿಗೆ ಮೈತುಂಬಾ ಗಾಯಗಳಾಗಿವೆ.

    ಈ ಬಗ್ಗೆ ಮಾತನಾಡಿದ ಮಹಿಳೆಯ ಪತಿ ಭೋಲಾ ಚೌಧರಿ, ಮಗುವನ್ನು ತೋಟಕ್ಕೆ ಕರೆದೊಯ್ದಾಗ ಹುಲಿ ದಾಳಿ ಮಾಡಿದೆ. ಹುಲಿ ಹೊರಗಡೆ ಅಡ್ಡಾಡುತ್ತಿದೆ ಎಂಬುದರ ಅರಿವು ಆಕೆಗೆ ಇರಲಿಲ್ಲ. ಹುಲಿ ಅಡಗಿದ್ದ ಜಮೀನಿಗೆ ಮಗುವನ್ನು ಕರೆದುಕೊಂಡು ಹೋದಳು. ಅದು ಅವಳ ಮೇಲೆ ದಾಳಿ ಮಾಡಿತು ಮತ್ತು ಅವಳು ತೀವ್ರವಾಗಿ ಗಾಯಗೊಂಡಳು ಎಂದು ತಿಳಿಸಿದರು. (ಏಜೆನ್ಸೀಸ್​)

    ಗಂಟೆಗೆ 183 ಕಿ.ಮೀ ವೇಗದಲ್ಲಿ ವಂದೇ ಭಾರತ್ ರೈಲು ಚಾಲನೆ: ಲೋಟದಲ್ಲಿ ತುಂಬಿಟ್ಟಿದ್ದ ನೀರು ಏನಾಯ್ತು ನೋಡಿ…

    ATMನಲ್ಲಿ ಹಣ ಡ್ರಾ ಮಾಡುವಾಗ ಕೇಳಿಬಂತು ವಿಚಿತ್ರ ಶಬ್ದ: ಏನೆಂದು ತಿರುಗಿ ನೋಡಿದ ಮಹಿಳೆಗೆ ಕಾದಿತ್ತು ಶಾಕ್​

    ನೀರಲ್ಲಿ ವಾಹನ ಮುಳುಗಿದ್ರೂ ವಿಮೆ ಸಿಗುತ್ತೆ: ಇನ್ಶೂರೆನ್ಸ್ ಕ್ಲೇಮ್​ಗೆ ಈ ಅಂಶಗಳನ್ನು ಪಾಲಿಸಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts