More

    ಚಿರತೆಯ ಬೆನ್ನಟ್ಟಿ, ಅದರ ಬಾಯಿಂದ ತನ್ನ ಮಗನನ್ನು ರಕ್ಷಿಸಿಕೊಂಡು ಬಂದ ಸಾಹಸಿ ತಾಯಿ

    ಮಧ್ಯಪ್ರದೇಶ: ತನ್ನ ಮಗನನ್ನು ಚಿರತೆ ಬಾಯಿಂದ ಬಿಡಿಸಿಕೊಳ್ಳಲು 1 ಕಿ.ಮೀ ದೂರ ನಡೆದು ಏಕಾಂಗಿಯಾಗಿ ಕಾದಾಡಿದ ಮಧ್ಯಪ್ರದೇಶದ ಮಹಿಳೆಯೊಬ್ಬಳ ಶೌರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

    ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಬರಿಜಾಹರಿಯಾ ಗ್ರಾಮಕ್ಕೆ ಭಾನುವಾರ ಸಂಜೆ ನುಗ್ಗಿದ ಚಿರತೆಯೊಂದು ಬೈಗಾ ಬುಡಕಟ್ಟು ಜನಾಂಗದ ಕಿರಣಾ ಎಂಬ ಮಹಿಳೆಯ 8 ವರ್ಷದ ಮಗ ರಾಹುಲ್​ನನ್ನು ಕಚ್ಚಿಕೊಂಡು ಹೋಗಿದೆ. ಇದನ್ನು ಕಂಡು ಕಿರುಚುತ್ತಾ ಚಿರತೆ ಹಿಂದೆಯೇ ಮಹಿಳೆ ಬರಿಗಾಲಿನಲ್ಲೇ ಒಂದು ಕಿಲೋ ಮೀಟರ್ ಓಡಿದ್ದಾರೆ.

    ಘಟನೆ ನಡೆದ ಸಂದರ್ಭ:

    ಸಮುದಾಯದ ಮಹಿಳೆ ಕಿರಣಾ ಅವರು ಗುಡಿಸಲಿನ ಹೊರಗೆ ಬೆಂಕಿ ಉರಿಸಿಕೊಂಡು ತನ್ನ ಮೂವರು ಮಕ್ಕಳೊಂದಿಗೆ ಚಳಿ ಕಾಯಿಸುತ್ತಿದ್ದರು. ಇದ್ದಕ್ಕಿದ್ದಂತೆ ಚಿರತೆಯೊಂದು ದಾಳಿ ಮಾಡಿ ಮಗ ರಾಹುಲ್‌ ನನ್ನು ಕಚ್ಚಿಕೊಂಡು ಓಡಿ ಹೋಗಿದೆ. ಇದ್ದಕ್ಕಿದ್ದಂತೆ ಬಂದೆರಗಿದ ಚಿರತೆ ಮಗನನ್ನು ಎಳೆದೊಯ್ದ ಘಟನೆಯಿಂದ ಕಿರಣಾ ಧೃತಿಗೆಡದೆ ಚಿರತೆಯನ್ನು ಬೆನ್ನಟ್ಟಿದ್ದಾರೆ. ಸುಮಾರು 1 ಕಿ.ಮೀ. ವರೆಗೆ ಬೆನ್ನಟ್ಟಿ ಚಿರತೆ ಬಾಯಿಯಿಂದ ಮಗುವನ್ನು ರಕ್ಷಿಸಿದ್ದಾರೆ.

    ಚಿರತೆ ದಾಳಿಯಿಂದ ಮಗುವಿಗೆ ಗಾಯವಾಗಿದ್ದು, ಚಿರತೆಯಿಂದ ಮಗುವನ್ನು ಬಿಡಿಸಲು ಹೋರಾಡಿದ ಸಂದರ್ಭ ಕಿರಣಾ ಕೂಡ ಗಾಯಗೊಂಡಿದ್ದಾರೆ. ಕೊನೆಗೆ ಮಗುವನ್ನು ಚಿರತೆ ಬಾಯಿಂದ ಬಿಡಿಸಿಕೊಂಡು ಹಿಂತಿರುಗುವಲ್ಲಿ ಕಿರಣಾ ಯಶಸ್ವಿಯಾಗಿದ್ದಾರೆ.

    ‘ಪದ್ಮಶ್ರೀ’ ಡಾ. ವಿಜಯ ಸಂಕೇಶ್ವರ ಅವರಿಗೆ ರಾಜ್ಯಪಾಲರಿಂದ ಸನ್ಮಾನ…

    ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ದಿವ್ಯಾ ಉರುಡುಗ; ಬಿಗ್​​ಬಾಸ್ ಬಳಿಕ ಮೊದಲ ಸಿನಿಮಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts