More

    ಮರಿಗೆ ತೊಂದರೆಯಾಗದಂತೆ ತಾಯಿ ಆನೆ ಮಾಡಿದ್ದೇನು ನೋಡಿ!

    ನವದೆಹಲಿ: ಮಕ್ಕಳು ನಡೆಯುವಾಗ ಎಲ್ಲಾದರೂ ಎಡವಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೇನೋ ಎಂದು ನಾವೆಲ್ಲರೂ ತುಂಬಾ ಮುತುವರ್ಜಿ ವಹಿಸುವುದು ಸಾಮಾನ್ಯ. ಅವರು ನಡೆದಾಡುವ ದಾರಿಯಲ್ಲಿ ಕಾಲಿಗೆ ಯಾವುದೇ ವಸ್ತು ಬಡಿಯದಂತೆ ನಾವೆಲ್ಲರೂ ಎಚ್ಚರವಹಿಸುತ್ತೇವೆ ಅಲ್ಲವೇ?

    ಪ್ರಾಣಿಲೋಕದಲ್ಲಿ ಕೂಡ ಈ ನಿಯಮದ ಪಾಲನೆಯಾಗುತ್ತದೆ. ಅದರಲ್ಲೂ ಆನೆಗಳು ತಮ್ಮ ಮರಿಗಳಿಗೆ ಯಾವುದೇ ತೊಂದರೆಯಾಗದಂತೆ ತುಂಬಾ ಮುತುವರ್ಜಿ ತೋರುತ್ತವೆ ಎಂಬುದನ್ನು ಓದಿ, ನೋಡಿ ತಿಳಿದುಕೊಂಡಿದ್ದೇವೆ.

    ಇದನ್ನೂ ಓದಿ: ಕರೊನಾ ಹಿನ್ನೆಲೆ ಒಂದು ವರ್ಷ ಶಾಲೆ ಬಂದ್

    ಇಂಥದ್ದೇ ಒಂದು ಘಟನೆಯಲ್ಲಿ ತಾಯಿ ಆನೆಯೊಂದು ನೀರಿನಲ್ಲಿ ಆಟವಾಡಿದ ಬಳಿಕ ತನ್ನ ಪುಟಾಣಿ ಮರಿಯೊಂದಿಗೆ ದಂಡೆ ಹತ್ತಿಕೊಂಡು ತೆರಳುತ್ತಿತ್ತು. ಮಾರ್ಗದಲ್ಲಿ ದೊಡ್ಡದೊಂದು ಮರದ ಒಣಗಿದ ಕೊಂಬೆ ಬಿದ್ದಿತ್ತು. ತನ್ನ ಮರಿ ಅದನ್ನು ಗಮನಿಸದೆ ಎಲ್ಲಿ ಪೆಟ್ಟು ಮಾಡಿಕೊಳ್ಳುತ್ತದೋ ಎಂಬ ಕಾಳಜಿಯಿಂದ ತಾಯಿ ಆನೆ ಅದನ್ನು ಹಿಂದಕ್ಕೆ ಸರಿಸಿ, ಮರಿಗೆ ದಾರಿ ಮಾಡಿಕೊಟ್ಟಿತು. ಅಲ್ಲದೆ, ಅದನ್ನು ದಾಟಿ ಹೋಗುವವರೆಗೂ ಕುಳಿತು ಮರಿಗೆ ಏನೊಂದು ತೊಂದರೆಯಾಗದಂತೆ ಎಚ್ಚರಿಕೆವಹಿಸಿತು.

    ಈ ದೃಶ್ಯವನ್ನು ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಭಾರತೀಯ ಅರಣ್ಯ ಸೇವೆಯ (ಐಎಫ್​ಎಸ್​) ಅಧಿಕಾರಿ ಸುಶಾಂತ್​ ನಂದಾ, ತಾಯಿ ಆನೆ ತನ್ನ ಮರಿಗಳಿಗೆ ಸಣ್ಣದೊಂದು ತೊಂದರೆಯಾಗುವುದನ್ನು ಸಹಿಸುವುದಿಲ್ಲ. ಅದರಲ್ಲೂ ಕೆಲವೇ ಗಂಟೆಗಳ ಹಿಂದೆ ಹುಟ್ಟಿದ ಮರಿ ಎಂದಾದರೆ, ಮತ್ತೂ ಹೆಚ್ಚಿನ ಕಾಳಜಿ ತೋರುತ್ತವೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

    ಮೂಕಪ್ರಾಣಿ ಪ್ರೀತಿಗೆಂದೇ ದೇವರು ಮನುಷ್ಯ ಜನ್ಮ ಸೃಷ್ಟಿಸಿದ್ದಾನಂತೆ. ನಿಜವಿರಬಹುದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts