More

    ಲಿಫ್ಟ್​ನಲ್ಲಿ ಸಿಲುಕಿ ಮೂತ್ರ ಕುಡಿದೇ 3 ದಿನ ವನವಾಸ ಅನುಭವಿಸಿದ ಅಮ್ಮ-ಮಗಳಿಗೆ 4ನೇ ದಿನ ಕಾದಿತ್ತು ಅಚ್ಚರಿ!

    ಬೀಜಿಂಗ್​: ಇದ್ದಕ್ಕಿದ್ದಂತೆ ಕೆಟ್ಟು ನಿಂತು ಲಿಫ್ಟ್​ನಲ್ಲಿ ಬರೋಬ್ಬರಿ ನಾಲ್ಕು ದಿನಗಳ ಕಾಲ ಸಿಲುಕಿಕೊಂಡ ಚೀನಾದ ಅಮ್ಮ-ಮಗಳು ಪರಸ್ಪರ ತಮ್ಮ ಮೂತ್ರಗಳನ್ನೇ ಕುಡಿದು ಬದುಕಿರುವ ಘಟನೆ ನಿನ್ನೆಯಷ್ಟೇ ಮಾಧ್ಯಮಗಳಲ್ಲಿ ವರದಿಯಾಗಿದೆ.

    ಅಮ್ಮ-ಮಗಳ ಹೆಸರು ಬಹಿರಂಗಪಡಿಸಿಲ್ಲ. ಆದರೆ, ಅಮ್ಮನಿಗೆ 82 ಹಾಗೂ ಮಗಳಿಗೆ 64 ವರ್ಷ ಎಂದು ತಿಳಿದುಬಂದಿದೆ. ಚೀನಾದ ವಾಯುವ್ಯ ಪ್ರಾಂತ್ಯ ಶಾಂಕ್ಸಿ ನಿವಾಸಿಗಳಾದ ಇವರು ತಮ್ಮ ನಾಲ್ಕು ಅಂತಸ್ತಿನ ಕಟ್ಟಡದೊಳಗೆ ನಿರ್ಮಿಸಲಾದ ಲಿಫ್ಟ್​ನಲ್ಲಿ ತಮ್ಮ ಎರಡನೇ ಮಹಡಿಗೆ ತೆರಳುವಾಗ ಲಿಫ್ಟ್​ ಇದ್ದಕ್ಕಿಂದಂತೆ ಕೆಟ್ಟು ನಿಂತಿದೆ. ಗಾಬರಿಗೊಳಗಾದ ಅಮ್ಮ-ಮಗಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಲಿಫ್ಟ್​ ಒಳಗೆ ಸಹಾಯಕ್ಕಾಗಿ ಯಾವುದೇ ವಸ್ತುವು ಸಹ ಇರಲಿಲ್ಲ. ಅಲ್ಲದೆ, ಫೋನ್​ ತೆಗೆದುಕೊಂಡು ಹೋಗದೇ ಇದ್ದುದ್ದು ಗಾಯದ ಮೇಲೆ ಬರೆ ಎಳೆದಂತಾಗಿತ್ತು. ನೆರವಿಗಾಗಿ ಎಷ್ಟೇ ಕೂಗಾಡಿದರೂ ಸಹ ಪ್ರಯೋಜನವಾಗಲಿಲ್ಲ.

    ಇದನ್ನೂ ಓದಿ: ವಿವಾಹಿತ ಮಹಿಳೆ ಜತೆ ಪರಾರಿಯಾಗಿದ್ದ ಯುವಕ ಪೊಲೀಸ್ ಠಾಣೆಯಲ್ಲೇ ಸ್ಯಾನಿಟೈಸರ್ ಕುಡಿದ..!

    ಇದರ ನಡುವೆ ಬಾಯಾರಿಕೆಯನ್ನು ನೀಗಿಸಿಕೊಂಡು ಪ್ರಾಣ ಉಳಿಸಿಕೊಳ್ಳಲು ಅಮ್ಮ-ಮಗಳಿಗೆ ಬೇರೆ ದಾರಿ ಕಾಣದೇ ಲಿಫ್ಟ್​ ಒಳಗಡೆ ಬಿದ್ದಿದ್ದ ಲಿಕ್ವಿಡ್​ ವೇಸ್ಟ್​ ಅನ್ನು ಒಟ್ಟುಗೂಡಿಸಿ ಅದರ ಮೇಲೆ ಮೂತ್ರ ಮಾಡಿ ಪರಸ್ಪರ ಕುಡಿದು ದಣಿವು ನೀಗಿಸಿಕೊಂಡಿದ್ದಾರೆ.

    ಇದರೊಂದಿಗೆ ಉಸಿರಾಟಕ್ಕಾಗಿ ಲಿಫ್ಟ್​ ಒಳಗಡೆ ಇದ್ದ ಕಬ್ಬಿಣದ ತಂತಿಯನ್ನು ಎಳೆದು ಅದರ ಸಹಾಯದಿಂದ ಲಿಫ್ಟ್​ ಬಾಗಿಲುಗಳನ್ನು ಸಡಿಲಗೊಳಿಸಿ ಸಣ್ಣ ರಂಧ್ರ ಮಾಡಿ ಅದರ ಮೂಲಕ ಉಸಿರಾಟ ನಡೆಸಿದ್ದಾರೆ. ಪರಸ್ಪರ ಮೂತ್ರ ಕುಡಿದು ಮೂರು ರಾತ್ರಿಗಳನ್ನು ಅಂದರೆ ಬರೋಬ್ಬರಿ 96 ಗಂಟೆಗಳನ್ನು ಲಿಫ್ಟ್​ನಲ್ಲಿಯೇ ಕಳೆದಿದ್ದಾರೆ.

    ನಾಲ್ಕನೇ ದಿನ ಲಿಫ್ಟ್​ ಬಾಗಿಲು ಮೂಲಕ ಸಹಾಯಕ್ಕಾಗಿ ಕೂಗಾಡಿದ್ದಾರೆ. ಇದನ್ನು ಕೇಳಿಸಿಕೊಂಡ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಲಿಫ್ಟ್​ ಬಾಗಿಲನ್ನು ತೆರೆದು ಅಮ್ಮ-ಮಗಳನ್ನು ರಕ್ಷಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇದನ್ನೂ ಓದಿ: ಚಿಕ್ಕಪ್ಪನ ಮನೆಗೆ ಹೋಗಿ ಬರುತ್ತೇನೆಂದು ಹೋದ ಪಿಯು ವಿದ್ಯಾರ್ಥಿನಿ ಮರಳಿದ್ದು ಶವವಾಗಿ

    ಅಂದಹಾಗೆ ಈ ಘಟನೆ ಅಮ್ಮ-ಮಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ನಿನ್ನೆಯಷ್ಟೇ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾತನಾಡಿರುವ ವೈದ್ಯರು ಮೂತ್ರ ಕುಡಿಯದೇ ಇದ್ದಿದ್ದರೆ, ಇಬ್ಬರು ಬದುಕುಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​​)

    ಆರೇಳು ತಿಂಗಳಲ್ಲಿ ಮನೆಮನೆಗೆ ರೇಷನ್‌: ದೆಹಲಿ ಸಚಿವ ಸಂಪುಟದಲ್ಲಿ ಅನುಮೋದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts