More

    Most Deleted App In 2023: ‘ಇನ್​​ಸ್ಟಾಗ್ರಾಂ’ ಡಿಲೀಟ್​​ ಮಾಡುತ್ತಿದ್ದಾರೆ ಬಳಕೆದಾರರು…ಕಾರಣ ಏನಿರಬಹುದು?

    ಬೆಂಗಳೂರು: ಆ್ಯಪ್ ಹೆಚ್ಚು ಜನಪ್ರಿಯವಾದಷ್ಟೂ ಡಿಲೀಟ್ ಆಗುತ್ತದೆ ಎಂಬುದು ಮೇಲಿನ ಶೀರ್ಷಿಕೆ ನೋಡಿದರೆ ಸ್ಪಷ್ಟವಾಗುತ್ತದೆ. ಏಕೆಂದರೆ ಸೋಶಿಯಲ್​​​ ಮೀಡಿಯಾ ಪ್ಲಾಟ್‌ಫಾರ್ಮ್ ಇನ್​​ಸ್ಟಾಗ್ರಾಂ (Instagram) 2023 ರಲ್ಲಿ ಹೆಚ್ಚು ಡಿಲೀಟ್​​​ ಮಾಡಲಾದ ಅಪ್ಲಿಕೇಶನ್ ಆಗಿದೆ. ಇದನ್ನು ಕೇಳಲು ನಿಮಗೆ ಸ್ವಲ್ಪ ವಿಚಿತ್ರ ಅನಿಸಬಹುದು. ಆದರೆ ಹೆಚ್ಚು ಡಿಲೀಟ್​​​ ಮಾಡಲಾದ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಇನ್​​ಸ್ಟಾಗ್ರಾಂ ಅಗ್ರ ಸ್ಥಾನದಲ್ಲಿದೆ ಎಂಬುದು ನಿಜ. ಇದರ ನಂತರ Snapchat ಮತ್ತು Telegram ಬರುತ್ತದೆ.

    ವರದಿಯ ಪ್ರಕಾರ, 2023 ರಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಈ ಸಂಖ್ಯೆ 4.8 ಬಿಲಿಯನ್ ದಾಟಿದೆ. ಅಲ್ಲದೆ, ಪ್ರತಿದಿನ 2 ಗಂಟೆ 24 ನಿಮಿಷಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಿದ್ದಾರೆ.

    ಅಮೆರಿಕದ ಟೆಕ್ ಸಂಸ್ಥೆ ಟಿಆರ್‌ಜಿ ಡೇಟಾಸೆಂಟರ್‌ನ ವರದಿಯ ಪ್ರಕಾರ, ಥ್ರೆಡ್ ಒಂದು ವಾರದಲ್ಲಿ ಹೆಚ್ಚು ಬಳಕೆದಾರರನ್ನು ಕಳೆದುಕೊಂಡ ಅಪ್ಲಿಕೇಶನ್ ಆಗಿದೆ ಎಂದು ತಿಳಿದುಬಂದಿದೆ. 100 ಮಿಲಿಯನ್ ಬಳಕೆದಾರರು ಥ್ರೆಡ್ ಅಪ್ಲಿಕೇಶನ್ ಪ್ರಾರಂಭವಾದ 24 ಗಂಟೆಗಳ ಒಳಗೆ ಸೇರಿದ್ದಾರೆ, ಆದರೆ 80 ಪ್ರತಿಶತ ಬಳಕೆದಾರರು ಮುಂದಿನ 5 ದಿನಗಳಲ್ಲಿ ಥ್ರೆಡ್ ಅನ್ನು ತೊರೆದರು. ಥ್ರೆಡ್ ಆಪ್ ಅಂದರೆ ಮೆಟಾ ಕಂಪನಿ ಇದರಿಂದ ಸಾಕಷ್ಟು ನಷ್ಟ ಅನುಭವಿಸಿದೆ.

    ಇನ್​​ಸ್ಟಾಗ್ರಾಂ ಹೆಚ್ಚು ಡಿಲೀಟ್​​ ಮಾಡಲಾದ ಅಪ್ಲಿಕೇಶನ್
    2023 ರಲ್ಲಿ, 10 ಲಕ್ಷ ಜನರು ಇಂಟರ್ನೆಟ್‌ನಲ್ಲಿ ಇನ್​​ಸ್ಟಾಗ್ರಾಂ ಖಾತೆಯನ್ನು ಡಿಲೀಟ್​​ ಮಾಡಲು ಟೆಕ್ನಿಕ್​​​ ಹುಡುಕಿದ್ದಾರೆ. ಅಲ್ಲದೆ, 10,20,000 ಕ್ಕೂ ಹೆಚ್ಚು ಬಳಕೆದಾರರು ಇನ್​​ಸ್ಟಾಗ್ರಾಂ ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡಿದ್ದಾರೆ.

    ಡಿಲೀಟ್​​ ಮಾಡಿದ ಟಾಪ್ 5 ಅಪ್ಲಿಕೇಶನ್‌ಗಳು
    ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ ನಂತರ ಎರಡನೆಯದು ಸ್ನ್ಯಾಪ್‌ಚಾಟ್. Snapchat ಅನ್ನು 1,28,500 ಜನರು ಡಿಲೀಟ್​​ ಮಾಡಿದ್ದಾರೆ. ಇದರ ನಂತರ X ಅಂದರೆ Twitter ಮತ್ತು Telegram ಬರುತ್ತದೆ. ಫೇಸ್‌ಬುಕ್, ಟಿಕ್‌ಟಾಕ್, ಯೂಟ್ಯೂಬ್, ವಾಟ್ಸಾಪ್ ಮತ್ತು ವೀಚಾಟ್‌ಗಳ ಹೆಸರು ಕೂಡ ಕೇಳಿ ಬರುತ್ತಿದೆ. ಇದರೊಂದಿಗೆ 49,000 ಜನರು ಫೇಸ್‌ಬುಕ್ ಅಪ್ಲಿಕೇಶನ್ ಅನ್ನು ಡಿಲೀಟ್​​ ಮಾಡಿದ್ದಾರೆ. ಆದರೆ 4,950 ಬಳಕೆದಾರರು ವಾಟ್ಸಾಪ್ ಅನ್ನು ಡಿಲೀಟ್​​ ಮಾಡಿದ್ದಾರೆ. 

    ವೈದ್ಯಕೀಯ ವಿಮೆಯನ್ನು ಪಡೆಯಲು 24 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗುವುದು ಅವಶ್ಯಕವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts