More

    ಸೊಳ್ಳೆಗಳಿಂದ ಹರಡುವುದಿಲ್ಲ ಕರೊನಾ, ಇದು ನಿಜಾನಾ?

    ನವದೆಹಲಿ: ಡೆಂಘಿ, ಚಿಕೂನ್​ಗುನ್ಯಾ ಮತ್ತು ಕಮಾಲೆ ರೋಗ ಸೇರಿ ಹಲವು ಸಾಂಕ್ರಾಮಿಕಗಳು ಸೊಳ್ಳೆಗಳ ಮೂಲಕ ಹಬ್ಬುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಇತ್ತೀಚೆಗೆ ಸಾಂಕ್ರಾಮಿಕವಾಗಿ ಹರಡುತ್ತಿರುವ ಕರೊನಾ ಸೋಂಕು ಮಾತ್ರ ಸೊಳ್ಳೆಗಳಿಂದ ಹಬ್ಬುವುದಿಲ್ಲ ಎಂದು ವಿಜ್ಞಾನಿಗಳು ಖಚಿತವಾಗಿ ಹೇಳಿದ್ದಾರೆ.

    ಅವರು ಇಷ್ಟೊಂದು ಖಚಿತವಾಗಿ ಹೇಳಲು ಹೇಗೆ ಸಾಧ್ಯ? ಮತ್ತೆ ವಿಶ್ವ ಆರೋಗ್ಯ ಸಂಸ್ಥೆಯ ಮಿಥ್​ಬಸ್ಟರ್ಸ್​ ವರ್ಗದಲ್ಲಿ ಕರೊನಾ ಸೋಂಕು ಸೊಳ್ಳೆಗಳಿಂದ ಹರಡುತ್ತದೆ ಅಥವಾ ಇಲ್ಲ ಎಂಬುದಕ್ಕೆ ಇದುವರೆಗೂ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಹೇಳಿದೆಯಲ್ಲಾ?

    ಕನ್ಸಾಸ್​ ಸ್ಟೇಟ್​ ಯೂನಿವರ್ಸಿಟಿಯ ಬಿಯೋಸೆಕ್ಯೂರಿಟಿ ರೀಸರ್ಚ್​ ಇನ್​ಸ್ಟಿಟ್ಯೂಟ್​ನಲ್ಲಿ ಈ ಕುರಿತು ಅಧ್ಯಯನ ನಡೆಸಿದ ಸಂಶೋಧಕರು, ಸೊಳ್ಳೆಗಳಿಗೆ ಕೋವಿಡ್​ ವೈರಾಣುವಿನ ಸೋಂಕು ತಗುಲಿಸಲು ಸಾಕಷ್ಟು ಪ್ರಯತ್ನಿಸಿದರು. ಪರಿಸರದಲ್ಲಿ ಇರದಂಥ ವಾತಾವರಣ ಸೃಷ್ಟಿಸಿ ಅದಕ್ಕೆ ಸೋಂಕು ಅಂಟಿಸಲು ಯತ್ನಿಸಲಾಯಿತು. ಆದರೆ, ಅದೆಷ್ಟೇ ಪ್ರಯತ್ನಿಸಿದರೂ ಸೊಳ್ಳೆಗಳಿಗೆ ಕರೊನಾ ಸೋಂಕು ತಗುಲಲೇ ಇಲ್ಲ ಎಂದು ಸಂಸ್ಥೆಯ ನಿರ್ದೇಶಕ ಸ್ಟೀಫನ್​ ಹಿಗ್ಸ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಚಪ್ಪಲಿ ಹೊಲಿಯೋ ಹುಡುಗ ಎಸ್ಸೆಸ್ಸೆಲ್ಸಿ ಟಾಪರ್: ಇದು ನಿಜವಲ್ಲ, ಆದ್ರೂ ಸುಳ್ಳು ಅನಿಸುವುದೂ ಇಲ್ಲ!

    ಅಂದರೆ ಇದರರ್ಥ ಏನು? ಸೊಳ್ಳೆಗಳ ದೇಹದಲ್ಲಿರುವ ರಕ್ತಕ್ಕೆ ಕರೊನಾ ವೈರಾಣುವನ್ನು ಚುಚ್ಚುಮದ್ದು ಮೂಲಕ ಕೊಟ್ಟಾಗ, ಆ ರಕ್ತದಲ್ಲಿ ವೈರಾಣುವಿಗೆ ದ್ವಿಗುಣಗೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಸೊಳ್ಳೆಗಳ ರಕ್ತ ಪ್ರಮಾಣದಲ್ಲಿ ವೈರಾಣುಗಳ ಸಂಖ್ಯೆ ಹೆಚ್ಚಾಗಲಿಲ್ಲ. ಇದನ್ನು ಗಮನಿಸಿದಾಗ ಸೊಳ್ಳೆಗಳಿಂದ ಕರೊನಾ ವೈರಾಣು ಹರಡುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

    ಉದಾಹರಣೆಗೆ ಡೆಂಘೀ ಅಥವಾ ಕಮಾಲೆ ರೋಗವನ್ನು ತೆಗೆದುಕೊಳ್ಳುವುದಾದರೆ, ಈ ಕಾಯಿಲೆಗಳಿಗೆ ಕಾರಣವಾಗುವ ವೈರಾಣುಗಳ ರೀತಿ ಕರೊನಾ ವೈರಾಣುವಿನ ಪ್ರಮಾಣ ಸೊಳ್ಳೆಯ ರಕ್ತದಲ್ಲಿ ಗರಿಷ್ಠ ಪ್ರಮಾಣ ತಲುಪುವುದಿಲ್ಲ. ಕರೊನಾ ಸೋಂಕಿತರನ್ನು ಕಚ್ಚಿದರೂ ಸೊಳ್ಳೆಗಳ ದೇಹದಲ್ಲಿ ಕರೊನಾ ವೈರಾಣು ದ್ವಿಗುಣಗೊಳ್ಳುವುದಿಲ್ಲ ಎಂದು ವಿವರಿಸಿದ್ದಾರೆ.

    ನಿಂತಿದ್ದ ಖಾಲಿ ಕಾರಿಗೆ ಬಸ್​ ಡಿಕ್ಕಿ: ಚಾಲಕ ಸೇರಿ ಐವರು ದುರ್ಮರಣ, 25 ಮಂದಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts