More

    ಒಂದೇ ದಿನದಲ್ಲಿ ಹೆಚ್ಚು ಪ್ರವಾಸಿಗರ ಭೇಟಿ: ಹೊಸ ದಾಖಲೆ ಬರೆದ ಬನ್ನೇರುಘಟ್ಟ ಜೈವಿಕ ಉದ್ಯಾನವನ

    ಬೆಂಗಳೂರು: ರಾಷ್ಟ ಮಟ್ಟದಲ್ಲಿ ಪ್ರಖ್ಯಾತಿಗಳಿಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರವಾಸಿಗರ ದಂಡೆ ಹರಿದು ಬರುತ್ತಿದ್ದು, ದಾಖಲೆ ಪ್ರಮಾಣದ ಪ್ರವಾಸಿಗರ ಆಗಮನದಿಂದ ಆದಾಯವೂ ಹೆಚ್ಚಾಗಿದೆ.

    ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಮೀಪವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗರೋಪಾದಿಯಲ್ಲಿ ಪ್ರವಾಸಿಗರ ದಂಡೆ ಹರಿದು ಬಂದಿದೆ. ವೀಕೆಂಡ್ ರಜೆ ಹಾಗೂ ಬೇಸಿಗೆ ರಜೆಯ ಮುಕ್ತಾಯದ ಸನಿಹದಲ್ಲಿ ಅತಿ ಹೆಚ್ಚಿನ ಪ್ರವಾಸಿಗರು ಬನ್ನೇರುಘಟ್ಟಕ್ಕೆ ಆಗಮಿಸುತ್ತಿದ್ದಾರೆ.

    ಸಾವಿರಾರು ಸಂಖ್ಯೆಯ ಪ್ರಾಣಿ- ಪಕ್ಷಿ ಸಂಕುಲವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನ ಒಂದಿಲ್ಲೊಂದು ವಿಶೇಷತೆಗಳಿಂದು ಖ್ಯಾತಿಗಳಿಸಿದ್ದು, ಇದೀಗ ಮೊದಲನೇ ಬಾರಿಗೆ ದಾಖಲೆಯ ಪ್ರಮಾಣದ ಪ್ರವಾಸಿಗರು ಆಗಮನದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದ ಆದಾಯ ದಾಖಲೆ ಬರೆದಿದೆ. ಒಂದೇ ದಿನ 18045 ಪ್ರವಾಸಿಗರು ಭೇಟಿ ನೀಡಿದ್ದು, ಇದರಲ್ಲಿ 11744 ಜನ ಪ್ರವಾಸಿಗರಿಂದ ಮೃಗಾಲಯ ವೀಕ್ಷಣೆ ಮಾಡಿದ್ರೆ 6301 ಪ್ರವಾಸಿಗರು ಸಫಾರಿ ವೀಕ್ಷಣೆ ಮಾಡಿದ್ದಾರೆ‌. ಪಾರ್ಕ್ ಗೆ ಹೆಚ್ಚಿನ ಪ್ರವಾಸಿಗರ ಆಗಮನದಿಂದ ಬರೋಬ್ಬರಿ 40 ಲಕ್ಷ ರೂ.ಗಳಿಕೆಯಾಗಿದೆ.

    ವಿಕೇಂಡ್ ಹಾಗೂ ಶಾಲಾ-ಕಾಲೇಜು ರಜೆ ಹಿನ್ನೆಲೆ ಸ್ನೇಹಿತರು, ಕುಟುಂಬಸ್ಥರು ಹಾಗೂ ವಿದ್ಯಾರ್ಥಿಗಳಿಂದಲೂ ಸಹ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ವಿಸಿಟ್ ಮಾಡಿದ್ದಾರೆ. ಮೇ ಮೊದಲನೇಯ ವಾರ ಹಾಗೂ ಮೊದಲನೇಯ ವಿಕೇಂಡ್​​ನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಇತಿಹಾಸದಲ್ಲಿಯೇ ದಾಖಲೆ ಬರೆದಿದ್ದು, ಇದರಿಂದ ಪಾರ್ಕ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೂ ಸಹ ಖುಷಿ ತಂದಿದೆ. ಹೆಚ್ಚು ಬಿಸಿಲು ಇಲ್ಲದ ಕಾರಣ ಪ್ರವಾಸಿಗರು ಝೂ ಹಾಗೂ ಸಫಾರಿಯಲ್ಲಿನ ಪ್ರಾಣಿ ಪಕ್ಷಿಗಳನ್ನ ನೋಡಿ ಫುಲ್ ಎಂಜಾಯ್ ಮಾಡಿದ್ದಾರೆ.

    ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಮೀಪದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ದಿನೇ ದಿನೇ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರ ಜೊತೆಗೆ ವಿವಿಧ ಪ್ರಭೇದದ ಪ್ರಾಣಿ- ಪಕ್ಷಿಗಳಿರುವ ಪ್ರವಾಸಿಗರ ನೆಚ್ಚಿನ ತಾಣವಾಗಿ ಪ್ರಖ್ಯಾತಿಗಳಿಸಿದೆ. (ದಿಗ್ವಿಜಯ ನ್ಯೂಸ್​)

    ಇಲ್ಲಿದ್ದಾನೆ ತಲೆ ಇಲ್ಲದ ಸೆಕ್ಯೂರಿಟಿ ಗಾರ್ಡ್​: ಈ ಫೋಟೋ ನೋಡಿದ್ರೆ ಬೆಚ್ಚಿಬೀಳ್ತೀರಾ!

    ಮದುವೆಯಲ್ಲೇ ಬೆಂಕಿ ಹಚ್ಚಿಕೊಂಡು ಓಡಿದ ನವ ವಧು-ವರ! ಆಮೇಲಾಗಿದ್ದೇನು? ಶಾಕಿಂಗ್​ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts