More

    ಎಲ್ಲರ ಬದುಕಲ್ಲೂ ಹಾಸುಹೊಕ್ಕಾಗಿರುವ ಈ ಕಂಪನಿಯಲ್ಲೇ ಹರಾಸ್​ಮೆಂಟ್​!; 500 ಉದ್ಯೋಗಿಗಳಿಂದ ಸಿಇಒಗೆ ದೂರು

    ನವದೆಹಲಿ: ಇದು ಒಂಥರಾ ಎಲ್ಲರ ಬದುಕಿನಲ್ಲಿಯೂ ಹಾಸುಹೊಕ್ಕಾಗಿರುವ ಕಂಪನಿ. ಈ ಕಂಪನಿಯ ಕೃಪೆ ಇಲ್ಲದೆ ದಿನದ ಬಹುತೇಕ ಚಟುವಟಿಕೆಗಳು ಸಾಗುವುದೇ ಕಷ್ಟ ಎಂದರೂ ತಪ್ಪೇನಲ್ಲ. ಆದರೆ ಇಂಥ ಒಂದು ಕಂಪನಿಯಲ್ಲಿ ಈಗ ಅದರ ನೌಕರರೇ ಕಷ್ಟದಲ್ಲಿದ್ದಾರಂತೆ. ಇದೇ ಕಾರಣಕ್ಕೆ500ಕ್ಕೂ ಅಧಿಕ ಕಂಪನಿಗಳು ಈಗ ಸಿಇಒಗೆ ಬಹಿರಂಗ ಪತ್ರ ಮುಖೇನ ದೂರು ಸಲ್ಲಿಸಿದ್ದಾರೆ.

    ಅಂದಹಾಗೆ ಶೋಷಣೆ ಆರೋಪ ಎದುರಿಸುತ್ತಿರುವ ಈ ಕಂಪನಿಯ ಹೆಸರು ಗೂಗಲ್​. ಹೌದು.. ತಮ್ಮನ್ನು ಶೋಷಣೆಗೆ ಒಳಪಡಿಸುತ್ತಿರುವವರಿಗೇ ಕಂಪನಿ ಬೆಂಬಲವನ್ನು ನೀಡುತ್ತಿದೆ ಎಂದು ಗೂಗಲ್​ನ 500ಕ್ಕೂ ಅಧಿಕ ಉದ್ಯೋಗಿಗಳು ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಬಹಿರಂಗ ಪತ್ರದ ಮೂಲಕ ದೂರು ರವಾನಿಸಿದ್ದಾರೆ.

    ಇದನ್ನೂ ಓದಿ: ನಾಯಿಗಾಗಿ ಹುಡುಗ-ಹುಡುಗಿ ಮಧ್ಯೆ ಬೀದಿಜಗಳ; ಕೊನೆಗೆ ಹುಡುಗಿಯೊಂದಿಗೇ ಹೋದ ನಾಯಿ! 

    ಗೂಗಲ್​ನ ಮಾಜಿ ಇಂಜಿನಿಯರ್ ಎಮಿ ನೀಟ್​ಫೀಲ್ಡ್​ ಅವರನ್ನು ಹೇಗೆ ಅವರನ್ನು ಶೋಷಿಸಿದರವ ಜತೆಗೇ ಕೂತುಕೊಳ್ಳುವಂತೆ ಮಾಡಿದೆ ಎಂಬುದನ್ನು ಪ್ರಮುಖವಾಗಿ ಉಲ್ಲೇಖಿಸಿ ಈ ಪತ್ರ ಬರೆಯಲಾಗಿದೆ. ನೀಟ್​ಫೀಲ್ಡ್​ ಅವರ ಶೋಷಣೆ ಪ್ರಕರಣದಲ್ಲಿ ಕಂಪನಿ ಹೇಗೆ ನಡೆದುಕೊಂಡಿದೆ ಎಂಬುದರ ಬಗ್ಗೆ ಅವರೇ ಅಲ್ಲಿನ ಮಾಧ್ಯಮವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಗೂಗಲ್​ನಲ್ಲಿ ಕೆಲಸ ಮಾಡಿದ ಬಳಿಕ ನಾನು ಮತ್ತೆ ಜೀವನದಲ್ಲಿ ಕೆಲಸವನ್ನು ಇಷ್ಟಪಡದ ಹಾಗಾಗಿಗೆ ಎಂದು ಅವರು ಆ ಪತ್ರದಲ್ಲಿ ತಮ್ಮ ಅಭಿಪ್ರಾಯವನ್ನು ಸವಿವರವಾಗಿ ವಿವರಿಸಿದ್ದರು. ಅದರ ಬೆನ್ನಿಗೇ ಈ ಬಹಿರಂಗ ಪತ್ರ ಬರೆಯಲಾಗಿದ್ದು, ಅದು ಕೂಡ ಕೆಲವು ಮಾಧ್ಯಮಗಳಲ್ಲೂ ಪ್ರಕಟವಾಗಿದೆ.

    ಕಂಪನಿ ಶೋಷಣೆಗೆ ಒಳಗಾದವರ ಪರ ನಿಲ್ಲುವ ಬದಲು ಶೋಷಣೆ ಮಾಡುವವರನ್ನೇ ಬೆಂಬಲಿಸುತ್ತಿದೆ. ಉದ್ಯೋಗಿಗಳಿಗೆ ಕಾರ್ಯನಿರ್ವಹಿಸಲು ಶೋಷಣೆಮುಕ್ತ ವಾತಾವರಣ ಒದಗಿಸುವಂತೆ ಬಹಿರಂಗ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಇನ್ನು ಗೂಗಲ್​ ಕಂಪನಿಯಲ್ಲಿ ಶೋಷಣೆ ಇದೇ ಮೊದಲಲ್ಲ. ಈ ಹಿಂದೆ ಅಂದರೆ 2018ರಲ್ಲಿ ಕೂಡ ಗೂಗಲ್ ಕಂಪನಿಯ 20,000 ಉದ್ಯೋಗಿಗಳು ಕಂಪನಿಯಲ್ಲಿ ಶೋಷಣೆ ವಿರುದ್ಧ ದನಿ ಎತ್ತಿದ್ದರು.

    ಇದನ್ನೂ ಓದಿ: ಅಂಗಡಿಯಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟ; ಬಾಲಕಿ ಸೇರಿ ಇಬ್ಬರು ಜೀವಂತ ದಹನಗೊಂಡು ಸ್ಥಳದಲ್ಲೇ ಸಾವು!

    ಗೂಗಲ್ ಈ ಬಗ್ಗೆ ತನ್ನ ಸಮಜಾಯಿಷಿಯನ್ನು ನೀಡಿದ್ದು, ನಾವು ಒಟ್ಟಾರೆ ಪ್ರಕ್ರಿಯೆಯ ಸುಧಾರಣೆಗಾಗಿ ಕಂಪನಿಯಲ್ಲಿ ಸಾಕಷ್ಟು ಅಭಿವೃದ್ಧಿಗಳನ್ನು ಮಾಡಿದ್ದೇವೆ. ಉದ್ಯೋಗಿಗಳ ತನಿಖೆ, ಅಹವಾಲು ಸಲ್ಲಿಸಿದ ಉದ್ಯೋಗಿಗಳ ಕಾಳಜಿ ಎಲ್ಲ ವಿಷಯದಲ್ಲೂ ಇದು ಅನ್ವಯಿಸಲಿದೆ ಎಂದು ಹೇಳಿದೆ. (ಏಜೆನ್ಸೀಸ್)

    ರಾತ್ರಿ 10ರ ಬಳಿಕ ಜನರು ಬೇಕಾಬಿಟ್ಟಿ ಓಡಾಡುವಂತಿಲ್ಲ: ಕಮಲ್ ಪಂತ್

    ಚಾಣಕ್ಯನ ಪ್ರಕಾರ ಪತಿ-ಪತ್ನಿ ಸಂಬಂಧ ಚೆನ್ನಾಗಿರಬೇಕಾದ್ರೆ ಈ 3 ವಿಚಾರ ತುಂಬಾ ಮುಖ್ಯ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts