More

    ವಿಮಾನ ಹಾರಾಟ ಗೊಂದಲ: ಕೊನೇ ಕ್ಷಣದಲ್ಲಿ ರದ್ದುಗೊಂಡ 32ಕ್ಕೂ ಹೆಚ್ಚು ಫ್ಲೈಟ್​​ಗಳು

    ದೇವನಹಳ್ಳಿ: ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ಇಂದಿನಿಂದ ವಿಮಾನ ಸಂಚಾರ ಪ್ರಾರಂಭಿಸಲು ನಮ್ಮ ರಾಜ್ಯವೂ ಸೇರಿ ಬೇರೆ ಕೆಲವು ರಾಜ್ಯಗಳು ನಿರ್ಧಾರ ಮಾಡಿವೆ. ಅದಕ್ಕೆ ತಕ್ಕಂತೆ ಕೆಲವು ನಿಯಮಗಳನ್ನೂ ರೂಪಿಸಿವೆ.

    ಆದರೆ ಇಂದು ಮೊದಲನೇ ದಿನದ ವಿಮಾನ ಹಾರಾಟ ರದ್ದಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಚೆನ್ನೈ, ಮಂಗಳೂರು, ವಿಶಾಖಪಟ್ಟಣ, ತಿರುಪತಿ, ಕೋಲ್ಕತ್ತಾ, ಗೋವಾ, ಇಂಧೋರ್​ ಸೇರಿ ವಿವಿಧೆಡೆ ತೆರಳಬೇಕಿದ್ದ, ಅಲ್ಲಿಂದ ಬರಬೇಕಿದ್ದ ಒಟ್ಟು 32 ವಿಮಾನಗಳು ರದ್ದುಗೊಂಡಿವೆ.

    ಇದನ್ನೂ ಓದಿ: ಹುಬ್ಬಳ್ಳಿ- ಬೆಂಗಳೂರು- ದೆಹಲಿ (ಹಿಂಡಾನ್) ವಿಮಾನ ಹಾರಾಟ ಇಂದಿನಿಂದ

    ಎರಡು ರಾಜ್ಯಗಳ ಮಧ್ಯೆ ವಿಮಾನ ಹಾರಾಟಕ್ಕೆ ಆ ಎರಡೂ ರಾಜ್ಯ ಸರ್ಕಾರ ಸಂಪೂರ್ಣ ಅನುಮತಿ ಇರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗೇ ಮೊದಲು ಪರಸ್ಪರ ಒಪ್ಪಿಕೊಂಡು ವಿಮಾನ ಸಂಚಾರಕ್ಕೆ ಒಪ್ಪಿಗೆ ಕೊಟ್ಟ ರಾಜ್ಯಸರ್ಕಾರಗಳು ಕೊನೇ ಕ್ಷಣದಲ್ಲಿ ಹಿಂದೆ ಸರಿದಿವೆ. ವಿಮಾನಗಳ ಹಾರಾಟವನ್ನು ತಡೆ ಹಿಡಿದಿವೆ.

    ವಿಮಾನನಿಲ್ದಾಣದಲ್ಲಿ ಥರ್ಮಲ್​ ಸ್ಕ್ರೀನಿಂಗ್​ ಟೆಸ್ಟ್​ ಮಂದಗತಿಯಲ್ಲಿ ಸಾಗುತ್ತಿದೆ. ಹಾಗೇ ನಿರೀಕ್ಷೆಗಿಂತಲೂ ಅಧಿಕ ಪ್ರಯಾಣಿಕರು ಆಗಮಿಸಿದ್ದು ಗೊಂದಲಕ್ಕೆ ಕಾರಣವಾಗಿ, ಇಂದು ವಿಮಾನಹಾರಾಟದಲ್ಲಿ ವ್ಯತ್ಯಯವಾಗಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ:  ಕದ್ದುಮುಚ್ಚಿ ಪ್ರವಾಸಕ್ಕೆ ಹೋಗಿದ್ದವರ ಜೀಪ್​ ಪ್ರಪಾತಕ್ಕೆ ಉರುಳಿತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts