More

    ವಿಮಾನ ನಿಲ್ದಾಣ ಕಾಮಗಾರಿ ತನಿಖೆ, ಸಿಎಂಗೆ ಪತ್ರ

    ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಬಗ್ಗೆಯೂ ತನಿಖೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

    249 ಕೋಟಿ ರೂ. ಇದ್ದ ವಿಮಾನ ನಿಲ್ದಾಣ ಕ್ರಿಯಾಯೋಜನೆಯನ್ನು ವರ್ಷದಿಂದ ವರ್ಷಕ್ಕೆ ಏರಿಕೆ ಮಾಡಿ 450 ಕೋಟಿ ರೂ.ಗೆ ಕೊಂಡೊಯ್ಯಲಾಗಿದೆ. ವಿಮಾನ ನಿಲ್ದಾಣ ಕಾಮಗಾರಿ ಯಾವ ಕಾರಣಕ್ಕೆ ವಿಳಂಬ ಆಯಿತು. ಏಕೆ ಬಜೆಟ್ ಹೆಚ್ಚಿಸಲಾಯಿತು ಎಂಬುದರ ಕುರಿತು ತನಿಖೆ ಆಗಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕಲಬುರಗಿಯಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ಮಾಡಲಾಗಿದೆ. ಆದರೆ ಇಲ್ಲಿ ಯಾಕೆ ಅಧಿಕವಾಯಿತು ಎಂದು ಪ್ರಶ್ನಿಸಿದರು.
    ಬಿಜೆಪಿ ಒಮ್ಮೆಯೂ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಆದರೆ ಸರ್ಕಾರ ಬೀಳಿಸುವುದಕ್ಕೆ ಪ್ರಯತ್ನ ಸರಿಯಲ್ಲ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಬರ ಅಧ್ಯಯನ ವರದಿ ಏನಾಯಿತು? ಗ್ಯಾರಂಟಿಗಳಿಗೆ ಅರ್ಜಿ ಹಾಕಿದವರು ಬಿಜೆಪಿ ಕಾರ್ಯಕರ್ತರೇ ಇದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ತ್ರೀಶಕ್ತಿ ಕಾಂಗ್ರೆಸ್ ಕೈಹಿಡಿಯಲಿದೆ ಎಂದು ಹೇಳಿದರು.

    ತನಿಖೆ ಮಾಡಿಸಲಿ: ರಾಘವೇಂದ್ರ ಸವಾಲು
    ವಿಮಾನ ನಿಲ್ದಾಣದ ವೆಚ್ಚದ ಬಗ್ಗೆ ಕಳೆದ ಆರು ತಿಂಗಳಿಂದ ತನಿಖೆ ಮಾಡಿಸುವುದಾಗಿ ಸಚಿವ ಮಧು ಬಂಗಾರಪ್ಪ ಹೇಳುತ್ತಲೇ ಬಂದಿದ್ದಾರೆ. ಪ್ರತಿದಿನ ವಿಮಾನದಲ್ಲಿ ಸಚಿವರೇ ಓಡಾಡುತ್ತಿದ್ದಾರೆ. ಪ್ರತಿದಿನ ಪ್ರೆಸ್‌ಮೀಟ್ ಮಾಡಿಕೊಂಡು ತನಿಖೆ ಮಾಡುವುದಾಗಿ ಸಚಿವರು ಯಾರನ್ನೂ ಹೆದರಿಸುವುದು ಬೇಡ. ಸಾಧ್ಯವಾದರೆ ತನಿಖೆ ಮಾಡಿಸಲಿ ಎಂದು ರಾಘವೇಂದ್ರ ಸವಾಲು ಹಾಕಿದರು. ವಿಮಾನ ನಿಲ್ದಾಣದ ರನ್‌ವೇ ಮೊದಲು 1100 ಮೀ. ಇತು. ಆಗ 150 ಕೋಟಿ ರೂ. ಅನುದಾನ ನೀಡಲಾಗಿತ್ತು. ಮತ್ತೆ ರನ್ ವೇ ಅನ್ನು 3,600 ಮಿ.ಗೆ ವಿಸ್ತರಿಸಿದ್ದರಿಂದ 450 ಕೋಟಿ ರೂ.ಗೆ ತಲುಪಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts