More

    ರಾಜ್ಯ ಪೊಲೀಸ್​ ಶ್ವಾನದಳಕ್ಕೆ ಇನ್ನಷ್ಟು ಬಲ; ಶೀಘ್ರವೇ 50 ಹೊಸ ಶ್ವಾನಗಳ ಸೇರ್ಪಡೆ

    ಬೆಂಗಳೂರು: ರಾಜ್ಯ ಪೊಲೀಸ್​ ಶ್ವಾನದಳವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 50 ಹೊಸ ಶ್ವಾನಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ತಿಳಿಸಿದ್ದಾರೆ.
    ನಗರದ ಕೋರಮಂಗಲದಲ್ಲಿರುವ ಆಡುಗೋಡಿಯ ಸಿಎಆರ್​ ಸೌತ್​​ನಲ್ಲಿ ನೂತನವಾಗಿ ಉನ್ನತೀಕರಿಸಿರುವ ಶ್ವಾನ ಚಟುವಟಿಕೆ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ಶ್ವಾನಗಳನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ.

    ಇದನ್ನೂ ಓದಿ: ‘ನಿರ್ಮಲಾ ಸೀತಾರಾಮನ್​ ಇಚ್ಛಿಸಿದರೆ ನಾನೂ ಸಿದ್ಧ…’: ರಾಹುಲ್​ ಗಾಂಧಿ ಸವಾಲ್​

    ಸ್ಫೋಟಕ ವಸ್ತುಗಳನ್ನು, ಡ್ರಗ್ಸ್​​ಗಳನ್ನು, ಅಪರಾಧ ಸ್ಥಳಗಳಲ್ಲಿ ಅಪರಾಧಿಯ ಸುಳಿವನ್ನು ಪತ್ತೆ ಹಚ್ಚುವಲ್ಲಿ ನಮ್ಮ ಇಲಾಖೆ ಶ್ವಾನಗಳು ಮಹತ್ವದ ಪಾತ್ರ ವಹಿಸುತ್ತಿವೆ. ಈ ತಂಡವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವುಗಳಿಗೆ ಅತ್ಯುತ್ತಮ ತರಬೇತಿ ನೀಡುವುದು ನಮ್ಮ ಗುರಿ. ಹಾಗಾಗಿ ಸಿಎಆರ್‌ ಸೌತ್‌ ನಲ್ಲಿ ಡಿಸಿಪಿ ಯೋಗೇಶ್‌ ಹಾಗೂ ಎಸಿಪಿ ನಿಂಗಾರೆಡ್ಡಿ ಪಾಟೀಲ್‌ ಅವರ ನೇತೃತ್ವದಲ್ಲಿ ಶ್ವಾನ ಚಟುವಟಿಕೆಯ ಉದ್ಯಾನವನವನ್ನು ಉನ್ನತೀಕರಿಸಲಾಗಿದೆ. ಇದಕ್ಕೆ ಡಾಗ್‌ ಗುರು ಎಂದೇ ಪ್ರಸಿದ್ಧಿಯಾಗಿರುವ ಶ್ವಾನ ಮನೋ ವೈದ್ಯ ಅಮೃತ್‌ ಹಿರಣ್ಯ ಅವರು ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

    ಈ ಉದ್ಯಾನವನವನ್ನು ನಮ್ಮ ಸಿಬ್ಬಂದಿಯೇ ಶ್ರದ್ಧೆಯಿಂದ ನಿರ್ಮಿಸಿದ್ದಾರೆ. ಶ್ವಾನದಳಕ್ಕೆ ಹೆಚ್ಚಿನ ಶ್ವಾನಗಳನ್ನು ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ 2.5 ಕೋಟಿ ರೂಪಾಯಿ ಅನುದಾನ ನೀಡಿದೆ. ಬೆಂಗಳೂರು ಉತ್ತರದಲ್ಲೂ ಕೂಡ ಶ್ವಾನ ತರಬೇತಿ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಇದನ್ನೂ ಓದಿ: ಕರ್ನಾಟಕಕ್ಕೆ ಕೊವಿಡ್​-19 ಕಂಟಕ, ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ; ಚಿತ್ರದುರ್ಗಕ್ಕೆ ಶಾಕ್​

    ಮುಂದಿನ ದಿನದಲ್ಲಿ ಪೊಲೀಸ್‌ ಇಲಾಖೆಯ ಮಹಿಳಾ ಕಾನ್​​​ಸ್ಟೆಬಲ್​​ಗಳನ್ನು ಡಾಗ್‌ ಹ್ಯಾಂಡ್ಲರ್‌ಗಳಾಗಿ ನೇಮಿಸಲು ಚಿಂತನೆ ನಡೆಯುತ್ತಿದೆ. ಡಾಗ್‌ ಗುರು ಎಂದೇ ಖ್ಯಾತಿ ಪಡೆದಿರುವ ಶ್ವಾನ ಮನೋತಜ್ಞ ಅಮೃತ್‌ ಹಿರಣ್ಯ ಅವರ ಸೇವೆಯನ್ನು ಪಡೆದುಕೊಂಡು ಶ್ವಾನದಳವನ್ನು ಉನ್ನತೀಕರಿಸಲಿದ್ದೇವೆ ಎಂದು ಹೇಳಿದರು.

    ಇದೇ ವೇಳೆ ಅಮೃತ್‌ ಹಿರಣ್ಯ ಅವರ ತರಬೇತಿಯಂತೆ ಶ್ವಾನದಳ ವೆಹಿಕಲ್‌ ಹೈಜಾಕಿಂಗ್‌, ಸ್ಫೋಟಕ ಹಾಗೂ ಡಗ್ರ ಡಿಟೆಕ್ಷನ್‌, ಆ್ಯಂಟಿ ಟೆರರಿಸ್ಟ್‌/ನಕ್ಸಲ್‌ ವಾರ್‌ ಫೇರ್‌ ನಂತಹ ನೂತನ ತಂತ್ರಗಳನ್ನು ಪ್ರದರ್ಶಿಸಿತು.

    ಇದನ್ನೂ ಓದಿ: ಸಲೂನ್​​ಗಳು ತೆರೆದಿದ್ದರೂ ನೀವು ಹೋಗೋ ಮುನ್ನ ಇನ್ನೊಮ್ಮೆ ಯೋಚಿಸಿ…ಈ ಘಟನೆ ನಡೆದದ್ದು ಉಡುಪಿಯಲ್ಲಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts