More

    ಲಸಿಕೆ ಪಡೆದವರಲ್ಲಿ ಹೆಚ್ಚಿನ ಸೋಂಕು! ಆದರೆ, ಪಡೆಯದವರಲ್ಲಿ ಹೆಚ್ಚು ಗಂಭೀರ ಸ್ಥಿತಿ

    ಸಿಂಗಾಪುರ್​ : ಸಿಂಗಾಪುರ್​ನಲ್ಲಿ ಕಳೆದ ನಾಲ್ಕು ವಾರಗಳಲ್ಲಿ ಕಂಡುಬಂದ ಕರೊನಾ ಸೋಂಕು ಪ್ರಕರಣಗಳಲ್ಲಿ ಮುಕ್ಕಾಲು ಭಾಗದಷ್ಟು ಲಸಿಕೆ ಪಡೆದ ಜನರಲ್ಲಿ ಕಂಡುಬಂದಿದೆ. ಮುಕ್ಕಾಲು ಭಾಗ ಜನರಿಗೆ ಈಗಾಗಲೇ ಲಸಿಕೆ ಒದಗಿಸಿರುವ ಸಿಂಗಾಪುರದಲ್ಲಿ ಸೋಂಕಿನ ಪ್ರಮಾಣವು ಅಲ್ಲಿನ ಲಸಿಕೆ ಪಡೆದ ಮತ್ತು ಪಡೆಯದ ಜನಸಂಖ್ಯೆಗೆ ತಾಳೆಯಾಗುವಂತೆಯೇ ಇದೆ. ಆದರೆ, ಸೋಂಕಿನ ಪರಿಣಾಮ ಗಂಭೀರವಾಗಿರುವ ಪ್ರಕರಣಗಳಲ್ಲಿ ಲಸಿಕೆ ಪಡೆಯದ ಜನರೇ ಹೆಚ್ಚಿದ್ದಾರೆ ಎನ್ನಲಾಗಿದೆ.

    ಕಳೆದ 28 ದಿನಗಳಲ್ಲಿ, ಸಿಂಗಾಪುರ್​ನಲ್ಲಿ 1,096 ಸ್ಥಳೀಯವಾಗಿ ಹರಡಿದ ಸೋಂಕು ಪ್ರಕರಣಗಳು ಕಂಡುಬಂದಿತು. ಅವುಗಳಲ್ಲಿ ಶೇ. 44 ಅಂದರೆ 484 ಜನರು ಪೂರ್ಣವಾಗಿ ಲಸಿಕೆ ಪಡೆದವರು, ಶೇ. 30 ರಷ್ಟು ಜನ ಒಂದು ಡೋಸ್ ಪಡೆದವರು. ಉಳಿದ ಶೇ.25 ರಷ್ಟು ಜನರು ಲಸಿಕೆ ಪಡೆಯದವರಾಗಿದ್ದಾರೆ. ಒಟ್ಟು ಸೋಂಕಿತರಲ್ಲಿ ಕೇವಲ 7 ಜನರು ಗಂಭೀರ ಸ್ಥಿತಿ ತಲುಪಿದ್ದು, ಆಕ್ಸಿಜನ್ ಬೆಂಬಲ ನೀಡಬೇಕಾಯಿತು. ಇವರಲ್ಲಿ 6 ಜನರು ಲಸಿಕೆ ಪಡೆಯದವರಿದ್ದರೆ, ಒಬ್ಬರು ಒಂದು ಡೋಸ್ ಮಾತ್ರ ಪಡೆದವರಿದ್ದರು ಎಂದು ಸಿಂಗಾಪುರ್​ನ ಆರೋಗ್ಯ ಸಚಿವಾಲಯ ಹೇಳಿದೆ ಎಂದು ರಿಯಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಇದನ್ನೂ ಓದಿ: VIDEO | ಪ್ರವಾಹಪೀಡಿತ ಪಟ್ಟಣದಿಂದ ಭಯಾನಕ ವಿಡಿಯೋ ವೈರಲ್!

    ಈ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವುದರಿಂದ ಸೋಂಕು ತಗುಲಿದರೂ ಅದು ಗಂಭೀರ ಖಾಯಿಲೆಯಾಗಿ ಕಾಡುವುದಿಲ್ಲ ಎಂಬುದಕ್ಕೆ ಪುರಾವೆ ಸಿಕ್ಕಿದೆ ಎಂದು ತಜ್ನರು ಹೇಳಿದ್ದಾರೆ. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಸಿಂಗಾಪುರ್​ನಲ್ಲಿ ಹೆಚ್ಚಾಗಿ ಹರಡುತ್ತಿರುವುದು ಕರೊನಾ ಡೆಲ್ಟಾ ರೂಪಾಂತರಿ​​ಯಾಗಿರುವುದರಿಂದ, ಹೆಚ್ಚು ಸಾಂಕ್ರಾಮಿಕವಾದ ಈ ರೂಪಾಂತರಿಯ ವಿರುದ್ಧ ಕರೊನಾ ಲಸಿಕೆ ಕಡಿಮೆ ರಕ್ಷಣೆ ನೀಡುತ್ತದೆಯೇ ಎಂಬ ಪ್ರಶ್ನೆಯೂ ಮೂಡಿಬಂದಿದೆ ಎನ್ನಲಾಗಿದೆ.

    ಯುಎಇ ನಂತರದಲ್ಲಿ, ಅತಿವೇಗವಾಗಿ ಲಸಿಕಾಕರಣ ನಡೆಸಿರುವ ದೇಶವಾದ ಸಿಂಗಾಪುರದಲ್ಲಿ ಶೇ. 75 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಒಟ್ಟು 5.7 ಮಿಲಿಯನ್ ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ ಶೇ.75 ರಷ್ಟು ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದರೆ, ಅರ್ಧದಷ್ಟು ಜನಸಂಖ್ಯೆ ಎರಡೂ ಡೋಸ್​ಗಳನ್ನು ಪಡೆದಿದೆ. ಸಿಂಗಾಪುರ್​ ತನ್ನ ಲಸಿಕಾ ಕಾರ್ಯಕ್ರಮಕ್ಕೆ ಫೈಜರ್ ಬಯೋಎನ್​ಟೆಕ್​ ಮತ್ತು ಮಾಡರ್ನಾ ಲಸಿಕೆಗಳನ್ನು ಬಳಸುತ್ತಿದೆ.

    ಇದನ್ನೂ ಓದಿ: ಕರೊನಾ ಡೆಲ್ಟಾ ಬಳಿಕ ಈಗ ಗಾಮಾ ಆತಂಕ: ಹರಡಲಾರಂಭಿಸಿದೆ ಹೊಸ ವೇರಿಯಂಟ್​

    ಗುರುವಾರದಂದು 162 ಹೊಸ ಕರೊನಾ ಪ್ರಕರಣಗಳನ್ನು ದಾಖಲಿಸಿದ ಸಿಂಗಾಪುರ್​ನಲ್ಲಿ, ಸಾಮಾಜಿಕ ಒಕ್ಕೂಟದ ಮೇಲೆ ನಿರ್ಬಂಧ ವಿಧಿಸುವುದರೊಂದಿಗೆ, ಹಿರಿಯ ವಯಸ್ಸಿನವರಿಗೆ ಲಸಿಕೆ ನೀಡುವ ವೇಗವನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಮಹಿಳೆಯರನ್ನು ಪುಸಲಾಯಿಸಿ ಬೆತ್ತಲೆ ಚಿತ್ರ ತರಿಸಿಕೊಳ್ಳುತ್ತಿದ್ದ ಖದೀಮ! ಕೃತ್ಯಕ್ಕೆ ಮೊಬೈಲ್ ಆ್ಯಪ್​ ಬಳಕೆ

    ನಾಲ್ಕು ದಿನಗಳ ಕಾಲ ಶಿರಾಡಿ ಘಾಟ್​ ರಸ್ತೆ ಸಂಚಾರ ಬಂದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts