More

    ಶೇ. 75 ಸಾಲಗಾರರಿಗೆ ಲಾಭ : ಚಕ್ರಬಡ್ಡಿ ಮನ್ನಾದಿಂದ ಕ್ಕೆ 7,500 ಕೋಟಿ ರೂ. ಹೊರೆ

    ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಸಾಲಗಳ ಮಾಸಿಕ ಕಂತಿನ ಮರುಪಾವತಿ ವಿನಾಯಿತಿ (ಮಾರಟೋರಿಯಂ) ಅವಧಿಯಲ್ಲಿನ ಚಕ್ರಬಡ್ಡಿ ಮನ್ನಾ ಯೋಜನೆಯಿಂದ ಶೇಕಡ 75ರಷ್ಟು ಸಾಲಗಾರರಿಗೆ ಲಾಭವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 7,500 ಕೋಟಿ ರೂಪಾಯಿ ಹೊರೆ ಆಗಲಿದೆ ಎಂದು ವರದಿಯೊಂದು ತಿಳಿಸಿದೆ.

    ಯಾರಿಗೆ ಹೆಚ್ಚು ಲಾಭ?

    ಭದ್ರತೆಯಿಲ್ಲದ, ಅತಿಸಣ್ಣ ಮತ್ತು ಚಿನ್ನದ ಸಾಲಗಳನ್ನು ಪಡೆದವರು ಗೃಹಸಾಲ ಪಡೆದವರಿಗಿಂತ ಹೆಚ್ಚಿನ ಲಾಭ ಪಡೆಯಲಿದ್ದಾರೆ. ಎಂಎಸ್​ಎಂಇ, ಶಿಕ್ಷಣ, ಗೃಹ, ಗ್ರಾಹಕ ವಸ್ತುಗಳು, ಕ್ರೆಡಿಟ್ ಕಾರ್ಡ್, ಆಟೋಮೊಬೈಲ್, ವೈಯಕ್ತಿಕ ಸಾಲ ಪಡೆದವರು ಬಡ್ಡಿ ಮನ್ನಾಕ್ಕೆ ಅರ್ಹರಾಗಿದ್ದಾರೆ.

    2 ಕೋಟಿ ರೂಪಾಯಿವರೆಗಿನ ಸಾಲದ ಮೇಲಿನ ಮನ್ನಾಗೊಂಡ ಚಕ್ರಬಡ್ಡಿಯನ್ನು ಬ್ಯಾಂಕ್​ಗಳಿಗೆ ಹಿಂದಿರುಗಿಸುವುದಾಗಿ (ರೀಇಂಬರ್ಸ್) ಕೇಂದ್ರ ಸರ್ಕಾರ ಕಳೆದ ವಾರ ಸುಪ್ರೀಂಕೋರ್ಟ್​ಗೆ ತಿಳಿಸಿತ್ತು. ಮಾರಟೋರಿಯಂ ಸೌಲಭ್ಯ ಬಳಸಿಕೊಳ್ಳದವರಿಗೂ ಇದನ್ನು ಅನ್ವಯಿಸಲಾಗುತ್ತದೆ ಎಂದಿತ್ತು. ಮಾರಟೋರಿಯಂ ಬಳಸಿಕೊಂಡವರಿಗೆ ಮಾತ್ರವೇ ಚಕ್ರಬಡ್ಡಿ ಮನ್ನಾ ಅನ್ವಯಿಸಿದ್ದರೆ ಬೊಕ್ಕಸದ ಹೊರೆ ಅರ್ಧದಷ್ಟು ಇಳಿಯುತ್ತಿತ್ತು ಎಂದು ಕ್ರಿಸಿಲ್ ಸೋಮವಾರ ಹೇಳಿದೆ.

    ಇದನ್ನೂ ಓದಿ: ಪಬ್​ಜಿಗೆ ಪರ್ಯಾಯವಾಗಿ ಬರಲಿದೆ ಫೌಜಿ; ಟೀಸರ್​ 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ

    ಚಕ್ರಬಡ್ಡಿ ಮೊತ್ತವನ್ನು ನವೆಂಬರ್ 5ರೊಳಗೆ ಸಾಲಗಾರರ ಖಾತೆಗಳಿಗೆ ಜಮಾ ಮಾಡುವಂತೆ ಬ್ಯಾಂಕ್ ಮತ್ತು ಇತರ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿದೆ. ಇದು ಮಾರಟೋರಿಯಂನ ಆರು ತಿಂಗಳ ಅವಧಿಯ ಚಕ್ರಬಡ್ಡಿ ಮತ್ತು ಸರಳ ಬಡ್ಡಿ ನಡುವಿನ ವ್ಯತ್ಯಾಸವಾಗಿರುತ್ತದೆ. ಸಾಲದಾತ ಬ್ಯಾಂಕ್, ಇತರ ಸಂಸ್ಥೆಗಳು ಚಕ್ರಬಡ್ಡಿಯ ರೀಇಂಬರ್ಸ್​ಗಾಗಿ ಡಿಸೆಂಬರ್ 15ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ ಸರ್ಕಾರ ಹಣ ಜಮೆ ಮಾಡುವ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಎರಡು ಕೋಟಿ ರೂಪಾಯಿ ವರೆಗಿನ ಅರ್ಹ ಸಾಲಗಳ ಮೇಲಿನ ಚಕ್ರಬಡ್ಡಿ ಸಹಿತ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿದರೆ 1.5 ಲಕ್ಷ ಕೋಟಿ ರೂಪಾಯಿವರೆಗೆ ಹೊರೆಯಾಗಿ ಸರ್ಕಾರ ಮತ್ತು ಆರ್ಥಿಕ ಕ್ಷೇತ್ರಕ್ಕೆ ಸವಾಲಾಗುತ್ತಿತ್ತು ಎಂದು ಕ್ರಸಿಲ್ ಅಭಿಪ್ರಾಯಪಟ್ಟಿದೆ. (ಏಜೆನ್ಸೀಸ್)

    ಒಂಬತ್ತು ಗಂಟೆ ವಿಚಾರಣೆ ಎದುರಿಸಿದ್ರೂ ಒಂದು ಕಪ್ ಟೀ ಕೂಡ ಕುಡಿದಿರಲಿಲ್ಲ ನಮೋ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts