More

    ಕರೊನಾ ವಾರಿಯರ್ಸ್ ನಿಜ ದೇವರು

    ಮೊಳಕಾಲ್ಮೂರು: ಕರೊನಾ ವಾರಿಯರ್ಸ್ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

    ಜಿಪಂ ಪ್ರಭಾರ ಅಧ್ಯಕ್ಷೆ ಎನ್.ಪಿ.ಸುಶೀಲಮ್ಮ ಅಧ್ಯಕ್ಷತೆಯಲ್ಲಿ ತಾಲೂಕಿನ ರಾಂಪುರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಂಪುರ, ಸಂತೇಗುಡ್ಡ, ತಮ್ಮೇನಹಳ್ಳಿ, ದೇವಸಮುದ್ರ ಗ್ರಾಪಂ ವ್ಯಾಪ್ತಿಯ 150 ಆಶಾ, ಆರೋಗ್ಯ, ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ಹಿರಿತನಕ್ಕೆ ಗೌರವ ಸಮರ್ಪಣೆ ಹಾಗೂ ಛತ್ರಿ, ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪ್ರಸ್ತುತ ಕರೊನಾ ವಾರಿಯರ್ಸ್‌ಗಳೇ ನಮ್ಮ ಪಾಲಿನ ದೇವರು. ಕುಟುಂಬ ಮಾತ್ರವಲ್ಲದೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಕರೊನಾ ಹೋರಾಟಕ್ಕೆ ಧುಮುಕಿದ್ದಾರೆ. ಇಂತವರ ಮೇಲೆ ದಾಳಿ ನಡೆಸುತ್ತಿರುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

    ಕರೊನಾ ವಾರಿಯರ್ಸ್‌ಗೆ ಸೂಕ್ತ ಪರಿಹಾರ ನೀಡಬೇಕು. ಸಂಕಷ್ಟದಲ್ಲಿರುವ ಜನರಿಗೆ ಆಹಾರ ಕಿಟ್ ಬದಲು ಜೀವನ ಭದ್ರತೆ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ನಾವೂ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರಿಗೆ ಛತ್ರಿ, ಬ್ಯಾಗ್ ಕೊಡುವ ಮೂಲಕ ಸಣ್ಣ ಸಹಾಯ ಮಾಡಿದ್ದೇವೆ ಎಂದರು.

    ಮುಖಂಡರಾದ ಎನ್.ವೈ.ಪೆನ್ನೋಬಳಸ್ವಾಮಿ, ಆರ್.ಎಂ.ಅಶೋಕ್, ನಿವೃತ್ತ ಇಂಜಿನಿಯರ್ ಸಿ.ಎನ್.ಚಂದ್ರಶೇಖರ, ಎನ್.ಪಿ.ಚೇತನ, ಜಯಕುಮಾರ, ಆರ್.ಜಿ.ಗಂಗಾಧರಪ್ಪ, ಸಿದ್ದಬಸಪ್ಪ, ಸಿಪಿಐ ಗೋಪಾಲನಾಯ್ಕ, ಪಿಎಸ್‌ಐ ಗುಡ್ಡಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts