More

    ಕೇರಳಕ್ಕೆ ಮುಂಗಾರು ಪ್ರವೇಶ, ರಾಜ್ಯಕ್ಕೆ ಜೂ. 5ರೊಳಗೆ ಆಗಮನ

    ಬೆಂಗಳೂರು: ಈ ಬಾರಿ ವಾಡಿಕೆಯಂತೆ ನೈಋತ್ಯ ಮುಂಗಾರು ಮಾರುತಗಳು ಕೇರಳಕ್ಕೆ ಇಂದು (ಜೂ.3) ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ. ಕೇರಳಕ್ಕೆ ಆಗಮಿಸಿರುವ ಮುಂಗಾರು ಮಾರುತಗಳು ಕರ್ನಾಟಕದ ಕರಾವಳಿಗೆ ಒಂದೆರೆಡು ದಿನಗಳಲ್ಲಿ ಪ್ರವೇಶಿಸಲಿವೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್​.ಪಾಟೀಲ್​ ತಿಳಿಸಿದ್ದಾರೆ.

    2020 ರಲ್ಲಿ ಜೂ.1 ರಂದು ಮುಂಗಾರು ಆಗಮಿಸಿತ್ತು. 2019 ರಲ್ಲಿ ಜೂ.8 ರಂದು, 2018 ಮತ್ತು 2017 ರಲ್ಲಿ ಮೇ ಕೊನೆಯ ದಿನಗಳಲ್ಲಿ ಪ್ರವೇಶವಾಗಿತ್ತು. ಈ ಬಾರಿ ವಾಡಿಕೆಗಿಂತ ಮುನ್ನವೇ ಕೇರಳಕ್ಕೆ ಮಾರುತಗಳು ಪ್ರವೇಶಿಸುವ ಸಾಧ್ಯತೆಯಿತ್ತು. ಆದರೆ, ಒಂದೇ ವಾರದಲ್ಲಿ ಸಂಭವಿಸಿದ ಎರಡು ಚಂಡಮಾರುತಗಳು ತೇವಾಂಶಭರಿತ ಮೋಡಗಳನ್ನು ಸೆಳೆದುಕೊಂಡಿದ್ದರಿಂದ ಸ್ವಲ್ಪ ವಿಳಂಬವಾಯಿತು ಎನ್ನಲಾಗಿದೆ.

    ಇದನ್ನೂ ಓದಿ: ಮಾತು ಬಾರದ, ಕಿವಿ ಕೇಳದ ಬಾಲಕಿ ಮೇಲೆ ಅತ್ಯಾಚಾರ! ಇಳಿ ಸಂಜೆಯ ಹೊತ್ತಿಗೆ ನಡೆದೇ ಹೋಯಿತು ಘೋರ ಕೃತ್ಯ

    48 ಗಂಟೆ ವ್ಯಾಪಕ ಮಳೆ : ರಾಜ್ಯದ ಕೆಲವು ಭಾಗಗಳಲ್ಲಿ ಇಂದು ಭಾರೀ ಮಳೆ ಸುರಿದಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ 48 ಗಂಟೆ ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಯೆಲ್ಲೋ ಅರ್ಲಟ್​ ಘೋಷಿಸಿದೆ.

    ಪಟ್ನಾ ಏಮ್ಸ್​ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಕೋವಾಕ್ಸಿನ್​ ಪ್ರಯೋಗ ಶುರು

    ಸೈಬರ್​ ಕಳ್ಳರ ಬ್ಯಾಂಕ್​ ಖಾತೆಗೆ ಖಾಕಿ ಲಾಕ್​! 112 ಅಥವಾ 100 ಗೆ ಕರೆ ಮಾಡಿ, ಹಣ ಉಳಿಸಿಕೊಳ್ಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts