More

    ಜನರು ಹೇಳಿದ್ರಂತೂ ಕೇಳಲ್ಲ, ನಮ್ಮನ್ನಾದ್ರೂ ನೋಡಿ ಕಲಿತೀರಾ ಅಂತಿವೆ ಈ ಕೋತಿಗಳು!

    ನವದೆಹಲಿ: ಲಾಕ್​ಡೌನ್​ ನಿಯಮ ಪಾಲನೆ ಮಾಡುವಂತೆ ಸರ್ಕಾರ, ಪೊಲೀಸರು, ಮಾಧ್ಯಮಗಳು ಸೇರಿದಂತೆ ಹಲವಾರು ಮಂದಿ ಎರಡು ತಿಂಗಳುಗಳಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ ಅನೇಕ ಮಂದಿ ಅದನ್ನು ಇದುವರೆಗೂ ಪಾಲನೆ ಮಾಡುತ್ತಿಲ್ಲ.

    ಸಾಮಾಜಿಕ ಅಂತರವಂತೂ ಕೇಳಲೇಬೇಡಿ, ಅದಕ್ಕೂ, ನಮಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ ಹಲವರು. ಅದಕ್ಕಾಗಿ ಕ್ರೀಡಾ ಕ್ರೀಡಾ ಸಚಿವ ಕಿರಣ್‌ ರಿಜುಜು ಮಂಗಗಳ ಮೂಲಕ ಮನುಷ್ಯರಿಗೆ ತಿಳಿಹೇಳುವ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅದೀಗ ಭಾರಿ ವೈರಲ್​ ಆಗಿದೆ.

    ಮನುಷ್ಯರು ಹೇಳಿದರಂತೂ ಕೇಳಲ್ಲ, ನಾವಾದರೂ ಹೇಳುವುದನ್ನು ಕೇಳಿ ಅನ್ನುವಂತಿದೆ ಮಂಗಗಳ ಈ ಪೋಸ್​.
    ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ ಗಡಿ ಭಾಗದಲ್ಲಿರುವ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರು ಮಂಗಗಳಿಗೆ ಹಣ್ಣುಗಳನ್ನು ನೀಡುತ್ತಿದ್ದಾರೆ. ಅವರು ಹಾಕಿರುವ ಕಲ್ಲಂಗಡಿ ಮತ್ತು ಬಾಳೆ ಹಣ್ಣುಗಳನ್ನು ತಿನ್ನಲು ಮಂಗಗಳು ಸಾಲುಸಾಲಾಗಿಯೇ ಬಂದಿವೆ. ಆದರೆ ಅಚ್ಚರಿ ಎಂಬಂತೆ ಈ ಮಂಗಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿವೆ. ಈ ಅದ್ಭುತ ದೃಶ್ಯವನ್ನು ಆರುಪ್‌ ಕಲಿಟಾ ಎನ್ನುವವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಅದನ್ನು ಕಿರಣ್‌ ರಿಜುಜು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಈ ಚಿತ್ರದ ಜತೆ ಅನಿಸಿಕೆ ಹಂಚಿಕೊಂಡಿರುವ ಕಿರಣ್​ ರಿಜುಜು, ‘ಅರುಣಾಚಲ ಪ್ರದೇಶದ ಭಲುಕ್‌ಪಾಂಗ್ ಬಳಿ ಕಂಡುಬಂದ ಪರಿಪೂರ್ಣ ಸಾಮಾಜಿಕ ಅಂತರದ ಚಿತ್ರವಿದು. ನಾವು ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಾಮಾನ್ಯ ದೈನಂದಿನ ಜೀವನದಲ್ಲಿ ನಾವು ಪಾಲಿಸದಿರುವ ಅನೇಕ ಪ್ರಮುಖ ಪಾಠಗಳನ್ನು ಈ ಪ್ರಾಣಿಗಳು ನಮಗೆ ಬೋಧಿಸುತ್ತವೆ’ ಎಂದು ಬರೆದುಕೊಂಡಿದ್ದಾರೆ.

    ಈ ಚಿತ್ರವನ್ನು 1.5 ಸಾವಿರಕ್ಕೂ ಹೆಚ್ಚು ಜನರು ಶೇರ್​ ಮಾಡಿದ್ದು 9 ಸಾವಿರಕ್ಕೂ ಹೆಚ್ಚು ಟ್ವೀಟಿಗರು ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts