More

    ಜನರ ರಕ್ಷಣೆಯಲ್ಲಿ ನಾನು ಸೋತೆ ಎನ್ನುತ್ತ ರಾಜೀನಾಮೆ ಸಲ್ಲಿಸಿದ ಪ್ರಧಾನಿ!

    ಉಲಾನ್‌ಬತಾರ್: ಕರೊನಾ ಸೋಂಕು ಅನೇಕರ ಬದುಕನ್ನೇ ಬದಲಾಯಿಸಿಬಿಟ್ಟಿದೆ. ಅದೇ ಕರೊನಾ ಸೋಂಕಿಗೆ ತುತ್ತಾಗಿದ್ದ ಮಹಿಳೆಗೆ ರಕ್ಷಣೆ ನೀಡುವಲ್ಲಿ ವಿಫಲವಾದೆ ಎನ್ನುವ ಕಾರಣಕ್ಕೆ ಪ್ರಧಾನ ಮಂತ್ರಿಯೇ ರಾಜೀನಾಮೆ ಸಲ್ಲಿಸಿರುವ ಘಟನೆ ಮಂಗೋಲಿಯದಲ್ಲಿ ನಡೆದಿದೆ.

    ಇದನ್ನೂ ಓದಿ: 16 ತಿಂಗಳ ಹೆಣ್ಣುಮಗುವಿನ ಮೂಗಿನ ಮೂಲಕ ಬ್ರೇನ್​ ಟ್ಯೂಮರ್ ತೆಗೆದ ವೈದ್ಯರು!

    ಮಂಗೋಲಿಯಾದ ಕೆಲವೇ ದಿನಗಳ ಹಿಂದೆ ಮಗುವಿಗೆ ಜನ್ಮವಿತ್ತ ತಾಯಿಯಿಬ್ಬಳು ಕರೊನಾ ಸೋಂಕು ದೃಢವಾಗಿದ್ದು, ಆಕೆ ತನ್ನ ಎಳೆ ಕಂದನೊಂದಿಗೆ ಆಸ್ಪತ್ರೆಗೆ ತೆರಳುವ ವಿಡಿಯೋ ವೈರಲ್​ ಆಗಿತ್ತು. ಮೈನಸ್​ 25 ಡಿಗ್ರಿ ಸೆಲ್ಸಿಯಸ್​ ತಾಪಮಾನದಲ್ಲಿ ಮಹಿಳೆ ಆಸ್ಪತ್ರೆಯ ಬಟ್ಟೆಯಲ್ಲಿ ನರಳಾಡುತ್ತಿರುವುದು ಕಂಡುಬಂದಿತ್ತು. ಆ ದೇಶದ ಸಂಪ್ರದಾಯದ ಪ್ರಕಾರ ಮಗು ಹುಟ್ಟಿ ಒಂದು ತಿಂಗಳವರೆಗೆ ಮಗು ಮತ್ತು ತಾಯಿಯನ್ನು ಬೆಚ್ಚಗೆ ನೋಡಿಕೊಳ್ಳಬೇಕಂತೆ. ಅವರನ್ನು ಹೊರಗಡೆ ಓಡಾಡಿಸುವಂತಿಲ್ಲಂತೆ. ಆದರೆ ಈ ಮಹಿಳೆಯನ್ನು ಆಸ್ಪತ್ರೆಯ ಸಿಬ್ಬಂದಿ ಯಾವುದೇ ರಕ್ಷಣೆಯಿಲ್ಲದೆ ಕರೆದೊಯ್ಯುವ ವಿಡಿಯೋ ವೈರಲ್​ ಆಗಿತ್ತು. ಮಹಿಳೆಗೆ ಅನ್ಯಾಯವಾಗಿರುವುದಾಗಿ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಹೋರಾಟ ನಡೆಸಿದ್ದರು. ಪ್ರಧಾನ ಮಂತ್ರಿ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಲಾಗಿತ್ತು.

    ಇದನ್ನೂ ಓದಿ: ಅದ್ದೂರಿ ಸ್ವಾಗತದ ಬಳಿಕ ಅಜಿಂಕ್ಯ ರಹಾನೆ ಕೇಕ್ ಕತ್ತರಿಸಲು ನಿರಾಕರಿಸಿದ್ದು ಯಾಕೆ ಗೊತ್ತೇ?

    ಜನರ ರಕ್ಷಣೆಯಲ್ಲಿ ನಾನು ಸೋತೆ ಎನ್ನುತ್ತ ರಾಜೀನಾಮೆ ಸಲ್ಲಿಸಿದ ಪ್ರಧಾನಿ!
    ಇಂತದ್ದೊಂದು ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ, ಅಲ್ಲಿನ ಆರೋಗ್ಯ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ಪ್ರಧಾನಿ ಖುರೆಲ್ಸುಖ್ ಉಖ್ನಾ ಅವರೂ ರಾಜೀನಾಮೆ ಸಲ್ಲಿಸಿದ್ದಾರೆ. ಜನರ ರಕ್ಷಣೆಯಲ್ಲಿ ನಾನು ವಿಫಲವಾಗಿದ್ದೇನೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯ ರಾಜೀನಾಮೆಯನ್ನು ಅಲ್ಲಿನ ಸಂಸತ್ತು ಅಂಗೀಕರಿಸುವುದು ಬಾಕಿಯಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts