More

    video/ ಜುವೆಲ್ಲರಿ ಮಳಿಗೆಯಲ್ಲಿ ವಿದೇಶಿ ಯುವಕ-ಯುವತಿ ಮಾಡಿದ್ದೇನು ಗೊತ್ತಾ?

    ಗದಗ: ಆಭರಣ ಮಳಿಗೆಗೆ ಯುವಕ-ಯುವತಿ ಬಂದದ್ದು ಬಂಗಾರದ ಮೂಗುತಿ ಖರೀದಿಸಲು. ಆದರೆ, ಅಲ್ಲಿ ನಡೆದದ್ದೇ ಬೇರೆ. ಅಂಗಡಿ ಮಾಲೀಕನನ್ನೇ ಯಾಮಾರಿಸಿದ ಚಾಲಾಕಿ ಜೋಡಿ ಹಣ ಎಗರಿಸಿ ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ರೋಣ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜುವೆಲ್ಲರಿ ಮಳಿಗೆಗೆ ವಿದೇಶಿಗರ ಸೋಗಿನಲ್ಲಿ ನಿನ್ನೆ(ಬುಧವಾರ)

    ದ ಯುವಕ-ಯುವತಿ ಮಳಿಗೆ ಮಾಲೀಕನನ್ನೇ ಯಾಮಾರಿಸಿದ್ದಾರೆ. ಮೂಗುತಿ ಬೇಕೆಂದು ಬಂದ ಅವರು ನಾವು ವಿದೇಶಿಗರು. ನಮ್ಮ ಬಳಿ ವಿದೇಶಿ ಕರೆನ್ಸಿ ಇವೆ ಎಂದಿದ್ದಾರೆ. ಇದೇ ವೇಳೆ ಇಂಡಿಯನ್‌ ಕರೆನ್ಸಿ ಹೇಗೆ ಇರುತ್ತವೆ ಎಂದೂ ಕುತೂಹಲದಿಂದ ಪ್ರಶ್ನಿಸಿದ್ದಾರೆ. ಇವರ ಮಾತಿಗೆ ಮರುಳಾದ ಮಾಲೀಕ ಕೃಷ್ಣಾ, ತನ್ನ ಬಳಿಯಿದ್ದ 2,000 ಸಾವಿರ ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ತೋರಿಸಿದ್ದಾರೆ. ಸುಮಾರು ಹೊತ್ತು ಇಂಡಿಯನ್ ಕರೆನ್ಸಿ ನೋಡುವ ನೆಪದಲ್ಲಿ ಅಲ್ಲೇ ಇದ್ದ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.

    ಇದನ್ನೂ ಓದಿರಿ ಕೋವಿಡ್ ಆಸ್ಪತ್ರೆಗೆ ಹೋದ ದಿನವೇ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಡಿಸ್ಚಾರ್ಜ್​

    ಜುವೆಲ್ಲರಿ ಶಾಪ್​ಗೆ ಬಂದ ಯುವಕ-ಯುವತಿಗೆ ಮಾಲೀಕ ಕೃಷ್ಣ, ಇಂಡಿಯನ್​ ಕರೆನ್ಸಿ ತೋರಿಸುತ್ತ ತಮಗರಿವಿಲ್ಲದಂತೆ 18 ಸಾವಿರ ರೂ. ಕಳೆದುಕೊಂಡಿದ್ದಾರೆ. ತಾನು ಮೋಸ ಹೋಗಿದ್ದೇನೆಂದು ಅವರಿಗೆ ಗೊತ್ತಾಗಿದ್ದೇ ಯುವಕ-ಯುವತಿ ಅಂಗಡಿಯಿಂದ ಹೊರ ಹೋದ ಬಳಿಕ. ಹಣವನ್ನು ಲೆಕ್ಕ ಮಾಡಿದಾಗ 18 ಸಾವಿರ ರೂ. ಕಡಿಮೆ ಬಂದಿದೆ. ರೋಣ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಚಾಲಾಕಿ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ಮೂಗುತಿ ಖರೀದಿಗೆ ಬಂದ ವಿದೇಶಿಗರು ಹಣ ದೋಚಿದರು

    ಮೂಗುತಿ ಖರೀದಿಗೆ ಬಂದ ವಿದೇಶಿಗರು ಹಣ ದೋಚಿದರು ಬಂಗಾರದ ಮೂಗುತಿ ಖರೀದಿಗೆ ವಿದೇಶಿಗರ ಸೋಗಿನಲ್ಲಿ ಬಂದ ಯುವಕ-ಯುವತಿ ಆಭರಣ ಮಳಿಗೆ ಮಾಲೀಕನನ್ನು ಹೇಗೆ ಯಾಮಾರಿಸ್ತಾರೆ ನೋಡಿ. ತಮ್ಮ ಬಳಿ ವಿದೇಶಿ ಕರೆನ್ಸಿ ಇವೆ, ಇಂಡಿಯನ್‌ ಕರೆನ್ಸಿ ಹೇಗೆ ಇರುತ್ತವೆ ತೋರಿಸಿ ಎಂದ ಖದೀಮರು ಮಾಲೀಕನ 18 ಸಾವಿರ ಹಣ ಎಗರಿಸಿದ್ದಾರೆ. ಗದಗ ಜಿಲ್ಲೆಯ ರೋಣ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜುವೆಲ್ಲರಿ ಶಾಪ್​ನಲ್ಲಿ ಈ ಕೃತ್ಯ ನಡೆದಿದೆ.#Foreigners #JeweleryShop #Gadaga

    Posted by Vijayavani on Wednesday, July 15, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts