More

    ಈಕೆಯ ಬಲೆಗೆ ಬಿದ್ದ 10ಕ್ಕೂ ಹೆಚ್ಚು ಮಂದಿಗೆ ಎದುರಾಯ್ತು ಭಾರಿ ಸಂಕಷ್ಟ!

    ದಾವಣಗೆರೆ: ಇಲ್ಲೊಬ್ಬ ಖತರ್ನಾಕ್​ ಮಹಿಳೆ ಸೈಟ್​ ಮಾರಾಟದ ನೆಪದಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಪೀಕಿದ್ದು, ಈಕೆಯ ವಿರುದ್ಧ ಕೇಸ್​ ದಾಖಲಾಗಿದೆ.

    ಪ್ರೀತಿ ಬನ್ನಿಕಟ್ಟಿ (40) ಆರೋಪಿ. ತನ್ನ ಹೆಸರಲ್ಲಿದ್ದ ಸೈಟ್ ಮಾರಾಟ ಮಾಡುವುದಾಗಿ ಗ್ರಾಹಕರಿಗೆ ಬಲೆ ಬೀಸುತ್ತಿದ್ದ ಪ್ರೀತಿ ಬನ್ನಿಕಟ್ಟಿ, 10ಕ್ಕೂ ಹೆಚ್ಚು ಜನರಿಂದ ಹಣ ಪಡೆದು ವಂಚಿಸಿದ್ದಾಳೆ. ಮನೆ ಮನೆಗೆ ಹೋಗಿ ಪ್ರತ್ಯೇಕವಾಗಿ ವ್ಯವಹಾರ ಕುದುರಿಸುತ್ತಿದ್ದ ಆರೋಪಿ, ಮಹಿಳೆಯರಿಂದ ಹಣ ಪಡೆದು ಸೈಟ್​ ರಿಜಿಸ್ಟ್ರಾರ್​ ಮಾಡಿ ಕೊಡುತ್ತಿರಲಿಲ್ಲ.

    ಈಕೆಯ ಬಲೆಗೆ ಬಿದ್ದ 10ಕ್ಕೂ ಹೆಚ್ಚು ಮಂದಿಗೆ ಎದುರಾಯ್ತು ಭಾರಿ ಸಂಕಷ್ಟ!ಇದೇ ರೀತಿ ಶೈಲಜಾ ಎಂಬುವವರಿಗೆ ಸೈಟ್ ತೋರಿಸಿ 15 ಲಕ್ಷ ರೂಪಾಯಿ ಪಡೆದು ಪ್ರೀತಿ ಮೋಸ ಮಾಡಿದ್ದಳು. ಈ ಬಗ್ಗೆ ಶೈಲಜಾ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ಬಯಲಾಗಿದೆ.

    ಸೀರೆ ವ್ಯಾಪಾರ ಮಾಡುತ್ತಿದ್ದ ಮಹಿಳೆಯಿಂದಲೂ 6 ಲಕ್ಷ ರೂ. ಸಾಲ ಪಡೆದು ಅವರಿಗೂ ಪ್ರೀತಿ ವಂಚಿಸಿದ್ದಾಳೆ ಎಂದು ಆರೋಪಿಸಿಲಾಗಿದೆ. ಚೆಕ್ ನೀಡಿ ಹಣ ಪಡೆಯುತ್ತಿದ್ದ ಪ್ರೀತಿ ಕೊನೆಗೆ ವಾಪಸ್​ ಕೊಡುತ್ತಿರಲಿಲ್ಲ. ಅಕೌಂಟ್​ನಲ್ಲೂ ಹಣ ಇರುತ್ತಿರಲಿಲ್ಲ ಎಂದು ಮೋಸ ಹೋದ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಪ್ರೀತಿಯನ್ನು ವಶಕ್ಕೆ ಪಡೆದಿದ್ದಾರೆ.

    ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

    ಮದುವೆಗೆ ವಧು-ವರ ಹುಡುಕುವ ಮುನ್ನ ಎಚ್ಚರ! ನಿಮ್ಮ ಲೈಫ್​ಗೆ ಈ ಗ್ಯಾಂಗ್ ಎಂಟ್ರಿಕೊಟ್ರೆ ಮುಗಿದೇ ಹೋಯ್ತು…​

    ರಾತ್ರೋರಾತ್ರಿ ಮನೆಗೆ ಬಂದ ಪರ ಪುರುಷನೊಂದಿಗೆ ಸೊಸೆ ಲವ್ವಿ-ಡವ್ವಿ! ಎಚ್ಚರಗೊಂಡ ಅತ್ತೆಗೆ ಕಾದಿತ್ತು ಗಂಡಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts