More

    ಮಗನ ಬೆಡ್ ಕ್ಲೀನ್ ಮಾಡಲು ಬಂದ ಅಮ್ಮನಿಗೆ ಶಾಕ್! ಅಯ್ಯಯ್ಯೋ ಇಲ್ಲಿ ನೋಡಿ ಎಂದು ವಿಡಿಯೋ ಹಂಚಿಕೊಂಡ ಮಹಿಳೆ

    ವಾಷಿಂಗ್ಟನ್: ಮಕ್ಕಳಿರುವ ಮನೆಯನ್ನು ಶುದ್ಧವಾಗಿಟ್ಟುಕೊಳ್ಳುವುದು ಒಂದು ಸಾಹಸ ಮಾಡಿದಂತೆಯೇ. ಎಲ್ಲೆಂದರಲ್ಲಿ ಕಸ ಕಡ್ಡಿ ಎಸೆಯುವಲ್ಲಿ ಮಕ್ಕಳು ಎಕ್ಸ್​ಪರ್ಟ್ ಎನ್ನಬಹುದು. ಅದೇ ರೀತಿಯ ಮಗನೊಬ್ಬನಿಂದಾಗಿ ತಾಯಿ ಶಾಕ್ ಆಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಅಮೆರಿಕದ ಲೆಕ್ಸಿಂಗ್ಟನ್‌ನಲ್ಲಿ ವಾಸಿಸುವ ಅಮಂಡಾ ನೈಬರ್ಟ್ ಇತ್ತೀಚೆಗೆ ಅವರ ಮಗನ ಬೆಡ್ ರೂಂ ಸ್ವಚ್ಛ ಮಾಡಲೆಂದು ಹೋಗಿದ್ದಾರೆ. ಗೋಡೆಗೆ ತಾಕಿಕೊಂಡಿದ್ದ ಅವನ ಮಂಚವನ್ನು ತೆಗೆದು ಸ್ವಚ್ಛಗೊಳಿಸೋಣ ಎಂದು ಮಂಚವನ್ನು ಎಳೆದಿದ್ದಾರೆ. ಆಗ ಅಲ್ಲಿ ಕಂಡ ಭಯಾನಕ ದೃಶ್ಯವನ್ನು ಕಂಡು ಗಾಬರಿಗೊಂಡ ಆಕೆ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ.

    ಮಗನ ಬೆಡ್ ಕ್ಲೀನ್ ಮಾಡಲು ಬಂದ ಅಮ್ಮನಿಗೆ ಶಾಕ್! ಅಯ್ಯಯ್ಯೋ ಇಲ್ಲಿ ನೋಡಿ ಎಂದು ವಿಡಿಯೋ ಹಂಚಿಕೊಂಡ ಮಹಿಳೆ

    ಮಗ ಮನೆಯಲ್ಲಿ ಕುಳಿತು ಅದೇನೇ ತಿಂಡಿ ತಿಂದರೂ ಅದರ ಕವರ್​ ಅನ್ನು ಕಸದ ಬುಟ್ಟಿಗೆ ಹಾಕುವ ಬದಲು ಮಂಚದ ಕೆಳಗೇ ಹಾಕಿದ್ದಾನೆ. ನೀರಿನ ಬಾಟೆಲ್, ಜ್ಯೂಸ್ ಬಾಟೆಲ್​ನಿಂದ ಹಿಡಿದು ಅಲ್ಲಿ ಕಸದ ರಾಶಿಯೇ ತುಂಬಿಬಿಟ್ಟಿದೆ. ಅದನ್ನೇ ಆಕೆ ವಿಡಿಯೋದಲ್ಲಿ ಹಂಚಿಕೊಂಡಿದ್ದು, ವೀಕ್ಷಕರು ಅದಕ್ಕೆ ಹಲವಾರು ಕಾಮೆಂಟ್ ಮಾಡಲಾರಂಭಿಸಿದ್ದಾರೆ. ಅನೇಕರು ಇದು ನನ್ನ ಮಗ ಮಾಡುವ ಕಸಕ್ಕಿಂತ ಕಡಿಮೆಯಿದೆ ಎಂದರೆ ಇನ್ನು ಕೆಲವರು ಅಯ್ಯಯ್ಯೋ ಅದೇನು ಮನೆಯೋ ಇಲ್ಲ ಕಸದ ತೊಟ್ಟಿಯೋ ಎಂದು ಟೀಕಿಸಲಾರಂಭಿಸಿದ್ದಾರೆ. (ಏಜೆನ್ಸೀಸ್)

    ಪಿಓಕೆಯಲ್ಲಿ ಇಮ್ರಾನ್​ ಖಾನ್​ ಪಕ್ಷಕ್ಕೆ ಭರ್ಜರಿ ಗೆಲುವು: ಕಾಶ್ಮೀರವನ್ನು ಪಾಕ್​ಗೆ ಸೇರಿಸಿಕೊಳ್ಳಲು ಪ್ಲ್ಯಾನ್​

    ಮೂರು ವರ್ಷಗಳ ಹಿಂದೆಯೇ ನಟಿ ಜಯಂತಿ ವಿಚಾರದಲ್ಲಾಗಿತ್ತು ಮಹಾ ಎಡವಟ್ಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts