More

    ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಮುಷ್ಕರ

    ಮೊಳಕಾಲ್ಮೂರು: ಮುಖ್ಯ ರಸ್ತೆ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ ಎಂದು ಆಪಾದಿಸಿ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಾಲೂಕು ಆಡಳಿತ ಸೌಧದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

    ಬಹು ವರ್ಷಗಳ ನಂತರ 29 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಮೊಳಕಾಲ್ಮೂರಿನ ಮುಖ್ಯ ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ತಾಲೂಕು ದಂಡಾಧಿಕಾರಿ ಸೂಚನೆ ಕೊಟ್ಟರೂ ಇಂಜಿನಿಯರ್ ಮತ್ತು ಗುತ್ತಿಗೆದಾರರು ನಿರ್ಲಕ್ಷೃ ವಹಿಸಿದ್ದಾರೆ ಎಂದು ದೂರಿದರು.

    ಸಾರ್ವಜನಿಕರಿಗೆ ಪರ್ಯಾಯ ಸೇವಾ ರಸ್ತೆ ಇಲ್ಲದೆ, ತಗ್ಗು, ಗುಂಡಿಗಳ ಮಧ್ಯೆ ಪ್ರಾಣದ ಹಂಗು ತೊರೆದು ಸಾಗುವಂತಾಗಿದೆ. ಮಳೆ ನೀರು, ಕೊಳಚೆ ಸರಾಗಿ ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿಲ್ಲ. ಇದ್ದ ಚರಂಡಿಗಳನ್ನು ನೆಲಸಮ ಮಾಡಿದ್ದಾರೆ. ಕುಡಿಯುವ ನೀರಿನ ಪೈಪ್‌ಲೈನ್‌ಗೆ ತೇಪೆ ಹಚ್ಚುವ ಕೆಲಸವಾಗಿದೆ ಎಂದು ಆರೋಪಿಸಿದರು.

    ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ ಫೆ.1ರಂದು ಎತ್ತು ಗಾಡಿ ಸಮೇತ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಸಂಘಟನೆ ಪದಾಧಿಕಾರಿಗಳಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೊಂಡಾಪುರ ಪರಮೇಶಿ, ರವಿಕುಮಾರ, ಮಂಜುನಾಥ, ನಿಂಗಣ್ಣ, ಕನಕ ಶಿವಮೂರ್ತಿ, ಕೃಷ್ಣಮೂರ್ತಿ, ಮುಕ್ಕಣ್ಣ, ಈರಣ್ಣ, ಮಹೇಂದ್ರ, ದುರುಗಪ್ಪ, ಉಮೇಶ, ಗಂಗಾಧರ ಇತರರಿದ್ದರು.

    ಮೂಲ ಸೌಕರ್ಯಗಳ ಲಭ್ಯತೆಯಲ್ಲಿ ರಸ್ತೆ ಅಭಿವೃದ್ಧಿ ಆಗಬೇಕೆಂದು 2- 3 ಬಾರಿ ಸಭೆ ನಡೆಸಿ ಗುತ್ತಿಗೆದಾರ ಮತ್ತು ಇಂಜಿನಿಯರ್‌ಗೆ ಸೂಕ್ತ ನಿರ್ದೇಶನ ನೀಡಿದರೂ ನಿರ್ಲಕ್ಷೃ ಮಾಡುತ್ತಿರುವ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು.
    ಟಿ.ಸುರೇಶ್‌ಕುಮಾರ್ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts