More

    ಬಡವರಿಗೆ ಆಹಾರದ ಕಿಟ್ ವಿತರಣೆ

    ಮೊಳಕಾಲ್ಮೂರು: ಪಟ್ಟಣದ ರೇಷ್ಮೆ ಸೀರೆ ನೇಕಾರಿಕೆ ಕಾರ್ಮಿಕನೊಬ್ಬ 800 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಹಸಿದವರಿಗೆ ನೆರವಾಗಿದ್ದಾರೆ.

    ಕಾರ್ಮಿಕ ಮಂಚಿ ಮಾರುತಿ ಆರ್ಥಿಕವಾಗಿ ಸ್ಥಿತಿವಂತರಲ್ಲ. ರೇಷ್ಮೆ ಸೀರೆ ನೇಕಾರಿಕೆ ಮತ್ತು ಸೀರೆ ಮಾರಾಟವೇ ಕುಲಕಸುಬಾಗಿದೆ. ಆದರೂ ಕರೊನಾದಿಂದ ಸಮಸ್ಯೆ ಅನುಭವಿಸುತ್ತಿರುವ ಜನರಿಗೆ ಆಹಾರ ಕಿಟ್ ವಿತರಣೆ ಮಾಡಿ ಮಾದರಿಯಾಗಿದ್ದಾರೆ.

    ಎಲ್ಲ ಸಮುದಾಯದ 810 ಕುಟುಂಬಗಳಿಗೆ 2.50 ಲಕ್ಷ ರೂ. ವೆಚ್ಚದಲ್ಲಿ ತಲಾ 300 ರೂಪಾಯಿ ಮೌಲ್ಯದ ಆಹಾರದ ಕಿಟ್ ಕೊಟ್ಟಿದ್ದಾರೆ. ನಿತ್ಯ ಅನ್ನದಾನ ಸೇವೆ ಮಾಡುತ್ತಿದ್ದು, ಈ ಕಾರ್ಯಕ್ಕೆ ನೇಕಾರಿಕೆ ಕಾರ್ಮಿಕರಾದ ಮಹೇಶ, ಎಂ.ಮಂಜು, ರವಿತೇಜ, ಮರ‌್ಲಹಳ್ಳಿ ಮಹೇಶ, ಕೋಟೆ ತಿಪ್ಪೇಶಿ, ಪ್ರಶಾಂತ್, ಜೀವನ್ ಕೈಜೋಡಿಸಿದ್ದಾರೆ.

    ನೇಕಾರ ಮಂಚಿ ಮಾರುತಿ ಹೇಳಿಕೆ: ನಾನು ಬಡವನಾದರೂ ಪರಮಾತ್ಮ ಒಪ್ಪೊತ್ತಿನ ಊಟಕ್ಕೆ ಕೊರತೆ ಮಾಡಿಲ್ಲ. ಬೆವರು ಸುರಿಸಿ ದುಡಿಯುವ ಹಣದಲ್ಲಿ ಒಂದಿಷ್ಟು ಬಡವರಿಗೆ ಸಹಾಯ ಮಾಡಬೇಕೆಂಬ ಅಭಿಲಾಷೆಯಿಂದ 810 ಬಡಕುಟುಂಬಗಳಿಗೆ ಕಿಟ್ ವಿತರಣೆ ಮಾಡಿದ್ದೇನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts