More

    ಊರಿಗೊಂದು ಕೆರೆ ಇದ್ದರೆ ರೈತರಿಗೆ ನೆಮ್ಮದಿ

    ಕಡೂರು: ಊರಿಗೊಂದು ಕೆರೆ ಇದ್ದರೆ ರೈತರಿಗೆ ನೆಮ್ಮದಿ ಎಂಬುದನ್ನು ಅರಿತ ಪೂರ್ವಜರು ವೈಜ್ಞಾನಿಕವಾಗಿ ಕೆರೆಗಳನ್ನು ನಿರ್ಮಿಸಿದ್ದರು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕಿ ಗೀತಾ ಹೇಳಿದರು.
    ತಾಲೂಕಿನ ಸೀಗೇಹಡ್ಲು ಗ್ರಾಮದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಪಡಿಸಿದ ಕೆರೆಯನ್ನು ಗ್ರಾಮಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ಊರಿನಲ್ಲೊಂದು ಕೆರೆ ಇದ್ದರೆ ಅಲ್ಲಿನ ಅಂತರ್ಜಲ ಹೆಚ್ಚುತ್ತದೆ. ಗ್ರಾಮಕ್ಕೆ ನೀರಿನ ಬರ ಇರುವುದಿಲ್ಲ. ಜಾನುವಾರುಗಳಿಗೂ ಕುಡಿಯುವ ನೀರಿನ ಆಸರೆಯಾಗುತ್ತದೆ ಎಂಬುದನ್ನು ಅರಿತ ಪೂರ್ವಿಕರು ಕೆರೆ ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ಅದೇ ಆಶಯದಲ್ಲಿ ಧರ್ಮಸ್ಥಳ ಯೋಜನೆ ಮೂಲಕ ನಮ್ಮೂರು ನಮ್ಮ ಕೆರೆ ಎಂಬ ಕಲ್ಪನೆಯಲ್ಲಿ ರಾಜ್ಯದ ಆಯ್ದ ಗ್ರಾಮಗಳಲ್ಲಿ ಗ್ರಾಮದ ಕೆರೆ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
    ತಾಲೂಕಿನಲ್ಲಿ ಸೀಗೇಹಡ್ಲು ಗ್ರಾಮದ ಕೆರೆ ಯೋಜನೆ ಮೂಲಕ ರಾಜ್ಯದಲ್ಲಿ ಅಭಿವೃದ್ಧಿಪಡಿಸಿದ 657ನೇ ಕೆರೆಯಾಗಿದ್ದು ಒಟ್ಟು 12.25 ಲಕ್ಷ ರೂ. ವೆಚ್ಚವಾಗಿದೆ. ಗ್ರಾಮಸ್ಥರು 4.91ಲಕ್ಷ ಹಣ ಭರಿಸಿದ್ದಾರೆ. ಯೋಜನೆಯಿಂದ 7.33 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
    ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಯೋಜನಾಧಿಕಾರಿ ಪ್ರಸಾದ್, ಚಿತ್ರದುರ್ಗ ಕೆರೆ ವ್ಯಾಪ್ತಿ ಇಂಜಿನಿಯರ್ ಹರೀಶ್, ಕೃಷಿ ಮೇಲ್ವಿಚಾರಕ ಮದನ್, ಸೇವಾ ಪ್ರತಿನಿಧಿಗಳು, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಆಶಾ ತಮ್ಮಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್, ಸದಸ್ಯರಾದ ಮಲಿಯಪ್ಪ, ಸೌಭಾಗ್ಯ ಶಶಿಕುಮಾರ್,ಸೀಗೇಹಡ್ಲು ಹರೀಶ್, ಕುಮಾರ್, ಮುಖಂಡ ಸಿಗೇಹಡ್ಲು ಹರೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts