More

    ಆಗಸ್ಟ್ 15ರ ಬಳಿಕ ಶಾಲೆ ಆರಂಭಕ್ಕೆ ಒಲವು

    ಮೊಳಕಾಲ್ಮೂರು: ಪರಸ್ಪರ ಅಂತರ ಕಾಯ್ದುಕೊಂಡು ಆಗಸ್ಟ್ 15 ರ ನಂತರ ಶಾಲೆ ಆರಂಭಿಸಲು ನಮ್ಮ ಅಭ್ಯಂತ ರವಿಲ್ಲ ಎಂದು ಬಹುತೇಕ ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು.

    ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಬಹುತೇಕ ಪಾಲಕರು ಮಕ್ಕಳ ಭವಿಷ್ಯ ಹಾಗೂ ಹಿತರಕ್ಷಣೆಗೆ ಸರ್ಕಾರ ಕೈಗೊಂಡ ನಿಲುವಿಗೆ ನಮ್ಮ ಸಹಮತವಿದೆ ಎಂದರು.

    ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ್ಯದ ಮೊದಲ ಮೆಟ್ಟಿಲಾಗಿದೆ. ಕರೊನಾ ಬಗ್ಗೆ ಜಾಗೃತಿ ವಹಿಸಿ ಪರೀಕ್ಷೆ ನಡೆಸುವುದು ಸೂಕ್ತ. ಆಗಸ್ಟ್ 15ರ ನಂತರ ಶಾಲೆಗಳ ಪ್ರಾರಂಭಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.

    ಶಾಲೆಯಲ್ಲಿ 8, 9,10ನೇ ತರಗತಿಯ 425ಕ್ಕೂ ಹೆಚ್ಚು ಮಕ್ಕಳನ್ನು ತರಗತಿವಾರು ಕೂರಿಸಿ ಪಾಠ ಮಾಡುವ ಬದಲು ಬೆಳಗ್ಗೆ 8- 12, ಮಧ್ಯಾಹ್ನ 1- 5ರ ತನಕ ಪಾಳಿ ಪದ್ಧತಿಯಲ್ಲಿ ಬೋಧನೆ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

    ಉಪ ಪ್ರಾಚಾರ್ಯ ಎಸ್.ಸುರೇಂದ್ರನಾಥ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮದ್ ವಸೀವುಲ್ಲಾ, ಸದಸ್ಯರಾದ ನರೇಂದ್ರ, ಜಯಶ್ರೀ, ರತ್ನಮ್ಮ, ಗಂಗಮ್ಮ, ಶ್ರೀರಾಮುಲು, ಮಂಜುಳಾ, ಶಿಕ್ಷಕರಾದ ಎಂ.ಗಂಗಾರಡ್ಡಿ, ಟಿ.ತಿಮ್ಮೇಶಪ್ಪ, ಕಲ್ಲೇಶಪ್ಪ, ಪ್ರಸನ್ನಕುಮಾರ್, ಸುಜಾತಾ, ಶಶಿಕಲಾ, ಹುಸೇನ್ ಸಾಬ್, ಪಾಲಕರಾದ ವೀಣಾ, ಲಲಿತಮ್ಮ, ಶಿಲ್ಪಾ, ಸುಮಿತ್ರಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts