More

    ತ್ರೀವೀರಭದ್ರೇಶ್ವರ ರಥೋತ್ಸವಕ್ಕೆ ಸಕಲ ಸಿದ್ಧತೆ

    ತಾವರಗೇರಾ: ಪಟ್ಟಣದಲ್ಲಿನ ತ್ರಿವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಫೆ.14ರಿಂದ ಕಾರ್ಯಕ್ರಮಗಳು ಆರಂಭವಾಗಲಿವೆ. ಮೊದಲನೇ ದಿನ ಪಟ್ಟಣದ ಮೇಗಳಪೇಟೆಯ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ,

    ಇದನ್ನೂ ಓದಿ: ‘ಮಂಗಳೂರು ರಥೋತ್ಸವ’

    ಫೆ.15ರಂದು ಕರಿವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬೆಳ್ಳಿ ಉತ್ಸವ ಮೂರ್ತಿಗಳಿಂದ ಒಳಕೋಟಿ ವೀರಭದ್ರೇಶ್ವರ ಶಿಲಾಮೂರ್ತಿಯನ್ನು ಅಲಂಕರಿಸಲಾಗುವುದು. ಫೆ.16ರಂದು ಮೇಗಳಪೇಟೆ ದೇವಸ್ಥಾನದಿಂದ ಗುಗ್ಗುಳ, ವೀರಗಾಸೆ, ಶಿವತಾಂಡವ ನೃತ್ಯ, ಕಳಶ, ಕುಂಭೋತ್ಸವ ಸಕಲ ಮಂಗಲವಾದ್ಯಗಳೊಂದಿಗೆ ಒಳಕೋಟಿ ವೀರಭದ್ರೇಶ್ವರ ದೇವಸ್ಥಾನ ತಲುಪುವುದು.

    ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಉಚಿತ ಸಾಮೂಹಿಕ ಮದುವೆ ಜರುಗಲಿವೆ. ಸಾಯಂಕಾಲ ರಥೋತ್ಸವ ನೆರೆವೇರಲಿದ್ದು, ನಂತರ, ಧರ್ಮ ಜಾಗೃತಿ ಸಭೆ ನಡೆಯಲಿದೆ. ಮುದೇನೂರು ಮಠದ ಶ್ರೀ ಮರುಳಸಿದ್ಧ ದೇವರು, ಕೊಪ್ಪಳ ಗವಿಮಠದ ಶ್ರೀಗಳು, ಗುಮ್ಮಗೋಳ ಮಠದ ಶ್ರೀಅಭಿನವ ಚಂದ್ರಶೇಖರ, ಗುಡದೂರ ಮಠದ ನೀಲಕಂಠಯ್ಯ, ಸುಳೇಕಲ್ ತಾತಾನವರು, ಕನಕಗಿರಿ ಶ್ರೀ ಗಳು , ಯಲಬುರ್ಗಾ ಮಠದ ಬಸವಲಿಂಗೇಶ್ವರ ಶಿವಾಚಾರ್ಯ ಪಾಲ್ಗೊಳ್ಳಲಿದ್ದಾರೆ.

    ದಿ.17ರಂದು, ಎತ್ತುಗಳ ಶಕ್ತಿ ಪ್ರದರ್ಶನ, 1.5 ಟನ್ ಭಾರದ ಕಲ್ಲು ಎಳೆಯುವುದು, ರಕ್ತದಾನ ಶಿಬಿರ ಏರ್ಪಡಿಸಿದೆ. ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಜಿಲ್ಲಾ ಆಯುಷ್ ಇಲಾಖೆಯಿಂದ ನಿಯೋಜಿಸಿದೆ ಎಂದು ಜಾತ್ರಾ ಕಮೀಟಿತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts