More

    ಮೌಲ್ಯಾಧಾರಿತ ಶಿಕ್ಷಣ ಅವಶ್ಯ

    ಮೊಳಕಾಲ್ಮೂರು: ಸ್ಪರ್ಧಾತ್ಮಕ ಲೋಕದಲ್ಲಿ ಮಕ್ಕಳು ಮೌಲ್ಯಾಧಾರಿತ ಶಿಕ್ಷಣ ಪಡೆದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ಸಿದ್ದಯ್ಯನಕೋಟೆ ಶ್ರೀ ಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

    ತಾಲೂಕಿನ ಸಿದ್ದಯ್ಯನಕೋಟೆ ಚಿತ್ತರಗಿ ವಿಜಯಮಹಾಂತೇಶ್ವರ ಶ್ರೀಮಠದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ತಾಲೂಕುಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರದ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಇವತ್ತಿನ ಮಕ್ಕಳೇ ನಾಳಿನ ದೇಶ ಕಟ್ಟುವ ನಾಯಕರು. ಜನ್ಮಕೊಟ್ಟ ಅಪ್ಪ, ಅಮ್ಮ ಪಾಲನೆ ಮಾಡಿದರೆ ಸಮಾಜಮುಖಿ ಬೆಳವಣಿಗೆಗೆ ಶಿಕ್ಷಣವೇ ಅಡಿಗಲ್ಲಾಗುತ್ತದೆ. ಆದ್ದರಿಂದ ಶಿಕ್ಷಕರ ಮಾರ್ಗದರ್ಶನದಂತೆ ಅಭ್ಯಾಸ ಮಾಡಬೇಕು ಎಂದರು.

    ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತೆ ಸುನಿತಾ ಮಲ್ಲಿಕಾರ್ಜುನ್ ಮಾತನಾಡಿ, ಮಕ್ಕಳಿಗೆ ಶಾಲೆ ದೇಗುಲವಿದ್ದಂತೆ. ದೊಡ್ಡವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

    ಸಂಸ್ಥೆಯ ತಾಲೂಕು ಅಧ್ಯಕ್ಷ ಟಿ.ರೇವಣ್ಣ ಮಾತನಾಡಿ, ವಿದ್ಯೆ ನಿಂತ ನೀರಲ್ಲ, ಅದು ಹರಿಯುವ ನದಿಯಂತೆ. ಸ್ವಾರ್ಥಕ್ಕಾಗಿ ಓದುವುದು ಬೇಡ. ಸಮಾಜಸೇವೆಯ ಹಂಬಲ ಇರಬೇಕು ಎಂದು ತಿಳಿಸಿದರು.

    ಬಿಇಒ ಎಂ.ಸೋಮಶೇಖರ್, ಬಿಆರ್‌ಸಿ ಎನ್.ಹನುಮಂತಪ್ಪ, ಸಂಸ್ಥೆಯ ಸಂಘಟಕರಾದ ಎಂ.ಎನ್.ವಿಜಯಲಕ್ಷ್ಮಿ, ಎಸ್.ಈ.ದೇವಯ್ಯ, ಬಿ.ಬಡಯ್ಯ, ಡಿ.ವಿ.ಕೃಷ್ಣಮೂರ್ತಿ, ಕೆ.ಪಿ.ಗಂಗಾಧರಪ್ಪ, ಜಿಂಕಾ ಶ್ರೀನಿವಾಸ್,ನಾಗರಾಜ್, ಎ.ಸಿ.ರೇವಣ್ಣ,ಪ್ರಶಾಂತ್, ವಿ.ಎಲ್.ಪಾಟೀಲ್, ವಿಜಯಕುಮಾರ್, ಟಿ.ಎಂ.ಅಶೋಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts