More

    ಸಮ ಸಮಾಜಕ್ಕೆ ತತ್ವಾದರ್ಶ ಪಾಲಿಸಿ

    ಮೊಳಕಾಲ್ಮೂರು: ಸಮಾಜ ಅಸಮಾನತೆ, ದುರಭ್ಯಾಸಗಳಿಂದ ದೂರವಿರಲು ಬಸವಾದಿ ಶಿವಶರಣರ ತತ್ವಾದರ್ಶ ಪಾಲಿಸುವ ಅಗತ್ಯವಿದೆ ಎಂದು ಸಿದ್ದಯ್ಯನ ಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಬೊಮ್ಮದೇವರಹಳ್ಳಿ ಸೋಮವಾರ ತಾಲೂಕಿನ ಸಿದ್ದಯ್ಯನಕೋಟೆ ಮಠದಿಂದ ಏರ್ಪಡಿಸಿದ್ದ ಮಹಾಂತ ಜೋಳಿಗೆ ಅಭಿಯಾನ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಆಧುನಿಕತೆ ಮುಂದುವರಿದಂತೆ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಪೂರ್ವಜರು ಆಚರಿಸಿಕೊಂಡು ಬಂದ ಸತ್ಯ, ನಿಷ್ಠೆ, ಸಂಸ್ಕೃತಿ, ಸಂಸ್ಕಾರ ಕಣ್ಮರೆ ಆಗುತ್ತಿವೆ. ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಪೋಷಣೆ ಮಾಡಬೇಕು. ಯಾರಿಗೂ ಚ್ಯುತಿ ಬರದಂತೆ ಬದುಕಬೇಕು ಎಂದು ತಿಳಿಸಿದರು.

    ಸಮ ಸಮಾಜ ನಿರ್ಮಾಣ, ಅಂಧಕಾರ, ಮೌಢ್ಯಾಚರಣೆ ನಿವಾರಣೆಯೇ ಮಹಾಂತ ಜೋಳಿಗೆ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.

    ಸಾಹಿತಿ ಜಿ.ಎಸ್.ವಸಂತ ಮಾಸ್ತರ ಮಾತನಾಡಿ, ಗ್ರಾಮೀಣರನ್ನು ದುಶ್ಚಟ ಮುಕ್ತರನ್ನಾಗಿಸಲು ಹೊರಟಿರುವ ಮಹಾಂತ ಜೋಳಿಗೆ ಉದ್ದೇಶ ಸಕಾರಾತ್ಮಕವಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

    ಶಿಕ್ಷಕ ಎಂ.ಡಿ.ಲತೀಫ್ ಮಾಸ್ತರ ಮಾತನಾಡಿ, ಪ್ರತಿ ವರ್ಷವೂ ಗಡಿನಾಡ ಉತ್ಸವದಂತಹ ಹತ್ತಾರು ಕಾರ್ಯಕ್ರಮ ನಡೆಸುತ್ತಾ ಬಂದಿರುವ ಶ್ರೀಮಠವು ಆರ್ಥಿಕವಾಗಿ ತೀರಾ ಹಿಂದುಳಿದಿದ್ದರೂ ಸಮಾಜ ಪರಿವರ್ತನೆ ಕಾರ್ಯದಿಂದ ಮಾತ್ರ ಹಿಂದೆ ಸರಿದಿಲ್ಲ. ಇದರ ಮುಂದುವರಿದ ಭಾಗವಾಗಿ ಫೆ.3ರಿಂದ 7ರ ವರೆಗೆ ಬೊಮ್ಮದೇವರಹಳ್ಳಿ, ತಾಯಕನಹಳ್ಳಿ, ಜೆ.ಬಿ.ಹಳ್ಳಿ, ಕೋನಸಾಗರ, ಕೊಂಡ್ಲಹಳ್ಳಿಯಲ್ಲಿ ಗ್ರಾಮಗಳಲ್ಲಿ ‘ಮಹಾಂತ ಜೋಳಿಗೆ’ ಬಸವತತ್ವ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ್, ಮುಖಂಡರಾದ ಗವಿಸಿದ್ದಪ್ಪ, ಎನ್. ಗೋವಿಂದಪ್ಪ, ಕಲ್ಲೇಶಿ, ಸಂಗೀತ ಶಿಕ್ಷಕ ಕೆ.ಒ. ಶಿವಣ್ಣ, ಎಂ. ನುಂಕೇಶ್, ಬಿ. ಗುರುಮೂರ್ತಿ, ಪಿ. ಲೋಕೇಶ್, ಪಾಪಣ್ಣ, ನೀಲಕಂಠಪ್ಪ, ದುರುಗೇಶ್, ಆನಂದ್ ಹಾಗೂ ಗ್ರಾಮಸ್ಥರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts