More

  ಗಡಿನಾಡ ಉತ್ಸವಕ್ಕೆ ಸಕಲ ಸಿದ್ಧತೆ

  ಮೊಳಕಾಲ್ಮೂರು; ಜನರಲ್ಲಿ ವೈಜ್ಞಾನಿಕ ಚಿಂತನೆ, ಧಾರ್ಮಿಕ ಪ್ರಜ್ಞೆ, ಸಹಭಾಳ್ವೆ ಹೆಚ್ಚಿಸುವ ಉದ್ದೇಶದಿಂದ ಗಡಿನಾಡು ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದರು.

  ತಾಪಂ ಸಭಾಂಗಣದಲ್ಲಿ ಬುಧವಾರ ಜರುಗಿದ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಿದ್ದಯ್ಯನ ಕೋಟೆ ಶ್ರೀಮಠದಲ್ಲಿ ಫೆ.8ರಿಂದ ಮೂರು ದಿನಗಳ ಕಾರ್ಯಕ್ರಮ ಜರುಗಲಿದೆ ಎಂದರು.

  ಸಮಿತಿ ಅಧ್ಯಕ್ಷ ಪಟೇಲ್ ಜಿ.ಪಾಪನಾಯಕ ಮಾತನಾಡಿ, ಮೂರು ದಿನಗಳ ಕಾಲ ಬಸವತತ್ವ, ಜಾನಪದ, ಸಾಂಸ್ಕೃತಿಕ ಚಟುವಟಿಕೆ, ಸಾಮೂಹಿಕ ಕಲ್ಯಾಣೋತ್ಸವ ನಡೆಯಲಿವೆ. ಆಯ್ದ ಏಳು ಗ್ರಾಮಗಳಿಗೆ ಭೇಟಿ ನೀಡಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು.ದುಶ್ಚಟ, ಮೌಢ್ಯ ಆಚರಣೆಗಳಿಂದ ದೂರ ಇರುವಂತೆ ಜನಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

  ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ವೀರೇಶ್, ಮಠದ ಕಾರ್ಯದರ್ಶಿ ಎಚ್.ಕಾಂತರಾಜ್, ಮೊಗಲಹಳ್ಳಿ ಜಯ್ಯಣ್ಣ, ಎಸ್.ಪಿ.ಲಕ್ಷ್ಮಣ, ಕೆ.ಬಸಣ್ಣ, ಪಾಲಯ್ಯ, ಜಗದೀಶ್, ಸಂಜೀವಮೂರ್ತಿ, ಡಿ.ಎಚ್.ನಾಗರಾಜ್, ತಿಪ್ಪೇಸ್ವಾಮಿ, ಗುರುಸ್ವಾಮಿ, ನಾಗರಾಜ್, ಮರಿಸ್ವಾಮಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts