More

    ಚೌಡಯ್ಯ ಗಂಗಾಮತಸ್ಥರ ಹೆಗ್ಗುರುತು

    ಮೊಳಕಾಲ್ಮೂರು: ಎಲೆಮರೆ ಕಾಯಂತಿರುವ ಗಂಗಾಮತಸ್ಥರನ್ನು ಇಂದು ಸಮಾಜ ಗುರುತಿಸಲು ವಚನಕಾರ ಅಂಬಿಗರ ಚೌಡಯ್ಯ ಕಾರಣರಾಗಿದ್ದಾರೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಬ್ಯಾಂಕ್ ಹೊನ್ನೂರಪ್ಪ ಹೇಳಿದರು.

    ಇಲ್ಲಿನ ತಾಲೂಕು ಕಚೇರಿಯಲ್ಲಿ ಮಂಗಳವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಕಾಯಕ ಯೋಗಿ, ವಚನಕಾರ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.

    12ನೇ ಶತಮಾನದ ಬಸವಾದಿ ಶರಣರಲ್ಲಿ ಒಬ್ಬರಾದ ಚೌಡಯ್ಯ, ಸಮಸಮಾಜ ನಿರ್ಮಾಣದ ಅಡಿಗಲ್ಲಾಗಿದ್ದರು. ವಚನಗಳ ಮೂಲಕ ಸಮುದಾಯದಲ್ಲಿದ್ದ ಜಾತೀಯತೆ, ಮೇಲುಕೀಳೆಂಬ ತಾರತಮ್ಯ ನೀತಿ ತೊಡೆದು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

    ತಹಸೀಲ್ದಾರ್ ಎಂ. ಬಸವರಾಜ್ ಮಾತನಾಡಿ, ಸತ್ಯ, ನಿಷ್ಠೆ, ಧರ್ಮಮಾರ್ಗದಲ್ಲಿ ನಡೆದು, ಸಮಾಜದಲ್ಲಿನ ಅಂಕುಡೊಂಕುಗಳನ್ನು ಸರಿಪಡಿಸಿ ಹೋದ ವಚನಕಾರರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

    ಸಮಾಜದ ಮುಖಂಡರಾದ ಬಿ.ಟಿ. ಹೊನ್ನೂರಪ್ಪ, ಲಕ್ಷ್ಮಣ, ಗೋವಿಂದಪ್ಪ, ಶಿವಕುಮಾರ್, ವೆಂಕಟೇಶ್, ಹೊನ್ನೂರಸ್ವಾಮಿ, ಶ್ರೀರಾಮ್, ನರೇಂದ್ರ, ಶಿರಸ್ತೇದಾರ ಅಂಜಿನಪ್ಪ, ರಂಗಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts