More

    ಕೆಲಸದ ಒತ್ತಡದಿಂದ ಮುಕ್ತಿಗೊಳಿಸಿ

    ಮೊಳಕಾಲ್ಮೂರು: ಬಾಲಮಕ್ಕಳ ಸಾಕ್ಷರತೆ, ಲಾಲನೆ, ಪಾಲನೆ ಹೊರತುಪಡಿಸಿ ಬೇರೆ ಯಾವುದೇ ಕೆಲಸದ ಹೊರೆ ಹಾಕಬಾರದು ಎಂದು ಒತ್ತಾಯಿಸಿ ಅಂಗನವಾಡಿ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು.

    ಬಾಲ ಮಕ್ಕಳ ಆರೈಕೆ ಮತ್ತು ಪ್ರಾಥಮಿಕ ಶಿಕ್ಷಣದ ಪ್ರಗತಿಗೆ ಅಂಗನವಾಡಿ ಶಿಕ್ಷಕಿಯರ ಸೇವೆ ದೊಡ್ಡದು. ಇದರ ನಡುವೆ ಜನಗಣತಿ, ಮಾತೃವಂದನಾ, ಗರ್ಭಿಣಿ, ಬಾಣಂತಿಯರ ಆರೈಕೆ, ಭಾಗ್ಯಲಕ್ಷ್ಮೀ ಯೋಜನೆ ಇನ್ನೂ ಹಲವಾರು ಸಾರ್ವಜನಿಕ ಸೇವೆಗಳ ಜವಾಬ್ದಾರಿ ಹೊರಿಸಿರುವ ಕಾರಣ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಸಿಗುತ್ತಿಲ್ಲ.

    ಸರ್ಕಾರದ ಕಾರ್ಯಕ್ರಮಗಳನ್ನು ಸಮಗ್ರವಾಗಿ ಅನುಷ್ಠಾನಗೊಳಿಸುವುದು ದೊಡ್ಡ ಸವಾಲಾಗಿದೆ. ಸಹಾಯಕಿಯರ ಮೇಲೂ ಹೆಚ್ಚು ಹೊರೆ ಬಿದ್ದಿದೆ. ಇದನ್ನ ಸರ್ಕಾರ ಮತ್ತು ಇಲಾಖೆ ಗಂಭೀರವಾಗಿ ಪರಿಗಣಿಸಿ ಅನ್ಯ ಕೆಲಸದ ಒತ್ತಡದಿಂದ ಮುಕ್ತಿಗೊಳಿಸಬೇಕು ಎಂದು ಆಗ್ರಹಿಸಿದರು.
    ಫೆಡರೇಷನ್ ತಾಲೂಕು ಅಧ್ಯಕ್ಷೆ ಲಕ್ಷ್ಮೀದೇವಿ, ಕಾರ್ಯದರ್ಶಿ ಜ್ಯೋತಿಲಕ್ಷ್ಮೀ, ಸಿಪಿಐ ಸಂಘಟನೆ ತಾಲೂಕು ಕಾರ್ಯದರ್ಶಿ ಮಹಮದ್ ಜಾಫರ್, ಸೌಭಾಗ್ಯಮ್ಮ, ಶರಣಮ್ಮ, ಲಲಿತಮ್ಮ, ಸವಿತಾ, ಸುವರ್ಣಮ್ಮ, ಭಾಗ್ಯಮ್ಮ, ಸುಧಾಮಣಿ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts