More

    ಅವಘಡಗಳ ದೃಶ್ಯ ಸೆರೆ ಕೈಬಿಡಿ

    ಮೊಳಕಾಲ್ಮೂರು: ಬೆಂಕಿ ಅವಘಡ ಕಂಡಲ್ಲಿ ವಿಡಿಯೋ ಮಾಡುವ ಆಸಕ್ತಿ ತೋರುವುದಕ್ಕಿಂತ ನಂದಿಸುವ ಉಪಾಯ ಕೈಗೊಂಡರೆ ದೊಡ್ಡ ಅನಾಹುತ ತಡೆಯಲು ಸಾಧ್ಯ ಎಂದು ಅಗ್ನಿ ಶಾಮಕ ಠಾಣಾಧಿಕಾರಿ ಸುಬಾನ್ ಸಾಬ್ ಹೇಳಿದರು.

    ಬೆಂಕಿ ಅವಘಡ ಮುನ್ನಚ್ಚರಿಕೆ ಕ್ರಮಗಳ ಕುರಿತು ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ವೇಳೆ ಮಾತನಾಡಿದರು.

    ಬೆಂಕಿ ಅವಘಡ ಸಂಭವಿಸುವಾಗ ಉದಾಸೀನ ತೋರಬಾರದು. ತಕ್ಷಣ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಬೇಕು ಎಂದು ತಿಳಿಸಿದರು.

    ಮುಖ್ಯಶಿಕ್ಷಕ ಎ.ಷಣ್ಮುಖಪ್ಪ, ಶಿಕ್ಷಕರಾದ ಯರ‌್ರಿಸ್ವಾಮಿ, ಎ.ಡಿ.ರಂಗಪ್ಪ, ಜೆ.ಪಾಪಯ್ಯ, ಸಿದ್ದಪ್ಪ, ತಿಪ್ಪಮ್ಮ, ಹೇಮಾವತಿ, ಅಗ್ನಿ ಶಾಮಕ ಸಿಬ್ಬಂದಿ ವಿ.ಜಿ.ಶಿವಕುಮಾರ್, ಎಚ್.ಜಿ.ಹನುಮಂತು, ಹನುಮಂತರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts