More

    ಕರ್ಫ್ಯೂ ಮಧ್ಯೆ ಕಂಕಣ ಭಾಗ್ಯ

    ಕೆ.ಕೆಂಚಪ್ಪ ಮೊಳಕಾಲ್ಮೂರು: ಕರೊನಾ ಕರ್ಫ್ಯೂ ಜಾರಿ ಮಧ್ಯೆಯೂ ಮೊಳಕಾಲ್ಮೂರು ತಾಲೂಕಿನಲ್ಲಿ ಭಾನುವಾರ ಮುಂಜಾನೆಯೇ ಸದ್ದಿಲ್ಲದೇ ವಿವಾಹ ಕಾರ್ಯಗಳು ಸಡಗರ, ಸಂಭ್ರಮ, ಸರಳತೆಯಿಂದ ಜರುಗಿದವು.

    ಮೇ 24ರಂದು ಶುಭ ಮುಹೂರ್ತವಿದ್ದುದರಿಂದ ಬಹಳಷ್ಟು ವಿವಾಹಗಳು ನಿಗದಿಯಾಗಿದ್ದವು. ಈ ಕಾರಣಕ್ಕೆ ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ವಿವಾಹ ಸಮಾರಂಭಗಳು ನಡೆದವು.

    ಮದುವೆ ಎಂದರೆ ಶಾಸ್ತ್ರ, ಕಾರ್ಯ, ಕಲ್ಯಾಣ ಮಂಟಪ ಮುಂಗಡ ಕಾಯ್ದಿರಿಸುವುದು, ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಭಜಂತ್ರಿ ಸದ್ದು, ಮಂಗಳ ಘೋಷಗಳು, ಚಪ್ಪರ. ಆದರೆ, ಭಾನುವಾರ ತಾಲೂಕಿನಲ್ಲಿ ನಡೆದ ಮದುವೆಗಳಲ್ಲಿ ಇದಾವುದರ ಕುರುಹೂ ಕಾಣಬರಲಿಲ್ಲ.

    ಬೆರಳೆಣಿಕೆ ಮಂದಿ ಸೇರಿಕೊಂಡು ಶಾಸ್ತ್ರ ಮುಗಿಸಿ, ತಾಳಿ ಕಟ್ಟಿಸಿ ಮನೆ ತುಂಬಿಸಿಕೊಂಡರು. ಬಹುತೇಕ ಜೋಡಿಗಳು, ವಿವಾಹ ಕಾರ್ಯಗಳಲ್ಲಿ ಪಾಲ್ಗೊಂಡಿದ್ದವರು ಪರಸ್ಪರ ಅಂತರ ಹಾಗೂ ಮಾಸ್ಕ್ ಧರಿಸಿದ್ದು ಕಂಡುಬಂದಿತು.

    ಎರಡು ವರ್ಷದಲ್ಲಿ ಇಬ್ಬರು ಗಂಡು ಮಕ್ಕಳ ಮದುವೆಯನ್ನು ಆಡಂಬರದಿಂದ ಮಾಡಿದ್ದರಿಂದ ಲಕ್ಷಾಂತರ ರೂ. ಸಾಲ ಇನ್ನೂ ತೀರಿಲ್ಲ. ಈಗ ಜೇಷ್ಠ ಪುತ್ರಿಗೆ ಕಂಕಣ ಭಾಗ್ಯ ಕೂಡಿ ಬಂದ ಹಿನ್ನೆಲೆಯಲ್ಲಿ ಕೆಲವೇ ಸಂಬಂಧಿಕರು ಸೇರಿ ಸರಳವಾಗಿ ಮದುವೆ ಕಾರ್ಯ ಮುಗಿಸಿದೆವು. ಕರೊನಾ ಕಾರಣಕ್ಕೆ ಸರ್ಕಾರದ ಆದೇಶ ಪಾಲಿಸಲೇಬೇಕು. ಇದು ಬಡ ಕುಟುಂಬದವರಿಗೆ ಸರಳ ವಿವಾಹ ಮಾಡಲು ಬಹಳಷ್ಟು ನೆರವಾಗಿದೆ.
    ಮೇಸ್ತ್ರೀ ಬಸಣ್ಣ
    ಎನ್‌ಎಂಎಸ್ ಬಡಾವಣೆ, ಮೊಳಕಾಲ್ಮೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts