More

    ಅನುರ್ತೀಣರಾದ ವಿದ್ಯಾರ್ಥಿಗಳ ಮೇಲಿರಲಿ ನಿಗಾ

    ಮೊಳಕಾಲ್ಮೂರು; ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸಿ ಶೇ.100 ರಷ್ಟು ಫಲಿತಾಂಶ ಬರುವಂತೆ ನೋಡಿಕೊಳ್ಳಿ ಎಂದು ಬಿಇಒ ಎಂ. ಸೋಮಶೇಖರ್ ಶಿಕ್ಷಕರಿಗೆ ಸೂಚಿಸಿದರು.

    ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಕುರಿತು ಶಿಕ್ಷಕರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

    ವಾರ್ಷಿಕ ಪರೀಕ್ಷೆಗೆ ಪೂರಕ ಪರೀಕ್ಷೆಯ ಫಲಿತಾಂಶವೇ ದಿಕ್ಸೂಚಿ. ಇದರಲ್ಲಿ ಶೇ.87.33ರಷ್ಟು ಫಲಿತಾಂಶ ಬಂದಿದೆ. ಅಂತಿಮ ಪರೀಕ್ಷೆಯಲ್ಲಿ ಈ ಪ್ರಮಾಣ ಶೇ. 100ಕ್ಕೆ ಏರಬೇಕು. ಪ್ರತಿ ಶಾಲೆಗಳೂ ಶೇ.100 ಇರಬೇಕು ಎಂದರು.

    ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ 31 ಶಾಲೆಗಳ 2032 ವಿದ್ಯಾರ್ಥಿಗಳಲ್ಲಿ 1982 ಮಕ್ಕಳು ಪರೀಕ್ಷೆ ಬರೆದಿದ್ದು, 1731 ಮಂದಿ ತೇರ್ಗಡೆಯಾಗಿ 251 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. 50 ಮಕ್ಕಳು ದೀರ್ಘಕಾಲಿಕ ಗೈರಾಗಿ ಪರೀಕ್ಷೆ ಬರೆದಿಲ್ಲ ಎಂದು ಮಾಹಿತಿ ನೀಡಿದರು.

    ಅಂತಿಮ ಪರೀಕ್ಷೆಗೆ ಕೇವಲ 22 ದಿನ ಉಳಿದಿವೆ. ಈ ವೇಳೆ ಪಾಠ ಪ್ರವಚನ ಬೇಡ. ಕಲಿಕೆಯಲ್ಲಿ ಹಿಂದುಳಿದ ವಿಷಯಗಳನ್ನು ಪುನರಾವರ್ತನೆ ಮಾಡಿ. ಟಿವಿ, ಮೊಬೈಲ್‌ನಿಂದ ದೂರವಿದ್ದು ಮಕ್ಕಳು ಪರೀಕ್ಷಾ ಸಿದ್ಧತೆಯತ್ತ ಚಿತ್ತ ಹರಿಸುವಂತೆ ತಿಳಿಸಿದರು.

    ಉಪ ಪ್ರಾಚಾರ್ಯ ಎಸ್. ಸುರೇಂದ್ರನಾಥ, ಇಸಿಒ ಎ. ಷಣ್ಮುಖಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ. ಮಲ್ಲಿಕಾರ್ಜುನ, ಪ್ರಾಂಶುಪಾಲ ಕೆ. ನಾಗರಾಜ್, ಮುಖ್ಯ ಶಿಕ್ಷಕರಾದ ಲತೀಫ್ ಮಾಸ್ತರ್, ಸುಚಿತ್ರಾ, ಡಿ.ವಿ. ಕೃಷ್ಣಮೂರ್ತಿ, ಎನ್.ಯು.ರೇಹಮಾನ್, ರಾಜಶೇಖರ್, ಟಿ. ತಿಮ್ಮೇಶಪ್ಪ, ಎಂ. ಗಂಗಾರಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts