More

    ಪೂರಕ ಪರೀಕ್ಷೆ ದಾರಿದೀಪವಾಗಲಿ

    ಮೊಳಕಾಲ್ಮೂರು: ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ಸಾಧಿಸಲು ಫೆಬ್ರವರಿಯಲ್ಲಿ ನಡೆಯುವ ಪೂರಕ ಪರೀಕ್ಷೆ ಮಕ್ಕಳಿಗೆ ದಿಕ್ಸೂಚಿಯಾಗುವಂತೆ ಸಿದ್ಧತೆ ನಡೆಸಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ನರಸಿಂಹಪ್ಪ ಮುಖ್ಯ ಶಿಕ್ಷಕರಿಗೆ ತಾಕೀತು ಮಾಡಿದರು.

    ಇಲ್ಲಿನ ಕೇಂದ್ರೀಯ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸಿದ್ಧತೆ ಕುರಿತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

    ವರ್ಷವಿಡೀ ಪಾಠ ಮಾಡಿದ್ದೇವೆ, ವಿದ್ಯಾರ್ಥಿಗಳು ಪರೀಕ್ಷೆ ಬರೆದು ಪಾಸಾಗುತ್ತಾರೆ ಎಂಬ ಉದಾಸೀನ ಬೇಡ. ಫೆ.17ರಿಂದ 24ರ ವರೆಗೆ ನಡೆಯುವ ಪೂರಕ ಪರೀಕ್ಷೆ ಪಾರದರ್ಶಕವಾಗಿರಬೇಕು ಎಂದರು.

    ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಅದಕ್ಕಾಗಿ ಪ್ರಶ್ನೆ ಪತ್ರಿಕೆಗಳ ರಹಸ್ಯ, ಗೌಪ್ಯತೆ ಮತ್ತು ಭದ್ರತೆಯಿಂದ ಪರೀಕ್ಷೆ ನಡೆಸಿ ಮಕ್ಕಳ ಪ್ರಗತಿ ಮೌಲ್ಯಮಾಪನ ಮಾಡಬೇಕು. ಯಾವ ವಿಷಯಗಳು ಕಠಿಣವಾಗಿವೆ ಎಂಬುದನ್ನು ಮನಗಂಡು ಅವರಿಗೆ ಉತ್ತೇಜನ ನೀಡುವ ಕಾರ್ಯವಾಗಬೇಕು ಎಂದು ಸೂಚಿಸಿದರು.

    ಬಿಇಒ ಎಂ.ಸೋಮಶೇಖರ್ ಮಾತನಾಡಿ, ತಾಲೂಕಿನ 31 ಪ್ರೌಢಶಾಲೆಗಳ 2211 ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲಿ ಕಡ್ಡಾಯ ಹಾಜರಿರಬೇಕು. ಈ ಪರೀಕ್ಷೆ ನಮಗೆ ಲೆಕ್ಕಕ್ಕಿಲ್ಲ ಎಂಬ ಅಸಡ್ಡೆ ತೋರದಂತೆ ಅವರಲ್ಲಿ ಉತ್ತೇಜನ ನೀಡುವ ಕಾರ್ಯ ಶಿಕ್ಷಕರಿಂದಾಗಬೇಕು ಎಂದರು.

    ಬಿಇಒ ಎಂ.ಸೋಮಶೇಖರ್ ಮಾತನಾಡಿ, ಗುರು ಸೇವೆ ದೇವರ ಪೂಜೆಗೂ ಮಿಗಿಲಾದದ್ದು. ಈ ಕಾಯಕದಲ್ಲಿ ಪ್ರಮಾಣಿಕತೆ ಮತ್ತು ಕ್ರಿಯಾಶೀಲ ಹೃದಯವಂತಿಕೆ ತೋರಿ ಮಕ್ಕಳ ಭವಿಷ್ಯದಲ್ಲಿ ಬೆಳಕು ತರುವಂತಹ ಸತ್ಕಾರ್ಯ ಶಿಕ್ಷಕರಿಂದ ಸಾಧ್ಯ ಎಂದರು.

    ಉಪ ಪ್ರಾಚಾರ್ಯ ಎಸ್.ಸುರೇಂದ್ರನಾಥ, ಮುಖ್ಯಶಿಕ್ಷಕರಾದ ಮಲ್ಲಿಕಾರ್ಜುನ, ಸುಚಿತ್ರಾ, ಡಿ.ವಿ.ಕೃಷ್ಣಮೂರ್ತಿ, ಎ.ಷಣ್ಮುಖಪ್ಪ, ಲತೀಫ್ ಮಾಸ್ತರ್, ಮಂಜುನಾಥ್, ಪ್ರಕಾಶ್, ಎನ್.ರಹಮಾನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts