More

    ಲ್ಯಾಪ್‌ಟಾಪ್‌ಗಾಗಿ ತರಗತಿ ಬಹಿಷ್ಕಾರ

    ಮೊಳಕಾಲ್ಮೂರು: ಸರ್ಕಾರ ತಾರತಮ್ಯ ನೀತಿ ಕೈಬಿಟ್ಟು ದ್ವಿತೀಯ ಮತ್ತು ಅಂತಿಮ ಪದವೀಧರರಿಗೂ ಲ್ಯಾಪ್‌ಟಾಪ್ ವಿತರಣೆ ಮಾಡಬೇಕೆಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಸೋಮವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

    ಶಿಕ್ಷಣದ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡ ನಿರ್ಧಾರ ಸರಿಯಾಗಿದೆ. ಆದರೆ, ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್ ಕೊಡುವ ನೀತಿ ಸರಿಯಲ್ಲ. ಕೂಡಲೆ ಈ ತೀರ್ಮಾನ ಹಿಂಪಡೆದು ಎಲ್ಲ ಪದವೀಧರರಿಗೂ ವಿತರಣೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

    ಮಧ್ಯಾಹ್ನದ ವರೆಗೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಸ್ಥಳಕ್ಕೆ ಆಗಮಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.

    ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಈ ಕುರಿತು ಸರ್ಕಾರದ ಉನ್ನತ ಶಿಕ್ಷಣ ಸಚಿವರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

    ವಿದ್ಯಾರ್ಥಿ ಒಕ್ಕೂಟದ ಎಂ.ಪವನ್ ಕುಮಾರ್, ಎಚ್.ಎಸ್.ಮಂಜುನಾಥ, ಎಸ್.ಗೌತಮ, ಎನ್.ಪ್ರವೀಣ್, ವಿಜಯಕುಮಾರ್, ಡಿ.ರಮೇಶ್, ಪಿ.ಜಿ.ಮಹಾಂತೇಶ್, ಜಿ.ಎಸ್.ನಯನಾ, ಎಚ್.ಆರ್.ಹರ್ಷಿತಾ, ಕೀರ್ತನಾ, ಜಿ.ಮಮತಾ, ಬಿ.ಎನ್.ದಿವ್ಯಾ, ಜಿ.ಭೂಮಿಕಾ, ಇ.ಪವಿತ್ರಾ, ಕೆ.ಜಿ.ರೇಣುಕಾ, ಜೆ.ಕವಿತಾ, ಆರ್.ಲಾವಣ್ಯ, ಎ.ಎಸ್.ಶ್ವೇತಾ, ಎಸ್.ಸುಮಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts