More

    ದೇವರ ಎತ್ತುಗಳಿಗೆ ಮೇವು-ನೀರು ಕೊರತೆ

    ಮೊಳಕಾಲ್ಮೂರು: ರಾಯಾಪುರ ಮ್ಯಾಸರಹಟ್ಟಿ ಸಮೀಪದ ಶ್ರೀಶೈಲ ಮಲ್ಲಿಕಾರ್ಜುನ ದೇಗುಲದ 100 ಹಾಗೂ ಒಬಳ ದೇವಾಲಯಕ್ಕೆ ಸೇರಿದ 50 ದೇವರ ಎತ್ತುಗಳು ಮೇವಿನ ಕೊರತೆ ಎದುರಿಸುತ್ತಿವೆ.

    ಒಂದೆಡೆ ಗೋಶಾಲೆಗಳು ಮುಚ್ಚಿವೆ. ಇನ್ನೊಂದೆಡೆ ಅಡವಿಯಲ್ಲೂ ಮೇವು, ನೀರು ಸಿಗದೆ ದೇವರ ಎತ್ತುಗಳು ಸೊರಗುತ್ತಿವೆ. ಸರ್ಕಾರ ತಕ್ಷಣ ನೆರವಿಗೆ ದಾವಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

    ಈ ಮಧ್ಯೆ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯೂ ಕುಸಿದಿದೆ. ಇಷ್ಟು ದಿನ ದಾನಿಗಳು ನೀಡುತ್ತಿದ್ದ ಮೇವಿನಲ್ಲಿ ಪೋಷಣೆ ಮಾಡಲಾಗುತ್ತಿತ್ತು. ಈಗ ಅದಕ್ಕೂ ಬರ ಬಂದಿದೆ.

    ತಾಲೂಕು ಆಡಳಿತ ಇತ್ತ ಗಮನ ಹರಿಸಿ ಸೂಕ್ತ ಮೇವು, ನೀರಿನ ವ್ಯವಸ್ಥೆ ಕಲ್ಪಿಸಲು ಗೋಶಾಲೆ ತೆರೆಯುವಂತೆ ಕಿಲಾರಿಗಳಾದ ಮಾಳಿಗೆ ಮಲ್ಲಯ್ಯ, ಕಾಮಯ್ಯ, ಮುತ್ತಯ್ಯ, ಅಜ್ಜನ ಮಲ್ಲಯ್ಯ, ಗ್ರಾಮಸ್ಥರಾದ ಪೂಜಾರಿ ನಾಗೇಂದ್ರ, ಗಡ್ಡಯ್ಯ, ಪಾಲಜ್ಜ, ಅಜ್ಜನ ಓಬಣ್ಣ ಒತ್ತಾಯಿಸಿದ್ದಾರೆ.

    150 ದೇವರ ಎತ್ತುಗಳಿಗೆ ದಿನಕ್ಕೆ ಎಷ್ಟು ಮೇವು ಅಗತ್ಯವಿದೆ ಎಂದು ಮನವಿ ನೀಡಿದರೆ ಜಿಲ್ಲಾಧಿಕಾರಿಗೆ ಪತ್ರ ಬರೆದು, ಪೂರೈಸಲು ಕ್ರಮಕೈಗೊಳ್ಳಲಾಗುವುದು.
    ಎಂ.ಬಸವರಾಜ್ ತಹಸೀಲ್ದಾರ್

    ದೇವರ ರೆತ್ತುಗಳಿಗೆ ಮೇವು, ನೀರು ಕಲ್ಪಿಸುವ ಶಾಶ್ವತ ಪರಿಹಾರಕ್ಕೆ ಜಿಲ್ಲಾಧಿಕಾರಿ ಮುಂದಾಗಬೇಕು. ಅವುಗಳನ್ನು ಪಾಲನೆ ಮಾಡುವ ಕಿಲಾರಿಗಳಿಗೂ ನೆರವು ಕಲ್ಪಿಸಬೇಕು.
    ಬೆಳಗಲ್ ಈಶ್ವರಯ್ಯಸ್ವಾಮಿ
    ರೈತ ಸಂಘದ ತಾಲೂಕು ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts