More

    ಮೊಳಕಾಲ್ಮೂರಲ್ಲಿ ಲಾಕ್‌ಡೌನ್ ಮತ್ತಷ್ಟು ಬಿಗಿ

    ಮೊಳಕಾಲ್ಮೂರು: ಕರೊನಾ ನಿಯಂತ್ರಣಕ್ಕಾಗಿ ತಾಲೂಕು ಆಡಳಿತ ಶನಿವಾರ ತೆಗೆದುಕೊಂಡ ದಿಢೀರ್ ನಿರ್ಧಾರಕ್ಕೆ ಜನ ಹಾಗೂ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬೆಳಗ್ಗೆ 6 ರಿಂದ 11.30 ರವರೆಗೆ ತರಕಾರಿ, ಹಣ್ಣು, ಹಾಲು, ದಿನಸಿ ಇತ್ಯಾದಿ ವಸ್ತು ಖರೀದಿಸಲು ಸಮಯ ನಿಗದಿ ಮಾಡಲಾಗಿತ್ತು. ಈ ಅವಧಿಯನ್ನು ಅರ್ಧಗಂಟೆ ಕಡಿಮೆ ಮಾಡಿ ತಾಲೂಕು ಆಡಳಿತ ಆದೇಶ ಹೊರಡಿಸಿದ್ದರಿಂದ ವಿವಿಧ ಹಳ್ಳಿಗಳಿಂದ ಅಗತ್ಯ ಸಾಮಗ್ರಿ ಖರೀದಿಸಲೆಂದು ಬಂದವರು ಅನ್ಯದಾರಿಯಿಲ್ಲದೇ ಮರಳಿ ಊರು ಸೇರಬೇಕಾಯಿತು.

    ವಿನಾಕಾರಣವಾಗಿ ತಿರುಗಾಡುತ್ತಿದ್ದ ಬೈಕ್ ಅಥವಾ ಪಾದಚಾರಿಗಳ ಸಂಚಾರಕ್ಕೆ ಬ್ರೇಕ್ ಹಾಕಿದ್ದರಿಂದ ಇಡೀ ಪಟ್ಟಣವೇ ಸ್ತಬ್ದಗೊಂಡಿತು.

    ಒಂದೂವರೆ ತಿಂಗಳಿಂದ ಮನೆಯಲ್ಲೇ ಇದ್ದೇವೆ. ಈಗಲೂ ಇರುತ್ತೇವೆ. ಆದರೆ ಅಗತ್ಯ ವಸ್ತು ಖರೀದಿಗೆ ನಿಗದಿಪಡಿಸಿರುವ ಸಮಯವನ್ನು ಮಧ್ಯಾಹ್ನ 1 ರ ವರೆಗೆ ವಿಸ್ತರಿಸಿ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

    ತಹಸೀಲ್ದಾರ್ ಎಂ.ಬಸವರಾಜ್ ಮಾತನಾಡಿ, ಆಂಧ್ರದಲ್ಲಿ ಕರೊನಾ ಪಾಸಿಟಿವ್ ಕೇಸ್ ಹೆಚ್ಚುತ್ತಿದ್ದರಿಂದ ತಾಲೂಕು ಗಡಿಯ ಎಲ್ಲ ಚೆಕ್‌ಪೋಸ್ಟ್ ಮತ್ತು ಪಟ್ಟಣದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಜನ ನಿಗದಿತ ಸಮಯದಲ್ಲಿ ಅಗತ್ಯ ವಸ್ತು ಖರೀದಿಸಿ ಮನೆ ಸೇರುವ ಮೂಲಕ ಹೋರಾಟಕ್ಕೆ ಸಹಕಾರ ನೀಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts