More

    ಹೆಣ್ಣಿಗೆ ತೊಂದರೆ ಕೊಟ್ರೆ ಶಿಕ್ಷೆ ಖಚಿತ

    ಮೊಳಕಾಲ್ಮೂರು: ಹೆಣ್ಣು ಸಮಾಜದ ಕಣ್ಣು. ಇವರ ಜೀವನದ ಜತೆ ಆಟವಾಡುವ, ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವವರಿಗೆ ಶಿಕ್ಷೆ ಖಚಿತ ಎಂದು ಸಿವಿಲ್ ನ್ಯಾಯಾಧೀಶೆ ಎಸ್.ನಿರ್ಮಲಾ ಹೇಳಿದರು.

    ಇಲ್ಲಿನ ಕನ್ನಡ ಭವನದಲ್ಲಿ ಸೋಮವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಮಹಿಳಾ ದಿನಾಚರಣೆ, ಲೈಂಗಿಕ ದೌರ್ಜನ್ಯ ತಡೆ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮಕ್ಕಳು ಮತ್ತು ಮಹಿಳೆಯರ ರಕ್ಷಣೆ, ಸುರಕ್ಷತೆಗಾಗಿ ಕಠಿಣ ಕಾನೂನುಗಳಿವೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಗಂಡು ಹೆಣ್ಣೆಂಬ ತಾರತಮ್ಯ ನೀತಿ ಅನುಸರಣೆ, ಗರ್ಭಪಾತದಂತಹ ಅಮಾನವೀಯ ಕೃತ್ಯಕ್ಕೆ ಕಾನೂನಿನಡಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.

    ಹೆಣ್ಣಿಗೆ ಶಿಕ್ಷಣ ಅಗತ್ಯ. ಇದನ್ನು ಪಡೆದರೆ ಬದುಕಿನ ಹಕ್ಕು ಪಡೆದುಕೊಳ್ಳಲು, ಎದುರಾಗುವ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ. ಬಾಲ್ಯ ವಿವಾಹ, ಜೀತ ಪದ್ಧತಿ ನಿರ್ಮೂಲನೆಗೆ ಶಿಕ್ಷಣ ಬೇಕು ಎಂದರು.

    ವಕೀಲೆ ಎಂ.ಎನ್.ವಿಜಯಲಕ್ಷ್ಮಿ ಮಾತನಾಡಿ, ಹೆಣ್ಣನ್ನು ಮನೆ ಕೆಲಸದಾಕೆ, ಗಂಡನ ಅಡಿಯಾಳೆಂದು ಭಾವಿಸುವ ರೀತಿ ಬದಲಾಗಬೇಕು. ಸ್ತ್ರೀಯೂ ಪುರುಷನಷ್ಟೇ ಸ್ವತಂತ್ರಳೆಂಬುದನ್ನು ಎಲ್ಲರೂ ಮನಗಾಣಬೇಕು ಎಂದು ತಿಳಿಸಿದರು.

    ವಕೀಲರ ಸಂಘದ ಅಧ್ಯಕ್ಷ ಪಿ.ಪಾಪಯ್ಯ, ಕಾರ್ಯದರ್ಶಿ ಜಿ.ಮಂಜುನಾಥ, ಸಿಡಿಪಿಒ ಸವಿತಾ, ಜರೀನಾಬಾನು, ಲೀಲಾಬಾಯಿ, ಲಕ್ಷ್ಮೀದೇವಿ, ವಕೀಲರಾದ ಅನಂತಮೂರ್ತಿ, ಕೆ.ಎಂ.ರಾಮಾಂಜಿನಿ, ರಾಘವೇಂದ್ರ, ಯರ‌್ರಿಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts