More

    ಮೋದಿಯಿಂದ ಸದೃಢ ದೇಶ ನಿರ್ಮಾಣ

    ಹಗರಿಬೊಮ್ಮನಹಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೊಡುಗೆಯನ್ನು ಮನೆ-ಮನಗಳಿಗೆ ತಲುಪಿಸುವುದೇ ಗ್ರಾಮ ಚಲೋ ಅಭಿಯಾನದ ಮುಖ್ಯಉದ್ದೇಶ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಹೇಳಿದರು.

    ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಡಲ ಬಿಜೆಪಿಯಿಂದ ಏರ್ಪಡಿಸಿದ್ದ ಅಭಿಯಾನಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿ ನರೇಂದ್ರ ಮೋದಿ ಕೈಬಲಪಡಿಸುವ ಕೆಲಸಕ್ಕೆ ಕಾರ್ಯಕರ್ತರು ಸಿದ್ಧರಾಗಬೇಕಿದೆ.

    ಆಯುಷ್ಮಾನ್ ಭಾರತ್, ಜಲಜೀವನ್ ಮಿಷನ್, ಕಿಸಾನ್ ಸಮ್ಮಾನ್, ನಾರಿಶಕ್ತಿ ಅಧಿನಿಯಮ, ಉಜ್ವಲ್ ಯೋಜನೆ, ಜನೌಷಧಿ ಕೇಂದ್ರಗಳು ಸೇರಿದಂತೆ ಅನೇಕ ಯೋಜನೆಗಳು ಬಡವರ್ಗದ ಜನರಿಗೆ ವರದಾನವಾಗಿವೆ. ದೇಶದಲ್ಲಿ ಸಾಮಾನ್ಯ ಜನರಿಗೂ ಮೋದಿ ಕಾರ್ಯವೈಖರಿ ಇಷ್ಟವಾಗಿದೆ.

    ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಮಾತ್ರವೇ ದೇಶವನ್ನು ಸದೃಢಗೊಳಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಯಾರೂ ಪತನಗೊಳಿಸುವ ಅಗತ್ಯವಿಲ್ಲ. ಕಾಂಗ್ರೆಸಿನವರಿಂದಲೇ ಅದು ಪತನವಾಗಲಿದೆ ಎಂದರು.

    ಇದನ್ನೂ ಓದಿ: ಮೂಡ್​ ಆಫ್​ ದಿ ನೇಷನ್​ ಸಮೀಕ್ಷೆ: ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ದರ್ಬಾರ್

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿ ರಾಮಣ್ಣ ಮಾತನಾಡಿ, ಜಗತ್ತಿನ ವಿಶ್ವಾಸಾರ್ಹತೆಯ ಏಕೈಕ ವ್ಯಕ್ತಿ ಎಂದರೆ ನರೇಂದ್ರ ಮೋದಿ. ಕಾಂಗ್ರೆಸ್ ಸರ್ಕಾರ ಗರೀಭಿ ಹಠಾವೋ ಎಂದು ಬಾಯಿ ಮಾತಲ್ಲಿ ಮಾತ್ರ ಹೇಳಿದೆ. ಬಡವರ್ಗದ ಜನರ ಆರ್ಥಿಕವೃದ್ಧಿಗೆ ಮೋದಿ ದೂರದೃಷ್ಟಿ ಯೋಜನೆಗಳು ಸಾಕಾರವಾಗಲಿವೆ ಎಂದರು.

    ಎಸ್.ಎಂ.ವೀರೇಶ್ವರ ಸ್ವಾಮಿಯಿಂದ ನೂತನ ಅಧ್ಯಕ್ಷ ಬೆಣ್ಣಿಕಲ್ಲು ಪ್ರಕಾಶ್‌ಗೆ ಬಿಜೆಪಿ ಬಾವುಟ ಹಸ್ತಾಂತರಿಸುವ ಮೂಲಕ ಪದಗ್ರಹಣ ನಡೆಯಿತು. ರಾಜ್ಯ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಮಹಾಲಕ್ಷ್ಮೀ ಕಂದಾರಿ, ನಿಕಟಪೂರ್ವ ಮಂಡಲ ಅಧ್ಯಕ್ಷ ಎಸ್.ಎಂ.ವೀರೇಶ್ವರ ಸ್ವಾಮಿ, ಮಂಡಲ ಅಧ್ಯಕ್ಷ ಬೆಣ್ಣಿಕಲ್ಲು ಪ್ರಕಾಶ್ ಮಾತನಾಡಿದರು.

    ವಿಭಾಗೀಯ ಸಂಘಟನಾ ಕಾರ್ಯದರ್ಶಿ ಪೂಜಪ್ಪ, ಜಿಲ್ಲಾ ಕಾರ್ಯದರ್ಶಿ ಪಿ.ಎಚ್.ಕೊಟ್ರೇಶ್, ಕೊಟ್ಟೂರು ನಗರ ಘಟಕ ಅಧ್ಯಕ್ಷ ಭರಮನಗೌಡ, ಜಿಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯ್ಕ, ಮಂಡಲ ಮಾಜಿ ಅಧ್ಯಕ್ಷ ನರೇಗಲ್ ಕೊಟ್ರೇಶ್, ಗ್ರಾಮ ಚಲೋ ಮಂಡಲ ಸಂಚಾಲಕ ನರೇಗಲ್ ಮಲ್ಲಿಕಾರ್ಜುನ, ಮರಿಯಮ್ಮನಹಳ್ಳಿ ರಾಘವೇಂದ್ರ ಶೆಟ್ಟಿ, ನೇತಾಜಿ ಗೌಡ್ರು,

    ಯುವಮೋರ್ಚಾದ ತಾಲೂಕು ಅಧ್ಯಕ್ಷ ದಿವಾಕರ್ ಗೌಡ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಗುಂಡಾ ಕೃಷ್ಣ, ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಕರಿಬಸವರಾಜ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಂದಮ್ಮ, ಪುರಸಭೆ ಸದಸ್ಯರಾದ ಆರ್.ಕಮಲಮ್ಮ, ಜೋಗಿ ಹನುಮಂತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts