More

    ಮೈಸೂರಿನಲ್ಲಿ ಮೋದಿ ರೋಡ್ ಶೋ

    ಮೈಸೂರಿನಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಬ್ಬರದ ರೋಡ್ ಶೋ ನಡೆಸಿದರು. ವಿಶ್ವವಿಖ್ಯಾತ ನಾಡಹಬ್ಬ ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿಯೇ ಮೋದಿ ಸಾಗಿದರು. ಮಾರ್ಗದ ಉದ್ದಕ್ಕೂ ನಿಂತಿದ್ದ ಸಾವಿರಾರು ಜನರು ಮೋದಿಯನ್ನು ನೋಡಿ ಸಂಭ್ರಮಿಸಿದರು.

    ಹಾಸನದ ಬೇಲೂರಿನಿಂದ ಹೆಲಿಕಾಪ್ಟರ್‌ನಲ್ಲಿ ನಗರದ ಒವಲ್ ಮೈದಾನದಲ್ಲಿ ನಿರ್ಮಿಸಿದ ಹೆಲಿಪ್ಯಾಡ್‌ಗೆ ಆಗಮಿಸಿದ ನರೇಂದ್ರ ಮೋದಿ ನಂತರ ಕಾರಿನಲ್ಲಿ ಒವಲ್ ಮೈದಾನದಿಂದ ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆಯ ಮೂಲಕವಾಗಿ ಗನ್‌ಹೌಸ್ ಬಳಿಗೆ ಆಗಮಿಸಿದರು.

    5 ಕಿ.ಮೀ. ರೋಡ್ ಶೋ

    ಗನ್‌ಹೌಸ್‌ನಿಂದ ಸಂಜೆ 6.30ಕ್ಕೆ ತೆರೆದ ವಾಹನದಲ್ಲಿ ಮೋದಿ ರೋಡ್ ಶೋ ಪ್ರಾರಂಭಿಸಿದರು. ರೋಡ್ ಶೋ ಬಸವೇಶ್ವರ ವೃತ್ತ, ಸಂಸ್ಕೃತ ಪಾಠ ಶಾಲೆ, ಕೆ.ಆರ್. ವೃತ್ತ, ನ್ಯೂ ಸಯ್ಯಜಿರಾವ್ ರಸ್ತೆ, ಆಯುರ್ವೇದ ವೃತ್ತ ಮೂಲಕ ಸಾಗಿ ಹೈವೇ ವೃತ್ತದಲ್ಲಿ ರಾತ್ರಿ 7.42ಕ್ಕೆ ಅಂತ್ಯಗೊಂಡಿತು. ಮೋದಿ ಒಟ್ಟು 5 ಕಿ.ಮೀ. ರೋಡ್ ಶೋ ನಡೆಸಿದರು. ಇವರಿಗೆ ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಎಸ್.ಎ. ರಾಮದಾಸ್, ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು.

    ಮಾರ್ಗದ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಮೋದಿಯತ್ತ ಪುಷ್ಪ ವೃಷ್ಟಿ ಮಾಡಿದರು. ಇದಕೋ ಸ್ಕರ 1 ಟನ್ ಹೂ ಬಳಕೆ ಮಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ರಸ್ತೆಯ ಎರಡು ಬದಿಯಲ್ಲಿ ನಿಂತು ಮೋದಿಯನ್ನು ನೋಡಿ ಸಂಭ್ರಮಿಸಿದರು. ಎಲ್ಲರು ‘ಮೋದಿ ಮೋದಿ’ ಎಂದು ಘೋಷಣೆ ಕೂಗುವ ಮೂಲಕ ಸಂಭ್ರಮ ವ್ಯಕ್ತ ಪಡಿಸಿದರು.

    ಮೋದಿಗೆ ಸಾಂಪ್ರದಾಯಿಕ ಸ್ವಾಗತ

    ನಗರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಮೈಸೂರು ವೀಳ್ಯದೆಲೆ, ಮೈಸೂರು ಪಾಕ್, ಗಂಧದ ಕಡ್ಡಿ, ಮೈಸೂರು ರೇಷ್ಮೆ, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಪೇಟ, ಮೈಸೂರು ಅರಮನೆಯ ಕಲಾಕೃತಿ, ಶ್ರೀಗಂಧದ ಎಣ್ಣೆ, ರೇಷ್ಮೆಯ ಪಂಚೆ, ವಲ್ಲಿ ನೀಡಿ ಸ್ವಾಗತಿಸಲಾಯಿತು. ರೋಡ್ ಶೋಗೆ ವಿವಿಧ ಕಲ ತಂಡಗಳು ಮೆರಗು ನೀಡಿತು. ಒಟ್ಟು 25 ಕಲಾ ತಂಡಗಳು ರೋಡ್ ಶೋನಲ್ಲಿ ಭಾಗವಹಿಸಿ ನಾಡಿನ ಸಂಸ್ಕೃತಿಯನ್ನು ಅನಾವರಣಗೊಳಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts