More

    ರಕ್ಷಾಬಂಧನ ಹಬ್ಬಕ್ಕೆ ಬರುತ್ತಿದೆ ಮೋದಿ ರಾಖಿ; ಕೊಡಲಿದೆ ಚೀನಾ ರಾಖಿಗೆ ಡಿಚ್ಚಿ

    ನವದೆಹಲಿ: ಶ್ರಾವಣ ಮಾಸ ಆರಂಭವಾಗಿದ್ದು, ಸಹೋದರ-ಸಹೋದರಿಯರು ಕಾತರದಿಂದ ಕಾಯುವ ರಕ್ಷಾಬಂಧನ ಹಬ್ಬವೂ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಗೆ ಬಗೆಯ ರಾಖಿಗಳು ಈಗಾಗಲೆ ಮಾರುಕಟ್ಟೆಗೆ ದಾಂಗುಡಿ ಇಡಲಾರಂಭಿಸಿವೆ. ಈ ಬಾರಿ ಮಾರುಕಟ್ಟೆಯನ್ನು ಪ್ರವೇಶಿಸಿರುವ ಹಿಂದೂಸ್ತಾನಿ ರಾಖಿಗಳು ಚೀನಾದ ರಾಖಿಗಳಿಗೆ ಡಿಚ್ಚಿ ಕೊಡಲು ಸಜ್ಜಾಗುತ್ತಿವೆ.

    ಅಖಿಲ ಭಾರತ ವರ್ತಕರ ಮಹಾಒಕ್ಕೂಟ (ಸಿಎಐಟಿ) ಮೋದಿ ರಾಖಿಗಳನ್ನು ತಯಾರಿಸುವ ಮೂಲಕ ಈ ಬಾರಿ ರಕ್ಷಾಬಂಧನ ಹಬ್ಬಕ್ಕೆ ಸಂಪೂರ್ಣ ದೇಶಿಯ ಸ್ಪರ್ಶ ನೀಡಲು ಮುಂದಾಗಿದೆ. ತನ್ಮೂಲಕ ಚೀನಾದ ರಾಖಿಗಳ ಪೈಪೋಟಿಯನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಪ್ರಯತ್ನಿಸಿದೆ.

    ಮೋದಿ ರಾಖಿಗೆ ಭಾರಿ ಬೇಡಿಕೆ: ಪೂರ್ವ ಲಡಾಖ್​ನಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬಿದ್ದಿರುವ ಚೀನಾ ವಿರೋಧಿ ಮನೋಭಾವ ದೇಶದೆಲ್ಲಡೆ ದಟ್ಟವಾಗಿ ಹಬ್ಬಿದೆ. ಪ್ರತಿವರ್ಷ ಚೀನಾದಿಂದ ತರಹಾವಾರಿ ರಾಖಿಗಳು ಬರುತ್ತಿದ್ದವು. ಆದರೆ, ಈ ಬಾರಿ ಚೀನಾದ ರಾಖಿಗಳಿಗೆ ಮಾರುಕಟ್ಟೆ ಪ್ರವೇಶಿಸಲು ಅವಕಾಶ ಮಾಡಿಕೊಡದಿರಲು ಹಿಂದೂಸ್ತಾನಿ ರಾಖಿಗಳು ಸಜ್ಜಾಗಿವೆ. ಅದರಲ್ಲೂ ವಿಶೇಷವಾಗಿ ಮೋದಿ ರಾಖಿಗೆ ದೇಶದೆಲ್ಲಡೆಯಿಂದ ಭಾರಿ ಬೇಡಿಕೆ ಬರಲಾರಂಭಿಸಿದೆ ಎಂದು ಸಿಎಐಟಿ ತಿಳಿಸಿದೆ.

    ಇದನ್ನೂ ಓದಿ: ಎಲ್ಲೆಡೆ ನಾಗಚೌತಿ ಸಂಭ್ರಮ, ನಾಗರಕಲ್ಲುಗಳಿಗೆ ಹಾಲೆರೆದ ಭಕ್ತರು; ಕರೊನಾ ಶಮನಕ್ಕೆ ಪ್ರಾರ್ಥನೆ

    ಹೀಗಿರಲಿವೆ ಮೋದಿ ರಾಖಿ: ಮೋದಿ ರಾಖಿಗಳ ಮೇಲೆ ಅಲ್ಯುಮಿನಿಯಂ, ಕಾಪರ್​ ಅಥವಾ ಬೆಳ್ಳಿಯ ಹಾಳೆಯ ಮೇಲೆ ಪ್ರಧಾನಿ ಮೋದಿ ಅವರ ಚಿತ್ತಾರ ಇರುತ್ತದೆ. ಇದನ್ನು ದಾರ ಬಳಸಿ ಕಟ್ಟಬಹುದಾಗಿದೆ. ಮೊದಲಿಗೆ ದೆಹಲಿಯಲ್ಲಿ ಇದರ ಮಾರಾಟ ಆರಂಭವಾಯಿತು. ಇಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ಬಳಿಕ ವಿವಿಧ ರಾಜ್ಯಗಳಿಂದ ಬೇಡಿಕೆ ಬರಲಾರಂಭಿಸಿತು. ಇದೀಗ ದೇಶದ ಎಲ್ಲ ಭಾಗಗಳಿಂದಲೂ ಬೇಡಿಕೆ ಬರುತ್ತಿದೆ ಎಂದು ಸಿಎಐಟಿ ತಿಳಿಸಿದೆ.

    ಮೋದಿ ರಾಖಿಯ ಜತೆಗೆ ಈ ಬಾರಿ ಬೀಜ, ಧಾನ್ಯ, ಗೋಧಿ, ಅಕ್ಕಿ, ಉಣ್ಣೆ, ಬಟ್ಟೆಗಳು, ರೇಶ್ಮೆ, ಮಧುಬನಿ ಪೇಟಿಂಗ್ಸ್​​, ಬಡುಕಟ್ಟು ಉತ್ಪನ್ನಗಳು, ಎಲೆ, ತುಳಸಿ, ಮಣಿ, ಮುತ್ತು ಇತ್ಯಾದಿ ವಸ್ತುಗಳಿಂದಲೂ ರಾಖಿಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿರುವುದಾಗಿ ಹೇಳಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಸ್ಥಳೀಯ ಉತ್ಪನ್ನಗಳ ಬಳಕೆ ಮತ್ತು ಆತ್ಮನಿರ್ಭರ ಭಾರತ ಅಭಿಯಾನದನ್ವಯ ಈ ಉತ್ಪನ್ನಗಳನ್ನು ಸಿದ್ಧಪಡಿಸಲಾಗಿದೆ. ಸ್ಥಳೀಯವಾಗಿ ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಜನರನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದೆ.

    ಇದನ್ನೂ ಓದಿ: 29 ರಂದು ಜಿಲ್ಲಾ ಮಟ್ಟದ ಹೋರಾಟಕ್ಕೆ ನಿರ್ಧಾರ, ಆಶಾ ಕಾರ್ಯಕರ್ತೆಯರ ಸಂಘ ಎಚ್ಚರಿಕೆ

    ಎಲ್ಲಕ್ಕಿಂತ ಮುಖ್ಯವಾಗಿ ಈ ರಾಖಿಗಳನ್ನು ವಿವಿಧ ರಾಜ್ಯಗಳ ಗೃಹಿಣಿಯರು, ಅಂಗನವಾಡಿ ಕಾರ್ಯಕರ್ತೆಯರು, ಕೋವಿಡ್​-19 ಪಿಡುಗಿನಿಂದ ಉದ್ಯೋಗ ಕಳೆದುಕೊಂಡಿರುವ ಪುರುಷರು ಮತ್ತು ಮಹಿಳೆಯರು ಸೇರಿ ಇನ್ನೂ ಅನೇಕರು ಮೋದಿ ರಾಖಿ ಸೇರಿ ಎಲ್ಲ ಬಗೆಯ ರಾಖಿಗಳನ್ನು ತಯಾರಿಸಿರುವುದಾಗಿ ಹೇಳಿದೆ.

    ಈ ರಾಖಿಗಳನ್ನು ವಾಣಿಜ್ಯ ಸಂಘಟನೆಗಳ ಮೂಲಕ ದೇಶಾದ್ಯಂತ ಸರಬರಾಜು ಮಾಡಲಾಗುತ್ತಿದೆ. ಸಿಎಐಟಿಯೊಂದಿಗೆ ಗುರುತಿಸಿಕೊಂಡಿರುವ ಮಹಿಳಾ ಉದ್ಯಮಿಗಳು ರಾಖಿಯನ್ನು ತಯಾರಿಸುವ ಜತೆಗೆ ಅವುಗಳ ವಿತರಣೆ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.

    ವಿಸ್ಡನ್​ ಟ್ರೋಫಿಗೆ ವಿದಾಯ, ಇಂಗ್ಲೆಂಡ್​-ವಿಂಡೀಸ್​ ಟೆಸ್ಟ್​ ಸರಣಿಗೆ ಇನ್ನು ಹೊಸ ಹೆಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts