More

    ವಾರಕ್ಕೆ 4 ದಿನ ಕೆಲಸ, 3 ದಿನ ರಜೆ! ಕೇಂದ್ರದ ನೂತನ ಕಾರ್ಮಿಕ ಸಂಹಿತೆಯಲ್ಲಿ ಏನಿರಲಿದೆ?

    ನವದೆಹಲಿ: ದೇಶದ ಕಾರ್ಮಿಕರ ಒಳಿತಿಗಾಗಿ ನೂತನ ಕಾರ್ಮಿಕ ಸಂಹಿತೆಯನ್ನು ಹೊರತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ. ವಾರದಲ್ಲಿ ನಾಲ್ಕು ದಿನ ಕೆಲಸ ಹಾಗೂ ಮೂರು ದಿನ ರಜೆ, ಉಚಿತ ವೈದ್ಯಕೀಯ ತಪಾಸಣೆಯನ್ನು ಸಂಹಿತೆಯಲ್ಲಿ ಅಳವಡಿಸುವ ಸಾಧ್ಯತೆಗಳು ಇದೆ ಎನ್ನಲಾಗಿದೆ.

    ನೂತನ ಸಂಹಿತೆಯ ಕುರಿತಾಗಿ ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಅಪೂರ್ವಾ ಚಂದ್ರ ಮಾತನಾಡಿದ್ದಾರೆ. ವಾರಕ್ಕೆ 48 ಗಂಟೆಗಳ ಕಾಲ ಕೆಲಸ ಮಾಡುವ ನಿಯಮವನ್ನು ತೆಗೆದುಹಾಕಲಾಗುವುದಿಲ್ಲ. ದಿನಕ್ಕೆ 12 ತಾಸಿನ ಲೆಕ್ಕದಲ್ಲಿ ನಾಲ್ಕು ದಿನ ಕೆಲಸ ಹಾಗೂ ಮೂರು ದಿನ ವೇತನ ಸಹಿತ ರಜೆ ನೀಡುವ ಯೋಜನೆಯಿದೆ. ಕಂಪನಿ ಮತ್ತು ಕಾರ್ಮಿಕರ ಒಪ್ಪಿಗೆಯ ಮೇರೆಗೆ ಈ ನಿಯಮವನ್ನು ಅಳವಡಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. 12 ಗಂಟೆಗಳ ಕಾಲ ಕೆಲಸ ಮಾಡುವುದು ಸಾಧ್ಯವಿಲ್ಲದ ಕೆಲಸ ಎಂದೂ ಅವರು ತಿಳಿಸಿದ್ದಾರೆ.

    ಕೆಲಸದ ಅವಧಿ ಹೆಚ್ಚಿಸಿದರೆ ರಜೆಯನ್ನೂ ಹೆಚ್ಚಿಸಲಾಗುವುದು. ಅದರ ಜತೆಯಲ್ಲಿ ರಾಜ್ಯ ವಿಮೆಯ ಮೂಲಕ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆಗಳನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ. ಅಲ್ಲದೆ, ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಗಾಗಿ ಕಾರ್ಮಿಕ ಸಚಿವಾಲಯವು ಮೇ ಅಥವಾ ಜೂನ್ ವೇಳೆಗೆ ವೆಬ್ ಪೋರ್ಟಲ್ ಅನ್ನು ಸ್ಥಾಪಿಸಲಿದೆ. ವೇತನದ ಕುರಿತು ನೀತಿಗಳನ್ನು ರೂಪಿಸಲು ಅನುಕೂಲವಾಗುವಂತೆ ವಲಸಿಗರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಯ ಸರಿಯಾದ ಮಾಹಿತಿ ಬೇಕಾಗಲಿದೆ. ಮಾಹಿತಿ ಸಂಗ್ರಹಿಸಲು ಪೋರ್ಟಲ್​ನಿಂದ ಸಾಧ್ಯವಾಗಲಿದೆ. ಹಾಗೆಯೇ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಕಾರ್ಮಿಕರಿಗೆ ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ಅಪಘಾತಗಳು ಮತ್ತು ವಿಕಲಾಂಗರಿಗೆ ವಾರ್ಷಿಕ ಉಚಿತ ವಿಮೆ ನೀಡಲಾಗುವುದು ಎಂದು ಅಪೂರ್ವಾ ಚಂದ್ರ ಹೇಳಿದರು. (ಏಜೆನ್ಸೀಸ್​)

    ‘ಟ್ರಂಪ್​ ಜತೆಗಿನ ಸೆಕ್ಸ್​ ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣಗಳು!’ ಮಾಜಿ ಅಧ್ಯಕ್ಷನೊಂದಿಗಿನ ರಹಸ್ಯ ಬಿಚ್ಚಿಟ್ಟ ನೀಲಿತಾರೆ

    ಕೈ ಕಟ್ಟಿಕೊಂಡು ನರ್ಮದಾಗೆ ಹಾರಿದ ಪ್ರೇಮಿಗಳು! ಹೊಲದಲ್ಲಿ ಅರಳಿದ್ದ ಪ್ರೀತಿ ನೀರಲ್ಲಿ ಅಂತ್ಯವಾಯ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts