More

    ಆ ರೀತಿ ಮತ ಪಡೆಯುವುದು ಸುಲಭ, ಆದರೆ..: ಹೀಗಂದಿದ್ದೇಕೆ ಪ್ರಧಾನಿ ಮೋದಿ?

    ಜಾರ್ಖಂಡ್​: ನಾನು ಈ ಹಿಂದೆ ದೇವಘರ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಬಂದಿದ್ದೆ. ಈಗ ಅದನ್ನು ಉದ್ಘಾಟನೆ ಮಾಡುತ್ತಿದ್ದೇನೆ. ಈ ಹಿಂದೆ ಯೋಜನೆಗಳ ಘೋಷಣೆಯಾಗಿ 2-3 ಸರ್ಕಾರಗಳ ಬದಲಾವಣೆ ಬಳಿಕ ಶಂಕುಸ್ಥಾಪನೆ ನಡೆಯುತ್ತಿತ್ತು. ನಂತರ 2-3 ಸರ್ಕಾರಗಳ ಬಳಿಕ ಯೋಜನೆ ಕಾರ್ಯರೂಪಕ್ಕೆ ಬಂದು ಕೊನೆಗೂ ಕೆಲವು ಸರ್ಕಾರಗಳ ಬದಲಾವಣೆ ನಂತರ ಅದು ಪೂರ್ಣವಾಗುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

    ಇಂದು ಜಾರ್ಖಂಡ್​ನಲ್ಲಿ ಬಾಬಾ ಬೈದ್ಯನಾಥ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ದೇವಘರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಉದ್ಘಾಟನೆ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು. ಇಂದು ನಾವು ಯಾವ ರೀತಿಯ ಕೆಲಸ ಹಾಗೂ ರಾಜಕೀಯ ಸಂಸ್ಕೃತಿ ಮತ್ತು ಆಡಳಿತ ಮಾದರಿ ಬೆಳೆಸಿದ್ದೇವೆ ಎಂದರೆ ನಾವು ಶಂಕು ಸ್ಥಾಪನೆ ಮಾಡಿದ್ದ ಎಲ್ಲವನ್ನೂ ಉದ್ಘಾಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

    ಬಳಿಕ ಇಂದಿನ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡಿದ ಅವರು, ಅಡ್ಡದಾರಿ (ಶಾರ್ಟ್ ಕಟ್​) ರಾಜಕೀಯ ಇಂದಿನ ದೊಡ್ಡ ಸವಾಲು. ಏಕೆಂದರೆ ಅಡ್ಡದಾರಿಯ ರಾಜಕೀಯದಿಂದ ಮತಗಳಿಕೆ ಸುಲಭ. ದೇಶದ ರಾಜಕೀಯ ಶಾರ್ಟ್​ಕಟ್​ ಮೇಲೆ ಅವಲಂಬಿತವಾಗಿದ್ದರೆ ಅದು ಅಂತಿಮವಾಗಿ ಶಾರ್ಟ್​ ಸರ್ಕ್ಯೂಟ್​ ಎನಿಸಿಕೊಳ್ಳುತ್ತಿದೆ. ಅಂಥ ರಾಜಕೀಯದಿಂದ ನಾವು ದೂರ ಇರಬೇಕು ಎಂದು ಮೋದಿ ಕಿವಿಮಾತು ಹೇಳಿದರು.

    ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..

    ಹಾಡಹಗಲೇ ನಗರಸಭೆ ಮಾಜಿ ಅಧ್ಯಕ್ಷನ ಬರ್ಬರ ಕೊಲೆ; ಹೊಟ್ಟೆಗೆ ತಲವಾರ್ ಚುಚ್ಚಿಟ್ಟು ಹಾಗೇ ಹೋದ ಹಂತಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts