More

    ಕರೊನಾ ಲಸಿಕೆ ಫಲಿತಾಂಶದ ಬೆನ್ನಲ್ಲೇ 10 ಸಾವಿರ ಕೋಟಿ ರೂ. ಬಾಚಿಕೊಳ್ಳಲು ಮುಂದಾದ ಕಂಪನಿ

    ನ್ಯೂಯಾರ್ಕ್​: ಅಮೆರಿಕನ್​ ಬಯೋಟೆಕ್ನಾಲಜಿ ಕಂಪನಿ ಮಾಡೆರ್ನಾ ಕಂಪನಿ ಸದ್ಯ ಷೇರು ಮಾರುಕಟ್ಟೆಯಲ್ಲಿ ಸಂಚಲನವನ್ನೇ ಮೂಡಿಸಿದೆ. ಇದರ ಷೇರು ಮೌಲ್ಯ ಶೇ.39ರಷ್ಟು ಹೆಚ್ಚಾಗಿ 80 ಡಾಲರ್​ಗೆ ತಲುಪಿದೆ. ಅಂದರೆ 6,050 ರೂ.ಗೆ ಮುಟ್ಟಿದೆ.

    ಕರೊನಾಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ಸಂಶೋಧನಾ ಕರ್ಯಗಳನ್ನು ಕೈಗೊಂಡ ಕಂಪನಿ ಎಲ್ಲರಿಗಿಂತ ಮೊದಲು ಕ್ಲಿನಿಕಲ್​ ಟ್ರಯಲ್​ ಹಂತಕ್ಕೆ (ಮಾನವರ ಮೇಲೆ ಲಸಿಕೆ ಪ್ರಯೋಗ) ತಲುಪಿತು. ಈಗ ಮೊದಲ ಹಂತದ ಫಲಿತಾಂಶವೂ ಪ್ರಕಟವಾಗಿ ಕರೊನಾ ವೈರಸ್​ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸುವಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಕಂಪನಿ ಹೇಳಿದೆ.

    ಇದನ್ನೂ ಓದಿ; ಬಾಂಗ್ಲಾದಲ್ಲಿ ಕರೊನಾ ರೋಗಿಗಳು ನಾಲ್ಕೇ ದಿನಕ್ಕೆ ಚೇತರಿಕೆ…! ಪವಾಡವನ್ನೇ ಮಾಡಿದೆ ಈ ಔಷಧ 

    ಇದಾಗುತ್ತಿದ್ದಂತೆ ಕಂಪನಿಯ ಷೇರು ಮೌಲ್ಯದಲ್ಲಿ ಭಾರಿ ಹೆಚ್ಚಳ ಕಂಡುಬಂದಿತು. ಈಗ ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಕಂಪನಿ 26.40 ಲಕ್ಷ ಷೇರುಗಳ ಮಾರಾಟಕ್ಕೆ ಮುಂದಾಗಿದೆ. ಪ್ರತಿ ಷೇರಿಗೆ 76 ಡಾಲರ್​ (5,749 ರೂ.) ಬೆಲೆ ನಿಗದಿಪಡಿಸಿದ್ದು, 1.34 ಬಿಲಿಯನ್​ ಡಾಲರ್​ (10 ಸಾವಿರ ಕೋಟಿ ರೂ.ಗೂ ಹೆಚ್ಚು) ಬಂಡವಾಳ ಸಂಗ್ರಹಕ್ಕೆ ಮುಂದಾಗಿದೆ. ಬೃಹತ್​ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆ ಹಾಗೂ ವಿತರಣಾ ವ್ಯವಸ್ಥೆ ಹೊಂದಲು ಈ ಮೊತ್ತವನ್ನು ಖರ್ಚು ಮಾಡುವುದಾಗಿ ಕಂಪನಿ ಘೋಷಿಸಿದೆ.

    ಕಂಪನಿಯು ಎರಡನೇ ಹಂತದ ಪರೀಕ್ಷೆ ಶೀಘ್ರವೇ ಆರಂಭಿಸಲಿದೆ. ಕರೊನಾ ವೈರಸ್​ ಜಗತ್ತಿನಾದ್ಯಂತ ಇನ್ನಿಲ್ಲದಂತೆ ವ್ಯಾಪಿಸುತ್ತಿದ್ದು, ಅಗತ್ಯ ಎದುರಾದರೆ ತುರ್ತು ಲಸಿಕೆಯನ್ನು ಸಿದ್ಧವಾಗಿರಿಸಲು ಕಂಪನಿ ನಿರ್ಧರಿಸಿದೆ. ಈ ಎಲ್ಲ ಕಾರಣಗಳಿಂದಾಗಿ ಕಂಪನಿ ಷೇರುಗಳಿಗೆ ಬೇಡಿಕೆ ಹುಟ್ಟಿಕೊಂಡಿದೆ.

    ಕರೊನಾ ಲಸಿಕೆ ಮಾನವರ ಮೇಲೂ ಯಶಸ್ವಿ..! ವರ್ಷಾಂತ್ಯಕ್ಕೆ ಬಳಕೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts